Advertisement

ಉಪವಾಸನಿರತ ನಾಯಕರಿಂದ ಪುಷ್ಕಳ ಭೋಜನ: ಈಗ ಬಿಜೆಪಿ ಸರದಿ

03:46 PM Apr 13, 2018 | Team Udayavani |

ಪುಣೆ : ನಿರಂತರ ಗದ್ದಲ ಗಲಾಟೆಗಳ ಕಾರಣ ಬಜೆಟ್‌ ಅಧಿವೇಶನದ ಸಂಸತ್‌ ಕಲಾಪ ವ್ಯರ್ಥವಾಗಿ ಹೋದುದನ್ನು ಪ್ರತಿಭಟಿಸಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಆಳುವ ಬಿಜೆಪಿ ಪಕ್ಷದವರು ಉಪವಾಸ ಸತ್ಯಾಗ್ರಹ ನಡೆಸುತ್ತಿದ ವೇಳೆಯೇ ಪುಣೆಯ ಇಬ್ಬರು ಬಿಜೆಪಿ ಶಾಸಕರು ಪುಷ್ಕಳ ಭೋಜನ ಸವಿದಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ.

Advertisement

ಎರಡು ದಿನಗಳ ಹಿಂದಷ್ಟೇ ಕಾಂಗ್ರೆಸ್‌ ಸಂಸದರು ಇದೇ ಕಾರಣಕ್ಕೆ ಉಪವಾಸ ಸತ್ಯಾಗ್ರಹ ನಡೆಸಿದಂದು ಬೆಳಗ್ಗೆ ಪುಷ್ಕಳ ಉಪಾಹಾರ ಸೇವಿಸುತ್ತಿದ್ದುದು ಕ್ಯಾಮೆರಾದಲ್ಲಿ ಸೆರೆ ಹಿಡಿಯಲ್ಪಟ್ಟು ವೈರಲ್‌ ಆಗಿತ್ತು. ಇದೀಗ ಬಿಜೆಪಿಯ ಸರದಿಯಾಗಿ ಅದರ ಪುನರಾವರ್ತನೆಯಾಗಿದೆ. 

ನಿನ್ನೆ ಗುರುವಾರ ರಾಷ್ಟ್ರಾದ್ಯಂತ ಬಿಜೆಪಿಯದವರು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ವೇಳೆ ಇಲ್ಲಿನ ಜಿಲ್ಲಾ ಕೇಂದ್ರದಲ್ಲಿ ಸೇರಿದ್ದ ಸರ್ವಪಕ್ಷ ನಾಯಕರು ಇಲ್ಲಿನ ಜಂಗ್ಲಿ ಮಹಾರಾಜ್‌ ರಸ್ತೆಯ ಹೊಟೇಲಲ್ಲಿ ಪುಷ್ಕಳ ಭೋಜನ ಮಾಡಿರುವುದು ಕ್ಯಾಮೆರಾದಲ್ಲಿ ಸೆರೆಯಾಯಿತು. 

ಕ್ಯಾಮೆರಾದಲ್ಲಿ ಸೆರೆಯಾದ ಇಬ್ಬರು ಬಿಜೆಪಿ ಶಾಸಕರೆಂದರೆ ಪುಣೆ ಜಿಲ್ಲೆಯ  ಭೀಮರಾವ್‌ ತಪಕೀರ್‌ (ಖಡಕ್‌ವಾಸ್ಲಾ ಕ್ಷೇತ್ರ) ಮತ್ತು ಸಂಜಯ್‌ ಭೇಗಾಡೆ (ಮವಾಲ್‌ ಕ್ಷೇತ್ರ).

Advertisement

Udayavani is now on Telegram. Click here to join our channel and stay updated with the latest news.

Next