Advertisement

Bihar ಬಳಿಕ ಝಾರ್ಖಂಡ್‌ ಸರಕಾರದಿಂದ ಜಾತಿ ಗಣತಿ

12:00 AM Feb 19, 2024 | Team Udayavani |

ರಾಂಚಿ: ದೇಶದಲ್ಲಿ ಸ್ವಾತಂತ್ರ್ಯ ಬಂದ ಬಳಿಕ ಮೊದಲ ಬಾರಿಗೆ ಜಾತಿ ಗಣತಿ ನಡೆದದ್ದು ಬಿಹಾರದಲ್ಲಿ. ಅದೇ ಹಾದಿಯನ್ನು ತುಳಿಯಲು ಝಾರ್ಖಂಡ್‌ ಸರಕಾರ ನಿರ್ಧರಿಸಿದೆ. ರಾಜ್ಯದಲ್ಲಿ ಜಾತಿ ಗಣತಿ ಹೇಗೆ ನಡೆಸಬೇಕು ಎಂಬುದರ ಬಗೆಗಿನ ಕರಡು ಕಾರ್ಯಯೋಜನೆ ಸಿದ್ಧಪಡಿಸಿ, ಸಂಪುಟ ಸಭೆಯ ಮುಂದೆ ಮಂಡಿಸುವಂತೆ ಸಿಬಂದಿ ತರಬೇತಿ ಇಲಾಖೆಗೆ ಸಿಎಂ ಚಂಪಯಿ ಸೊರೇನ್‌ ಆದೇಶ ನೀಡಿದ್ದಾರೆ.

Advertisement

ಎಲ್ಲವೂ ಸುಸೂತ್ರವಾಗಿ ನಡೆದರೆ ಲೋಕಸಭೆ ಚುನಾವಣೆ ಬಳಿಕ ಝಾರ್ಖಂಡ್‌ನ‌ಲ್ಲಿ ಜಾತಿ ಗಣತಿ ನಡೆಯುವ ಸಾಧ್ಯತೆಗಳು ಇವೆ. ರಾಜ್ಯಕ್ಕೆ ಆಗಮಿಸಿದ್ದ ರಾಹುಲ್‌ ಗಾಂಧಿಯವರು ತಮ್ಮ “ಭಾರತ್‌ ಜೋಡೋ ನ್ಯಾಯ ಯಾತ್ರೆ’ ವೇಳೆ ಕೂಡ ಜಾತಿ ಗಣತಿ ಬಗ್ಗೆ ಮಾತನಾಡಿದ್ದರು. ಕಾಂಗ್ರೆಸ್‌ ಮತ್ತು ಆರ್‌ಜೆಡಿ ಶಾಸಕರು ಕೂಡ ಈ ಬಗ್ಗೆ ಒತ್ತಾಯ ಮಾಡುತ್ತಿದ್ದಾರೆ.

9 ಕಾಂಗ್ರೆಸ್‌ ಶಾಸಕರು ಬಿಜೆಪಿಯತ್ತ?
ಝಾರ್ಖಂಡ್‌ ಸರಕಾರದಲ್ಲಿ ತಮ್ಮದೇ ಪಕ್ಷದ ಸಚಿವರನ್ನು ಬದಲು ಮಾಡಬೇಕು ಎಂದು ಕಾಂಗ್ರೆಸ್‌ ಶಾಸಕರು ಹೊಸದಿಲ್ಲಿಗೆ ದೌಡಾಯಿಸಿದ್ದಾರೆ. ಸಚಿವ ಸ್ಥಾನ ನೀಡದಿದ್ದರೆ ಫೆ. 23ರಿಂದ ನಡೆಯಲಿರುವ ವಿಧಾನಸಭೆ ಅಧಿವೇಶನ ಬಹಿಷ್ಕರಿಸುವುದಾಗಿಯೂ ಅವರು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಇದರ ಜತೆಗೆ ಕೆಲವು ಮಂದಿ ಶಾಸಕರು ಜೈಪುರದ ಹೊಟೇಲ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಈ ನಡುವೆ, 9 ಮಂದಿ ಶಾಸಕರು ಬಿಜೆಪಿಗೆ ಸೇರ್ಪಡೆ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next