ನವದೆಹಲಿ: ಪ್ರಮುಖ ಹಾಲು ಸರಬರಾಜುದಾರ ಮದರ್ ಡೈರಿ ದೆಹಲಿ-ಎನ್ ಸಿಆರ್ ಮತ್ತು ಇತರ ನಗರಗಳಲ್ಲಿ ಹಾಲಿನ ಬೆಲೆಯನ್ನು ಪ್ರತಿ ಲೀಟರ್ ಗೆ 2 ರೂಪಾಯಿ ಹೆಚ್ಚಳ ಮಾಡಿರುವುದಾಗಿ ತಿಳಿಸಿದ್ದು, ಹೊಸ ದರ ಭಾನುವಾರದಿಂದ ಅನ್ವಯವಾಗಲಿದೆ. 2019ರ ಡಿಸೆಂಬರ್ ನಲ್ಲಿ ಹಾಲಿನ ಬೆಲೆಯನ್ನು ಕೊನೆಯದಾಗಿ ಪರಿಷ್ಕರಿಸಲಾಗಿತ್ತು ಎಂದು ವರದಿ ಹೇಳಿದೆ.
ಇದನ್ನೂ ಓದಿ:ಕ್ಯಾಚ್ ಆಫ್ ದಿ ಸಮ್ಮರ್: ವಿಶ್ವ ಕ್ರಿಕೆಟ್ ನ ಬೆರಗು ಮೂಡಿಸಿದ ಹರ್ಲೀನ್ ಡಿಯೋಲ್ ಕ್ಯಾಚ್
ಕಳೆದ ಒಂದು ವರ್ಷದಿಂದ ಹೈನುಗಾರರಿಂದ ಡೈರಿಯಲ್ಲಿ ಖರೀದಿಸುವ ಹಾಲಿನ ವೆಚ್ಚ ಶೇ.8ರಿಂದ 10ರಷ್ಟು ಹೆಚ್ಚಳವಾಗಿದೆ. ಅಷ್ಟೇ ಅಲ್ಲ ಇತರ ನಿರ್ವಹಣಾ ವೆಚ್ಚಗಳು ಕೂಡಾ ಏರಿಕೆಯಾಗಿದೆ ಎಂದು ಮದರ್ ಡೈರಿ ಹೇಳುವ ಮೂಲಕ ಬೆಲೆ ಹೆಚ್ಚಳವನ್ನು ಸಮರ್ಥಿಸಿಕೊಂಡಿದೆ.
ಇದಕ್ಕೂ ಮುನ್ನ ಜುಲೈ 1ರಂದು ಅಮುಲ್ ಕೂಡಾ ಎಲ್ಲಾ ನಗರಗಳಲ್ಲಿ ಪ್ರತಿ ಲೀಟರ್ ಹಾಲಿನ ಬೆಲೆಯನ್ನು ಎರಡು ರೂಪಾಯಿ ಹೆಚ್ಚಳ ಮಾಡಿತ್ತು. 2021ರ ಜುಲೈ 11ರಿಂದ ದೆಹಲಿ ಮತ್ತು ಎನ್ ಆರ್ ಸಿಯಲ್ಲಿ ಪ್ರತಿ ಲೀಟರ್ ಹಾಲಿನ ಬೆಲೆ 2 ರೂಪಾಯಿ ಹೆಚ್ಚಳವಾಗಲಿದೆ ಎಂದು ತಿಳಿಸಿದೆ.
ಪೂರ್ವ ಮತ್ತು ಉತ್ತರ ಪ್ರದೇಶ, ಮುಂಬೈ, ನಾಗ್ಪುರ ಮತ್ತು ಕೋಲ್ಕತಾ ಸೇರಿದಂತೆ ಪ್ರಮುಖ ಮಾರುಕಟ್ಟೆಯಲ್ಲಿ ಜುಲೈ 11ರಿಂದ ಪ್ರಸ್ತುತ ಚಾಲ್ತಿಯಲ್ಲಿರುವ ಬೆಲೆಯನ್ನು ಪರಿಷ್ಕರಿಸಲಾಗಿದ್ದು, ಎಂಆರ್ ಪಿ ಮೇಲೆ ಲೀಟರ್ ಗೆ ಎರಡು ರೂಪಾಯಿ ಏರಿಕೆ ಮಾಡಿರುವುದಾಗಿ ವಿವರಿಸಿದೆ.