ಇಸ್ಲಾಮಾಬಾದ್ : 2016ರ ಮಾರ್ಚ್ ಬಳಿಕ ಇದೇ ಮೊದಲ ಬಾರಿಗೆ ಕುಲಭೂಷಣ್ ಯಾದವ್ ಅವರು ತನ್ನ ತಾಯಿ ಮತ್ತು ಪತ್ನಿಯನ್ನು ಇಸ್ಲಾಮಾಬಾದ್‌ನಲ್ಲಿ ಬಿಗಿ ಭದ್ರತೆಯ ನಡುವೆ ಭೇಟಿಯಾದ ಬಳಿಕ ಪಾಕ್ ವಿದೇಶ ವ್ಯವಹಾರಗಳ ಸಚಿವಾಲಯ ಇಂದು ಸೋಮವಾರ ಹೊಸ ಮತ್ತು ಶಂಕಾಸ್ಪದ ವಿಡಿಯೋ ಒಂದನ್ನು ಬಿಡುಗಡೆ ಮಾಡಿದೆ.
ಅತ್ಯಂತ ಕಿರು ಅವಧಿಯ ಈ ವಿಡಿಯೋ ಸಂದೇಶದಲ್ಲಿ ಜಾಧವ್, “ನನ್ನ ತಾಯಿ ಮತ್ತು ಪತ್ನಿಯ ಭೇಟಿಯನ್ನು ನಾನು ಕೋರಿದ್ದೆ. ಅದನ್ನು ಮನ್ನಿಸಿ ಈ ಭೇಟಿ ಏರ್ಪಡಿಸಿರುವ ಪಾಕ್ ಸರಕಾರಕ್ಕೆ ನನ್ನ ಧನ್ಯವಾದಗಳು’ ಎಂದು ಹೇಳುವುದು ಕಂಡು ಬರುತ್ತದೆ.
2017ರ ಜೂನ್‌ನಲ್ಲಿ ಪಾಕಿಸ್ಥಾನ ಬಿಡುಗಡೆ ಮಾಡಿದ್ದ ಎರಡನೇ ತಪ್ಪೊಪ್ಪಿಗೆ ವಿಡಿಯೋದಲ್ಲಿ 47ರ ಹರೆಯದ ಜಾಧವ್, “ತನ್ನ ಬೇಹುಗಾರಿಕೆ ಮತ್ತು ಭಯೋತ್ಪಾದನೆಯ ಕೃತ್ಯಗಳನ್ನು ಒಪ್ಪಿಕೊಂಡಿದ್ದ’. ಆದರೆ ಭಾರತ ಈ ವಿಡಿಯೋವನ್ನು ಸಾರಾಸಗಟು ಬಲವಂತದ ಫಲಶ್ರುತಿ ಎಂದು ತಿರಸ್ಕರಿಸಿತ್ತು.