Advertisement

ಯೋಧರ ವಿಶ್ವಪರ್ಯಟನೆ

06:00 AM May 20, 2018 | |

ಪಣಜಿ: ಭಾರತೀಯ ನೌಕಾ ಪಡೆಯ ಮಹಿಳಾ ಸಿಬ್ಬಂದಿಯನ್ನೇ ಹೊತ್ತು ವಿಶ್ವವನ್ನು ಸುತ್ತಿ ಬಂದ ಐಎನ್‌ಎಸ್‌ವಿ ತಾರಿಣಿ ಎಂಟು ತಿಂಗಳ ನಂತರ ಸೋಮವಾರ ವಾಪಸ್‌ ಗೋವಾಗೆ ಆಗಮಿಸಲಿದೆ. ಈ ಸಾಹಸಿ ಮಹಿಳೆಯರನ್ನು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಹಾಗೂ ನೌಕಾಪಡೆಯ ಮುಖ್ಯ ಅಡ್ಮಿರಲ್‌ ಸುನೀಲ್‌ ಲಂಬಾ ಸ್ವಾಗತಿಸಲಿದ್ದಾರೆ. ಕಳೆದ ವರ್ಷ ಸೆಪ್ಟೆಂಬರ್‌ 10 ರಂದು ಪಣಜಿಯಿಂದ ಪ್ರಯಾಣ ಆರಂಭಿಸಿದ್ದು, ಸೋಮವಾರ ಪಣಜಿಗೇ ಆಗಮಿಸಲಿದ್ದಾರೆ.

Advertisement

ನಾವಿಕಾ ಸಾಗರ ಪರಾಕ್ರಮ ಎಂದು ಹೆಸರಿಸಲಾದ ಈ ಯಾನದಲ್ಲಿ ಲೆಫ್ಟಿನೆಂಟ್‌ ಕಮಾಂಡರ್‌ ಆಗಿ ವರ್ತಿಕಾ ಜೋಶಿ ಇದ್ದಾರೆ. ಲೆ.ಕಮಾಂಡರ್‌ ಪ್ರತಿಭಾ ಜಮÌಲ್‌ ಮತ್ತು ಸ್ವಾತಿ, ಲೆಫ್ಟಿನೆಂಟ್‌ಗಳಾ ಐಶ್ವರ್ಯಾ ಬೊಡ್ಡಪಟಿ, ಎಸ್‌ ವಿಜಯಾ ದೇವಿ ಹಾಗೂ ಪಾಯಲ್‌ ಗುಪ್ತಾ ಕೂಡ ಇದ್ದಾರೆ. ವಿಶ್ವದಲ್ಲೇ ಇದೇ ಮೊದಲ ಬಾರಿಗೆ ಮಹಿಳೆಯರೇ ಸೇರಿ ನೌಕೆಯಲ್ಲಿ ವಿಶ್ವ ಪರ್ಯಟನೆ ಮಾಡಿರುವುದು ಇವರ ವಿಶೇಷವಾಗಿದೆ.

ಆರೂ ಮಹಿಳೆಯರಿಗೆ ಕ್ಯಾಪ್ಟನ್‌ ದಿಲೀಪ್‌ ದೋಂಡೆ ತರಬೇತಿ ನೀಡಿದ್ದಾರೆ. ದಿಲೀಪ್‌ 2009ರಲ್ಲಿ ಒಂಟಿಯಾಗಿ ವಿಶ್ವಪರ್ಯಟನೆ ಮಾಡಿ ದಾಖಲೆ ಬರೆದಿದ್ದರು. ಮಹಿಳೆಯರ ವಿಶ್ವ ಪರ್ಯಟನೆಯು ಆರು ಹಂತದಲ್ಲಿ ನಡೆದಿದೆ. ಆಸ್ಟ್ರೇಲಿಯಾ, ನ್ಯೂಜಿಲೆಂಡ್‌, ಫಾಕ್‌ಲ್ಯಾಂಡ್‌ ದ್ವೀಪ, ದಕ್ಷಿಣ ಆಫ್ರಿಕಾ ಹಾಗೂ ಮಾರಿಷಸ್‌ನಲ್ಲಿ ಇವರು ವಿರಾಮ ಪಡೆದು ಮುಂದೆ ಸಾಗಿದ್ದರು. ಒಟ್ಟು 21,600 ನಾಟಿಕಲ್‌ ಮೈಲು ಕ್ರಮಿಸಿ. ಒಟ್ಟು ನಾಲ್ಕು ಖಂಡಗಳು, ಮೂರು ಸಮುದ್ರಗಳನ್ನು ದಾಟಿ ವಿಶ್ವ ಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next