Advertisement

Toxic Waste: ಭೋಪಾಲ್ ಅನಿಲ ದುರಂತ ನಡೆದು 40 ವರ್ಷಗಳ ಬಳಿಕ ತ್ಯಾಜ್ಯ ವಿಲೇವಾರಿ

09:29 AM Jan 02, 2025 | Team Udayavani |

ಭೋಪಾಲ್: ದೇಶವನ್ನೇ ಬೆಚ್ಚಿ ಬೀಳಿಸಿದ್ದ 1984ರ ಭೋಪಾಲ್ ಅನಿಲ ದುರಂತ ಇದೀಗ ನಲವತ್ತು ವರ್ಷಗಳ ಬಳಿಕ ಯೂನಿಯನ್ ಕಾರ್ಬೈಡ್ ಕಾರ್ಖಾನೆಯ ಸ್ಥಳದಲ್ಲಿ ಸಂಗ್ರಹವಾಗಿರುವ ಸುಮಾರು 337 ಮೆಟ್ರಿಕ್ ಟನ್ ರಾಸಾಯನಿಕ ತ್ಯಾಜ್ಯವನ್ನು ವಿಲೇವಾರಿ ಮಾಡಲು ಸ್ಥಳಾಂತರಗೊಳಿಸಲಾಯಿತು.

Advertisement

1984 ರಲ್ಲಿ ಸಂಭವಿಸಿದ ಭೀಕರ ಅನಿಲ ದುರಂತವು ಸಾವಿರಾರು ಜನರನ್ನು ಬಲಿ ತೆಗೆದುಕೊಂಡಿತ್ತು. ಅನಿಲ ಸೋರಿಕೆಯ ಪರಿಣಾಮ ಸುಮಾರು 6 ಲಕ್ಷ ಮಂದಿ ನಾನಾ ರೀತಿಯ ಕಾಯಿಲೆಗೆ ತುತ್ತಾಗಿದ್ದರು, ಅದೇ ಸಮಯದಲ್ಲಿ, 40 ವರ್ಷಗಳಿಂದ ಯೂನಿಯನ್ ಕಾರ್ಬೈಡ್ ಮತ್ತು ಡೌ ಕೆಮಿಕಲ್ ಕಾರ್ಖಾನೆಗಳಲ್ಲಿ ಬಿದ್ದಿರುವ ರಾಸಾನಿಕ ತ್ಯಾಜ್ಯವು ಭೋಪಾಲ್‌ನ ಹವಾಮಾನವನ್ನೂ ಕಲುಷಿತಗೊಳಿಸುತ್ತಿತ್ತು. ಪರಿಣಾಮ ಕಾರ್ಖಾನೆಯ ಸುತ್ತಲಿನ ಮಣ್ಣು, ಅಂತರ್ಜಲವೂ ಕಲುಷಿತವಾಗತೊಡಗಿತ್ತು.

ಈ ವಿಚಾರಕ್ಕೆ ಸಂಬಂಧಿಸಿ ಡಿಸೆಂಬರ್ 3 ರಂದು, ಮಧ್ಯಪ್ರದೇಶ ಹೈಕೋರ್ಟ್ ವಿಷಕಾರಿ ತ್ಯಾಜ್ಯ ವಸ್ತುಗಳನ್ನು ವಿಲೇವಾರಿ ಮಾಡಲು ಅಧಿಕಾರಿಗಳಿಗೆ ನಾಲ್ಕು ವಾರಗಳ ಗಡುವನ್ನು ನೀಡಿತು. ಅಲ್ಲದೆ ಡಿಸೆಂಬರ್ 5 ರಂದು ತ್ಯಾಜ್ಯ ವಿಲೇವಾರಿ ಮಾಡದ ಹಿನ್ನೆಲೆಯಲ್ಲಿ ಹೈಕೋರ್ಟ್ ರಾಜ್ಯ ಸರಕಾರವನ್ನೂ ತರಾಟೆಗೆ ತೆಗೆದುಕೊಂಡಿತ್ತು ಘಟನೆ ನಡೆದು ನಲ್ವತ್ತು ವರ್ಷಗಳು ಕಳೆದರೂ ಇನ್ನು ವಿಷಕಾರಿ ತ್ಯಾಜ್ಯವನ್ನು ವಿಲೇವಾರಿ ಮಾಡದಿರುವುದು ದುರಂತ ಈ ವಿಷಕಾರಿ ತ್ಯಾಜ್ಯಗಳು ಭೂಮಿ ಮೇಲೆ ಇದ್ದರೆ ಇನ್ನೂ ಹೆಚ್ಚಿನ ಅನಾಹುತಗಳು ಸಂಭವಿಸಬಹುದು ಎಂದು ಹೈಕೋರ್ಟ್ ಸರಕಾರಕ್ಕೆ ಛಿಮಾರಿ ಹಾಕಿತ್ತು.

ಬಳಿಕ ವಿಚಾರ ಹೈಕೋರ್ಟ್‌ನ ಆದೇಶದ ಮೇರೆಗೆ ಸುಮಾರು ನಲ್ವತ್ತು ವರ್ಷಗಳ ಬಳಿಕ ಈ ತ್ಯಾಜ್ಯವನ್ನು ಭೋಪಾಲ್‌ನಿಂದ 250 ಕಿ.ಮೀ. ದೂರವಿರುವ ಕೈಗಾರಿಕಾ ಪ್ರದೇಶವಾದ ದಾರ್‌ ಜಿಲ್ಲೆಯ ಪೀತಂಪುರಕ್ಕೆ ಸುಮಾರು ಹನ್ನೆರಡು ಟ್ರಕ್ ಗಳ ಮೂಲಕ ಬುಧವಾರ ಸಾಗಿಸಲಾಗಿದೆ.

ಈ ಕುರಿತು ಹೇಳಿಕೆ ನೀಡಿರುವ ಪೊಲೀಸ್ ಆಯುಕ್ತರು ಸುಮಾರು ನಲ್ವತ್ತು ವರ್ಷಗಳಿಂದ ಕೈಗಾರಿಕಾ ಪ್ರದೇಶದಲ್ಲಿ ಬಿದ್ದಿದ್ದ 337 ಮೆಟ್ರಿಕ್ ಟನ್ ರಾಸಾಯನಿಕ ತ್ಯಾಜಗಳನ್ನು ಸುರಕ್ಷತಾ ಮಾನದಂಡಗಳನ್ನು(ಪಿಪಿಇ ಕಿಟ್‌) ಅನುಸರಿಸುವ ಮೂಲಕ ಸುಮಾರು 200 ಕಾರ್ಮಿಕರನ್ನು ಬಳಸಿಕೊಂಡು ತ್ಯಾಜ್ಯವನ್ನು ಸಂಗ್ರಹ ಮಾಡಲಾಗಿದ್ದು ಅದಕ್ಕಾಗಿ ಸುಮಾರು ಹನ್ನೆರಡು ಕಂಟೈನರ್ ಗಳನ್ನು ಬಳಸಲಾಗಿದೆ ಜೊತೆಗೆ ಪೊಲೀಸ್ ಭದ್ರತೆಯನ್ನು ಒದಗಿಸುವ ಮೂಲಕ ಬುಧವಾರ ಭೋಪಾಲ್ ನಿಂದ ಸುಮಾರು ೨೫೦ ಕಿಲೋಮೀಟರ್ ದೂರದಲ್ಲಿರುವ ಪೀತಂಪುರಕ್ಕೆ ಕೊಂಡೊಯ್ಯಲಾಗಿದೆ ಎಂದು ಹೇಳಿದ್ದಾರೆ.

Advertisement

ಪಿತಾಂಪುರದಳ್ಳಿ ತ್ಯಾಜ್ಯ ವಿಲೇವಾರಿಗೆ ವಿರೋಧ:
ಇನ್ನು ಸಾವಿರಾರು ಜನರ ಜೀವ ತೆಗೆದುಕೊಂಡಿರುವ ಘಟನೆಗೆ ಸಂಬಂದಿಸಿದ ತ್ಯಾಜ್ಯವನ್ನು ಭೋಪಾಲ್ ನಿಂದ ಪಿತಾಂಪುರದಲ್ಲಿ ವಿಲೇವಾರಿ ಮಾಡಲು ಸಿದ್ದತೆಗಳು ನಡೆಸುತ್ತಿರುವ ನಡುವೆಯೇ ಪಿತಾಂಪುರದಳ್ಳಿ ತ್ಯಾಜ್ಯ ವಿಲೇವಾರಿ ಮಾಡುವ ಬದಲು ಅದನ್ನು ವಿದೇಶದಲ್ಲಿ ವಿಲೇವಾರಿ ಮಾಡುವಂತೆ ಕೆಲ ಸಂಘಟನೆಗಳು ಆಗ್ರಹಿಸಿವೆ ಅಲ್ಲದೆ ತ್ಯಾಜ್ಯ ವಿಲೇವಾರಿಯ ವಿರುದ್ಧ 10ಕ್ಕೂ ಹೆಚ್ಚು ಸಂಘಟನೆಗಳು ನಾಳೆ ಬಂದ್‌ಗೆ ಕರೆ ನೀಡಿವೆ.

ಪಿತಾಂಪುರ್ ಪ್ಲಾಂಟ್:
ಪಿತಂಪುರದಲ್ಲಿರುವ ತ್ಯಾಜ್ಯ ವಿಲೇವಾರಿ ಘಟಕವು ಮಧ್ಯಪ್ರದೇಶದ ಏಕೈಕ ಅತ್ಯಾಧುನಿಕ ದಹನ ಘಟಕವಾಗಿದೆ. ಇದನ್ನು ಸಿಪಿಸಿಬಿ ಮಾರ್ಗಸೂಚಿಗಳ ಅಡಿಯಲ್ಲಿ ರಾಮ್ಕಿ ಎನ್ವಿರೋ ಎಂಜಿನಿಯರ್‌ಗಳು ನಿರ್ಮಿಸಿದ್ದು. ನೆಲದಿಂದ ಸುಮಾರು 25 ಅಡಿ ಎತ್ತರದಲ್ಲಿ ನಿರ್ಮಿಸಲಾಗಿರುವ ವಿಶೇಷ ಮರದ ವೇದಿಕೆಯಲ್ಲಿ ತ್ಯಾಜ್ಯವನ್ನು ಸುಡಲಾಗುತ್ತದೆ.

 

Advertisement

Udayavani is now on Telegram. Click here to join our channel and stay updated with the latest news.

Next