Advertisement
ಇದರ ಮುಂದಿನ ಹಂತವಾಗಿ ನರ್ಸಿಂಗ್ ಕಾಲೇಜ್‌ಗಳ ಸ್ಥಾಪನೆಗೆ ಸರಕಾರ ಮುಂದಾಗಿದೆ. ತನ್ಮೂಲಕ ವೈದ್ಯಕೀಯ ಸೇವೆಯಲ್ಲಿ ನೈಪುಣ್ಯತೆಯನ್ನು ಕಾಪಾಡಿಕೊಳ್ಳುವ ಜತೆಗೆ ವೈದ್ಯರು ಮತ್ತು ದಾದಿಯರ ಸಂಖ್ಯೆಯನ್ನು ದಾಖಲೆ ಪ್ರಮಾಣದಲ್ಲಿ ಹೆಚ್ಚಿಸುವ ಪ್ರಯತ್ನಕ್ಕೆ ಸರಕಾರ ಕೈಹಾಕಿದೆ.
ವೈದ್ಯಕೀಯ, ಔಷಧ ಕ್ಷೇತ್ರದ ಸಂಶೋಧನೆಗೆ ಅಡಿಪಾಯ: ಕೋವಿಡ್ ಸಾಂಕ್ರಾಮಿಕದ ಬಳಿಕ ವೈದ್ಯಕೀಯ ಮತ್ತು ಔಷಧ ಕ್ಷೇತ್ರಗಲ್ಲಿನ ಸಂಶೋಧನೆ ಮತ್ತು ಅನ್ವೇಷಣೆಯ ಮಹತ್ವವನ್ನು ಅರಿತಿರುವ ಸರಕಾರ ಈ ರಂಗದಲ್ಲಿನ ಅಭಿವೃದ್ಧಿಗೆ ವಿಶೇಷ ಮಹತ್ವ ನೀಡಿದೆ. ಸಾರ್ವಜನಿಕ ಆರೋಗ್ಯ ಕ್ಷೇತ್ರದ ನಿರ್ವಹಣೆಯಲ್ಲಿನ ಖಾಸಗಿ, ಸರಕಾರಿ ಸಹಭಾಗಿತ್ವವನ್ನು ಸಂಶೋಧನ ವಲಯಕ್ಕೂ ಈ ಬಜೆಟ್ ಮೂಲಕ ವಿಸ್ತರಿಸಲಾಗಿದೆ. ವೈದ್ಯಕೀಯ ಸಂಶೋಧನೆಯ ಭಾರತೀಯ ಪರಿಷತ್ (ಐಸಿಎಂಆರ್) ತನ್ನ ಪ್ರಯೋಗಾಲಯಗಳನ್ನು ಖಾಸಗಿ ಮತ್ತು ಸರಕಾರಿ ಮೆಡಿಕಲ್ ಕಾಲೇಜ್‌ಗಳ ಸಂಶೋಧಕರಿಗೂ ತೆರೆಯಲಿದೆ. ಸಂಶೋಧನೆ ಮತ್ತು ನಾವೀನ್ಯತೆಗೆ ಸಹಭಾಗಿತ್ವವನ್ನು ಪ್ರೋತ್ಸಾಹಿಸುವುದಾಗಿ ಬಜೆಟ್‌ನಲ್ಲಿ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಆರೋಗ್ಯ ಸಂಶೋಧನ ಇಲಾಖೆಗೆ 2,980 ಕೋಟಿ ರೂಪಾಯಿ ತೆಗೆದಿರಿಸಲಾಗಿದೆ.