ಕರಾಚಿ: ಇನ್ನೂ ಮುಖ್ಯ ಪ್ರಾಯೋಜಕರನ್ನು ಗೊತ್ತುಮಾಡಲು ಸಾಧ್ಯವಾಗದ ಪಾಕಿಸ್ಥಾನ ಕ್ರಿಕೆಟಿಗೆ ಈಗ ಆಸರೆಯಾಗಬೇಕಾದ ಸ್ಥಿತಿ ಬಂದಿದೆ. ಮುಂಬರುವ ಇಂಗ್ಲೆಂಡ್ ಎದುರಿನ ಸರಣಿಯ ವೇಳೆ ಪಾಕಿಸ್ಥಾನ ಕ್ರಿಕೆಟಿಗರ ಜೆರ್ಸಿ ಮೇಲೆ ಈ ಫೌಂಡೇಶನ್‌ನ ಲಾಂಛನ ಮೂಡಿಬರಲಿದೆ.
“ಬಹುರಾಷ್ಟ್ರೀಯ ಪಾನೀಯ ಕಂಪೆನಿಯೊಂದರ ಜತೆ ಮಾತುಕತೆ ನಡೆಯುತ್ತಿದೆ. ಅದು ತನ್ನ ಲಾಂಛನ ವನ್ನು ಪಾಕ್ ಕ್ರಿಕೆಟಿಗರ ಜೆರ್ಸಿ ಮೇಲೆ ಮುದ್ರಿಸುವ ಉಮೇದಿನಲ್ಲಿದೆ. ಆದರೆ ಅದು ಹಣಕಾಸಿನ ವಿಚಾರದಲ್ಲಿ ಚೌಕಾಸಿ ಮಾಡುತ್ತಿದೆ. ಆ ಕಂಪೆನಿ ಕಳೆದ ಒಪ್ಪಂದದ ವೇಳೆ ನೀಡಿದ ಮೊತ್ತಕ್ಕೆ ಹೋಲಿಸಿದರೆ ಇದು ಕೇವಲ ಶೇ. 25ರಿಂದ 40ರಷ್ಟು ಮಾತ್ರ ಇದೆ’ ಎಂದು ಪಿಸಿಬಿ ಹೇಳಿದೆ.
ಮುಂಬರುವ ಇಂಗ್ಲೆಂಡ್ ಎದು ರಿನ ಸರಣಿಯೊಳಗೆ ಇದು ಇತ್ಯರ್ಥ ವಾಗದೇ ಹೋದರೆ ಶಾಹಿದ್ ಅಫ್ರಿದಿ ಫೌಂಡೇಶನ್ ಲಾಂಛನವನ್ನು ಬಳಸಿಕೊಳ್ಳುವುದು ಪಿಸಿಬಿ ಯೋಜನೆ ಯಾಗಿದೆ.
ಸದ್ಯ ಇಂಗ್ಲೆಂಡಿನಲ್ಲಿರುವ ಪಾಕಿಸ್ಥಾನ ತಂಡ 3 ಟೆಸ್ಟ್ ಮತ್ತು 3 ಟಿ20 ಪಂದ್ಯಗಳನ್ನು ಆಡಲಿದೆ. ಮೊದಲ ಟೆಸ್ಟ್ ಪಂದ್ಯ ಆ. 5ರಿಂದ ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್ ಅಂಗಳದಲ್ಲಿ ಆರಂಭವಾಗಲಿದೆ.