Advertisement
ಅನಾರೋಗ್ಯ ಪೀಡಿತವಾಗಿದ್ದ ಹಂದಿಗಳನ್ನು ಪರೀಕ್ಷಿಸಿದ ಬಳಿಕ ಆಫ್ರಿಕನ್ ಹಂದಿಜ್ವರದ ಸೋಂಕು ಹರಡಿರುವುದನ್ನು ಪಶು ವೈದ್ಯಾಧಿಕಾರಿಗಳು ದೃಢಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಎರಡೂ ಸಾಕಣೆ ಕೇಂದ್ರಗಳಲ್ಲಿರುವ ಎಲ್ಲಾ ಹಂದಿಗಳನ್ನು ಕೊಲ್ಲುವಂತೆ ಜಿಲ್ಲಾಧಿಕಾರಿಗಳು ಆದೇಶಿಸಿದ್ದು, ಶಿಷ್ಟಾಚಾರದಂತೆ ಅವುಗಳನ್ನು ಕೊಲ್ಲಲಾಗಿದೆ.ಇನ್ನು ಕೇಂದ್ರದ ಸುತ್ತಲಿನ 1 ಕಿ.ಮೀ. ವ್ಯಾಪ್ತಿಯನ್ನು ಸೋಂಕು ಪತ್ತೆಯಾದ ಪ್ರದೇಶವೆಂದು ಘೋಷಿಸಿ 10 ಕಿ.ಮೀ. ವ್ಯಾಪ್ತಿಯನ್ನು ಕಣ್ಗಾವಲಿಗೆ ಒಳಪಡಿಸಲಾಗಿದೆ. ಈ ಪ್ರದೇಶದಲ್ಲಿ ಮುಂದಿನ 3 ತಿಂಗಳವರೆಗೆ ಹಂದಿಗಳ ಮಾಂಸ ಮಾರಾಟ, ಸಾಗಣೆ ನಿಷೇಧಿಸಲಾಗಿದೆ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.