Advertisement

ಅಫ್ಘಾನಿಸ್ಥಾನಕ್ಕೆ ಏಕದಿನ ಸರಣಿ

11:21 AM Feb 28, 2017 | Team Udayavani |

ಹರಾರೆ: ಜಿಂಬಾಬ್ವೆ ವಿರುದ್ಧ ನಡೆದ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಅಫ್ಘಾನಿಸ್ಥಾನ 3-2 ಅಂತರದ ಜಯ ಸಾಧಿಸಿ ಸಂಭ್ರಮಿಸಿದೆ. 

Advertisement

ರವಿವಾರ ನಡೆದ ನಿರ್ಣಾಯಕ ಐದನೇ ಪಂದ್ಯದಲ್ಲಿ ಅಫ್ಘಾನಿಸ್ಥಾನ ತಂಡವು ಡಕ್‌ವರ್ತ್‌ ಲೂಯಿಸ್‌ ನಿಯಮದಡಿ 106 ರನ್ನುಗಳಿಂದ ಜಯಭೇರಿ ಬಾರಿಸಿತು. 

ಮೊದಲು ಬ್ಯಾಟಿಂಗ್‌ ಮಾಡಿದ ಅಫ್ಘಾನಿಸ್ಥಾನ ತಂಡವು ಆರಂಭಿಕ ನೂರ್‌ ಅಲಿ ಜದ್ರಾನ್‌, ರಹಮತ್‌ ಶಾ ಮತ್ತು ಮೊಹಮ್ಮದ್‌ ನಬಿ ಅವರ ಉಪಯುಕ್ತ ಆಟದಿಂದಾಗಿ 50 ಓವರ್‌ಗಳಲ್ಲಿ 9  ವಿಕೆಟಿಗೆ 253 ರನ್ನುಗಳ ಉತ್ತಮ ಮೊತ್ತ ಪೇರಿಸಿತು. 

ಅಫ್ಘಾನಿಸ್ಥಾನದ ಇನ್ನಿಂಗ್ಸ್‌ ಮುಗಿದು ಸ್ವಲ್ಪ ಹೊತ್ತಿನಲ್ಲಿ ಭಾರೀ ಮಳೆ ಸುರಿದ ಕಾರಣ ಜಿಂಬಾಬ್ವೆಯ ಆಟ ತಡವಾಗಿ ಆರಂಭಗೊಂಡಿತ್ತು ಮತ್ತು ಗೆಲುವಿನ ಗುರಿಯನ್ನು ಬದಲಿಸಿ 22 ಓವರ್‌ಗಳಲ್ಲಿ 161 ರನ್‌ ಗಳಿಸುವ ಸವಾಲನ್ನು ನೀಡಲಾಯಿತು. ಮೊಹಮ್ಮದ್‌ ನಬಿ, ರಶೀದ್‌ ಖಾನ್‌ ಮತ್ತು ಆಮಿರ್‌ ಹಂಝ ದಾಳಿಗೆ ನೆಲಕಚ್ಚಿದ ಜಿಂಬಾಬ್ವೆ ಕೇವಲ 13.5 ಓವರ್‌ಗಳಲ್ಲಿ 54 ರನ್ನಿಗೆ ಆಲೌಟಾಯಿತು. ತಂಡದ ಇಬ್ಬರು ಆಟಗಾರರು ಮಾತ್ರ ಎರಡಂಕೆಯ ಮೊತ್ತ ತಲುಪಿದ್ದರು.

ಹಂಝ ಮತ್ತು ನಬಿ ತಲಾ ಮೂರು ವಿಕೆಟ್‌ ಉರುಳಿಸಿದರೆ ರಶೀದ್‌ ಖಾನ್‌ ಎರಡು ವಿಕೆ‌ಟ್‌ ಕಿತ್ತರು. ಇವರಲ್ಲಿ ನಬಿ ಮತ್ತು ರಶೀದ್‌ ಖಾನ್‌ ಅವರನ್ನು ಇತ್ತೀಚೆಗೆ ನಡೆದ ಐಪಿಎಲ್‌ ಹರಾಜಿನಲ್ಲಿ ಸನ್‌ರೈಸರ್ ಹೈದರಾಬಾದ್‌ ತಂಡವು ಖರೀದಿಸಿತ್ತು.

Advertisement

ಸಂಕ್ಷಿಪ್ತ ಸ್ಕೋರು: ಅಫ್ಘಾನಿಸ್ಥಾನ 50 ಓವರ್‌ಗಳಲ್ಲಿ 9 ವಿಕೆಟಿಗೆ 253 (ಮೊಹಮ್ಮದ್‌ ಶಹಜಾದ್‌ 20, ನೂರ್‌ ಅಲಿ ಜದ್ರಾನ್‌ 46, ರಹಮತ್‌ ಶಾ 50, ಮೊಹಮ್ಮದ್‌ ನಬಿ 48, ರಿಚರ್ಡ್‌ ಎನ್‌ಗರವ 37ಕ್ಕೆ 2, ಕ್ರಿಸ್‌ ಎಂಪೊಫ‌ು 46ಕ್ಕೆ 3); ಜಿಂಬಾಬ್ವೆ 13.5 ಓವರ್‌ಗಳಲ್ಲಿ ಆಲೌಟ್‌ (ಗ್ರೇಮ್‌ ಕ್ರೀಮರ್‌ 14, ರಿಯಾನ್‌ ಬುರ್ಲ್ 11, ಆಮಿರ್‌ ಹಂಝ 20ಕ್ಕೆ 3, ಮೊಹಮ್ಮದ್‌ ನಬಿ 14ಕ್ಕೆ 3, ರಶೀದ್‌ ಖಾನ್‌ 8ಕ್ಕೆ 2).

Advertisement

Udayavani is now on Telegram. Click here to join our channel and stay updated with the latest news.

Next