Advertisement

ಕಾಸರಗೋಡು ಯುವಕನ ಗಡೀಪಾರು, ಬಂಧನ

06:00 AM Sep 20, 2018 | Team Udayavani |

ಹೊಸದಿಲ್ಲಿ: ಕಳೆದ ವರ್ಷ ಕೇರಳದ ಕಾಸರಗೋಡಿನಿಂದ ನಾಪತ್ತೆಯಾದ 14 ಜನರ ಪೈಕಿ ಓರ್ವನನ್ನು ಅಫ್ಘಾನಿಸ್ತಾನದಿಂದ ಗಡೀಪಾರು ಮಾಡಲಾಗಿದೆ. ನಶಿದುಲ್‌ ಹಮ್‌ಝಫ‌ರ್‌ನನ್ನು ಐಸಿಸ್‌ ಉಗ್ರ ಸಂಘಟನೆ ಸೇರುವುದಕ್ಕಾಗಿ ಅಕ್ರಮವಾಗಿ ದೇಶ ಪ್ರವೇಶಿಸಿದ ಆರೋಪದಲ್ಲಿ ಗಡೀಪಾರು ಮಾಡಲಾಗಿದೆ. ಇದೇ ಮೊದಲ ಬಾರಿಗೆ ಅಫ್ಘಾನಿಸ್ತಾನವು ಐಸಿಸ್‌ ಉಗ್ರನೊಬ್ಬನನ್ನು ಭಾರತಕ್ಕೆ ಗಡೀಪಾರು ಮಾಡಿದೆ. ಕಾಬೂಲ್‌ನಿಂದ ದೆಹಲಿ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆಯೇ ಈತನನ್ನು ರಾಷ್ಟ್ರೀಯ ತನಿಖಾ ದಳ ಬಂಧಿಸಿದೆ.

Advertisement

2017 ಅಕ್ಟೋಬರ್‌ 3 ರಂದು ಕಾಸರಗೋಡಿನಿಂದ ಇತರ 13 ಮಂದಿಯೊಂದಿಗೆ ದೇಶ ತೊರೆದಿದ್ದ. ಮಸ್ಕಟ್‌, ಓಮನ್‌ಗೆ ತೆರಳಿ, ಅಲ್ಲಿಂದ ಇರಾನ್‌ಗೆ ಹೋಗಿದ್ದ ಇವರು, ನಂತರ ಕಾಬೂಲ್‌ಗೆ ತೆರಳಿದ್ದರು. ಅಲ್ಲಿ ಅವರನ್ನು ಬಂಧಿಸಲಾಗಿತ್ತು. ನಶಿದುಲ್‌ ಸಾಮಾಜಿಕ ಮಾಧ್ಯಮಗಳ ಮೂಲಕ ಉಗ್ರ ಸಂಚು ರೂಪಿಸಿದ್ದ. ಈತನಿಗೆ ಇತರ ಸಹವರ್ತಿಗಳೂ ನೆರವಾಗಿದ್ದರು ಎಂದು ಎನ್‌ಐಎ ವರದಿ ಮಾಡಿದೆ. ಈತನನ್ನು ಈಗ ಕೊಚ್ಚಿಗೆ ಕರೆತಂದು ಇಲ್ಲಿ ವಿಚಾರಣೆ ನಡೆಸಲಾಗುತ್ತದೆ.

2018 ಮಾರ್ಚ್‌ 30ರ ವೇಳೆಗೆ 90 ಕೇರಳಿಗರು ಐಸಿಸ್‌ಗೆ ಸೇರಿದ್ದಾರೆ ಎಂದು ವರದಿಯಾಗಿತ್ತು. ಈ ಪೈಕಿ 16 ಜನರು ಅಮೆರಿಕ ಹಾಗೂ ಇತರ ಭದ್ರತಾ ಪಡೆಗಳ ಗುಂಡಿನ ದಾಳಿಗೆ ಸಿಲುಕಿ ಹತರಾಗಿದ್ದಾರೆ. 90 ಜನರ ಪೈಕಿ 21 ಜನರು ಕಾಸರಗೋಡು ಹಾಗೂ 38 ಜನರು ಕಣ್ಣೂರಿನವರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next