Advertisement

ರಶೀದ್‌ ಖಾನ್‌ ಕಿರಿಯ ಕಪ್ತಾನ

05:25 AM Mar 05, 2018 | |

ಬುಲವಾಯೊ: ಅಫ್ಘಾನಿಸ್ಥಾನದ ಭರವಸೆಯ ಸ್ಪಿನ್ನರ್‌ ರಶೀದ್‌ ಖಾನ್‌ ಏಕದಿನ ಕ್ರಿಕೆಟ್‌ ಇತಿಹಾಸದ ಅತ್ಯಂತ ಕಿರಿಯ ನಾಯಕನಾಗಿ ಮೂಡಿಬಂದರು. ರವಿವಾರ ಇಲ್ಲಿನ “ಆ್ಯತ್ಲೆಟಿಕ್‌ ಗ್ರೌಂಡ್‌’ನಲ್ಲಿ ನಡೆದ ಐಸಿಸಿ ವಿಶ್ವಕಪ್‌ ಕ್ರಿಕೆಟ್‌ ಅರ್ಹತಾ ಪಂದ್ಯದಲ್ಲಿ ಸ್ಕಾಟ್ಲೆಂಡ್‌ ವಿರುದ್ಧ ತಂಡವನ್ನು ಮುನ್ನಡೆಸುವ ಮೂಲಕ ರಶೀದ್‌ ಈ ಹೆಗ್ಗಳಿಕೆಗೆ ಪಾತ್ರರಾದರು. ರವಿವಾರಕ್ಕೆ ರಶೀದ್‌ ವಯಸ್ಸು 19 ವರ್ಷ, 165 ದಿನವಾಗಿತ್ತು.

Advertisement

ಏಕದಿನ ಕ್ರಿಕೆಟಿನ ಈವರೆಗಿನ ಅತೀ ಕಿರಿಯ ನಾಯಕನೆಂಬ ದಾಖಲೆ ಬಾಂಗ್ಲಾದೇಶದ ರಜಿನ್‌ ಸಲೇಹ್‌ ಹೆಸರಲ್ಲಿತ್ತು. 2004ರ ದಕ್ಷಿಣ ಆಫ್ರಿಕಾ ಎದುರಿನ ಬರ್ಮಿಂಗಂ ಪಂದ್ಯದಲ್ಲಿ ಬಾಂಗ್ಲಾ ತಂಡವನ್ನು ಮೊದಲ ಸಲ ಮುನ್ನಡೆಯುವಾಗ ಸಲೇಹ್‌ ವಯಸ್ಸು 20 ವರ್ಷ, 297 ದಿನಗಳಾಗಿದ್ದವು. 14 ವರ್ಷಗಳ ಈ ದಾಖಲೆಯೀಗ ಪತನಗೊಂಡಿದೆ.

ಜಿಂಬಾಬ್ವೆಯ ತತೇಂದ ತೈಬು, ಪ್ರಾಸ್ಪರ್‌ ಉತ್ಸೇಯ, ನ್ಯೂಜಿಲ್ಯಾಂಡಿನ ಕೇನ್‌ ವಿಲಿಯಮ್ಸನ್‌, ಪಾಕಿಸ್ಥಾನದ ವಕಾರ್‌ ಯೂನಿಸ್‌ ಅನಂತರದ ಸ್ಥಾನದಲ್ಲಿದ್ದಾರೆ.

ಅತೀ ಕಿರಿಯ ಏಕದಿನ ನಾಯಕನೆಂಬ ಭಾರತೀಯ ದಾಖಲೆ ಸಚಿನ್‌ ತೆಂಡುಲ್ಕರ್‌ ಅವರದ್ದಾಗಿದೆ (23 ವರ್ಷ, 126 ದಿನ). ಈ ಯಾದಿಯಲ್ಲಿ ಸಚಿನ್‌ಗೆ 12ನೇ ಸ್ಥಾನ.

Advertisement

Udayavani is now on Telegram. Click here to join our channel and stay updated with the latest news.

Next