Advertisement

ಅಫ್ಘಾನಿಸ್ಥಾನ ವಿರುದ್ಧದ ಟೆಸ್ಟ್‌ ಅನಗತ್ಯ: ವೆಂಗ್‌ಸರ್ಕಾರ್‌

06:05 AM May 13, 2018 | |

ಹೊಸದಿಲ್ಲಿ: ಇಂಗ್ಲೆಂಡ್‌ ನೆಲದಲ್ಲಿ ಪ್ರತಿಷ್ಠೆಯ ಕ್ರಿಕೆಟ್‌ ಸರಣಿ ಆಡಲು ಭಾರತ ಸಿದ್ಧವಾಗುತ್ತಿರುವ ಸಮಯದಲ್ಲಿ ಅನಗತ್ಯವಾಗಿ ಅಫ್ಘಾನಿಸ್ಥಾನದೊಂದಿಗೆ ಟೆಸ್ಟ್‌ ಪಂದ್ಯ ಆಯೋಜಿಸಲಾಗಿದೆ, ಇದೊಂದು ಕೆಟ್ಟ ನಿರ್ಧಾರ ಎಂದು ಮಾಜಿ ಕ್ರಿಕೆಟಿಗ ದಿಲೀಪ್‌ ವೆಂಗ್‌ಸರ್ಕಾರ್‌ ಟೀಕಿಸಿದ್ದಾರೆ.

Advertisement

ಇಂಗ್ಲೆಂಡ್‌ ಸರಣಿಗೆ ಹೆಚ್ಚಿ ಮಹತ್ವ ನೀಡಿ ಅದಕ್ಕೆ ತಯಾರಿ ನಡೆಸುವುದನ್ನು ಬಿಟ್ಟು ಅಫ್ಘಾನಿಸ್ಥಾನ ತಂಡದ ಎದುರಿನ ಟೆಸ್ಟ್‌ ಬಗ್ಗೆ ಬಿಸಿಸಿಐ ಹೆಚ್ಚು ಚಿಂತಿಸುತ್ತಿದೆ ಎಂದು ವೆಂಗ್‌ಸರ್ಕಾರ್‌ ಹೇಳಿದರು.

ಭಾರತ ತಂಡ ಜೂ.14-18ರ ವರೆಗೆ ಬೆಂಗಳೂರಿನ “ಎಂ. ಚಿನ್ನಸ್ವಾಮಿ ಕ್ರೀಡಾಂಗಣ’ದಲ್ಲಿ ಅಫ್ಘಾನಿಸ್ಥಾನ ತಂಡದ ವಿರುದ್ಧ ಏಕೈಕ ಟೆಸ್ಟ್‌ ಪಂದ್ಯ ಆಡಲಿದೆ. ಇದು ಅಫ್ಘಾನಿಸ್ಥಾನ ಆಡುತ್ತಿರುವ ಪ್ರಥಮ ಟೆಸ್ಟ್‌ ಎಂಬುದು ವಿಶೇಷ.

ಈ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ಆಡುವುದಿಲ್ಲ. ಅವರು ಕೌಂಟಿ ಆಡಲು ತೆರಳುತ್ತಿರುವುದರಿಂದ ತಂಡಕ್ಕೆ ಅಲಭ್ಯರಾಗುತ್ತಿದ್ದಾರೆ. ಕೊಹ್ಲಿ ಬದಲು ಅಜಿಂಕ್ಯ ರಹಾನೆ ಭಾರತ ತಂಡವನ್ನು ಮುನ್ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next