Advertisement

Afghanistan; ಪೋಲಿಯೋ ಲಸಿಕೆಗೆ ತಾಲಿಬಾನ್‌ ತಡೆ: ವಿಶ್ವಸಂಸ್ಥೆ ಆರೋಪ

12:36 AM Sep 17, 2024 | Team Udayavani |

ಹೊಸದಿಲ್ಲಿ: ಅಫ್ಘಾನಿಸ್ಥಾನದಲ್ಲಿ ಪೋಲಿಯೋ ಲಸಿಕೆ ಅಭಿಯಾನ ನಡೆಸದಂತೆ ತಾಲಿಬಾನ್‌ ನಿಷೇಧ ಹೇರಿದೆ ಎಂದು ವಿಶ್ವಸಂಸ್ಥೆ ಸೋಮವಾರ ಮಾಹಿತಿ ನೀಡಿದೆ. ಪೋಲಿಯೋ ಕಾರಣದಿಂದ ಉಂಟಾಗಬಹುದಾದ ಪಾರ್ಶ್ವವಾಯು ಅಫ್ಘಾನಿಸ್ಥಾನದಲ್ಲಿ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದ್ದು, ಇದಕ್ಕೆ ಅಂತ್ಯಹಾಡಲು ದೇಶ ಸಫ‌ಲತೆ ಕಂಡಿಲ್ಲ. ಹೀಗಾಗಿ ವಿಶ್ವಸಂಸ್ಥೆ ಅಲ್ಲಿ ಪೋಲಿಯೋ ಲಸಿಕೆ ಅಭಿಯಾನ ಆರಂಭಿಸಲು ನಿರ್ಧರಿಸಿತ್ತು. ಆದರೆ ಅದಕ್ಕೂ ಮೊದಲೇ ತಾಲಿಬಾನ್‌ ಈ ಘೋಷಣೆ ಮಾಡಿದೆ.

Advertisement

ಈ ನಿಷೇಧಕ್ಕೆ ತಾಲಿಬಾನ್‌ ಯಾವುದೇ ಕಾರಣ ನೀಡಿಲ್ಲ ಹಾಗೂ ಪ್ರತಿಕ್ರಿಯೆಗೂ ಲಭ್ಯವಿಲ್ಲ ಎಂದು ವಿಶ್ವಸಂಸ್ಥೆ ಹೇಳಿದೆ. ಅಫ್ಘಾನಿಸ್ಥಾನ ದಲ್ಲೂ ಪೋಲಿಯೋದಿಂದ ಹೆಚ್ಚು ಸಮಸ್ಯೆಗಳು ಸೃಷ್ಟಿಯಾಗುತ್ತಿವೆ. ಅಲ್ಲಿಯೂ ಈ ಅಭಿಯಾನಕ್ಕೆ ಹಿಂಸಾ ಚಾರಗಳು ತಡೆಯೊಡ್ಡುತ್ತಲೇ ಇರುತ್ತವೆ.

Advertisement

Udayavani is now on Telegram. Click here to join our channel and stay updated with the latest news.

Next