Advertisement
“ಅಫ್ಘಾನಿಸ್ತಾನದಲ್ಲಿ ಏನಾಗುತ್ತಿದೆಯೋ ಅದರ ದುಷ್ಪರಿಣಾಮ ಜಮ್ಮು ಮತ್ತು ಕಾಶ್ಮೀರದಲ್ಲಿ ಸಂಭವಿಸಬಹುದು ಎಂದು ನಮಗೆ ತಿಳಿದಿದೆ, ನಾವು ಅದಕ್ಕೆ ಸಿದ್ಧರಾಗಿರಬೇಕು, ನಮ್ಮ ಗಡಿಗಳನ್ನು ಮುಚ್ಚಬೇಕು ಮತ್ತು ಸೂಕ್ತ ಮೇಲ್ವಿಚಾರಣೆಯ ಅಗತ್ಯವಿದೆ ಎಂದು ತಿಳಿಸಿದರು. ಹೊರಗಿನಿಂದ ಯಾರು ಬರುತ್ತಿದ್ದಾರೆ ಎಂಬುದನ್ನು ಸೂಕ್ಷ್ಮವಾಗಿ ನಾವು ಪರಿಶೀಲಿಸುತ್ತಿದ್ದೇವೆ” ಎಂದು ಗುವಾಹಟಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದರು.
Related Articles
Advertisement
“ಈ ಪ್ರದೇಶದಲ್ಲಿ ವಾಸಿಸುವ ಪ್ರತಿಯೊಬ್ಬರೂ ಅವರವರ ಕರ್ತವ್ಯವನ್ನು ಅರ್ಥಮಾಡಿಕೊಂಡರೆ, ನಾವು ಆಂತರಿಕ ಭದ್ರತೆಯನ್ನು ನೋಡಿಕೊಳ್ಳಲು ಸಾಧ್ಯವಾಗುತ್ತದೆ” ಎಂದು ಹೇಳಿದರು. ಆಂತರಿಕ ಭದ್ರತೆಗಾಗಿ ಜನರು ತಮ್ಮ ಕರ್ತವ್ಯಗಳನ್ನು ಪೂರೈಸುವಂತೆ ಅವರು ಕರೆ ನೀಡಿದರು.
“ಪ್ರತಿಯೊಬ್ಬ ನಾಗರಿಕನು ದೇಶ ರಕ್ಷಣೆಯ ಬಗ್ಗೆ ಕಾಳಜಿ ವಹಿಸಿ ತಮ್ಮ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸಿದರೆ ಎಲ್ಲರೂ ಪರಿಸ್ಥಿತಿಯನ್ನು ನಿಭಾಯಿಸಬಹುದು. ದೇಶದ ಪ್ರಜೆಯಾದವನು ಕಾಶ್ಮೀರದಲ್ಲೇ ಆಗಲಿ ಅಥವಾ ದೇಶದ ಯಾವುದೇ ಭಾಗದಲ್ಲಿ ವಾಸಿಸಿದರೂ ಕೂಡ ನಿಮ್ಮ ನೆರೆ ಹೊರೆಯಲ್ಲಿ ಬಂದು ವಾಸಿಸುವ ಜನರ ಬಗ್ಗೆ ನೀವು ತಿಳಿದಿರಬೇಕು ಎಂದು ಅವರು ಎಚ್ಚರಿಸಿದರು.
ನಾವು ಚುರುಕಾಗಿದ್ದರೆ ಯಾವುದೇ ಭಯೋತ್ಪಾದಕರು ನಮ್ಮ ನೆರೆಹೊರೆಯಲ್ಲಿ ಇರಲು ಸಾಧ್ಯವಿಲ್ಲ. ನಮ್ಮ ನೆರೆ ಹೊರೆಯಲ್ಲಿ ವಾಸಿಸುವವರ ಬಗ್ಗೆ ಉತ್ತಮ ಸಂಬಂಧ ಇರಿಸಿಕೊಳ್ಳಿ ಮತ್ತು ಅವರ ಮೂಲಭೂತ ಮಾಹಿತಿಗಳನ್ನು ತಿಳಿದುಕೊಳ್ಳಿ, ಒಂದು ವೇಳೆ ಅವರ ಕಾರ್ಯ ಚಟುವಟಿಕೆಗಳ ಬಗ್ಗೆ ಅನುಮಾನ ಬಂದರೆ ತಕ್ಷಣ ನಿಮ್ಮ ಹತ್ತಿರದ ಪೋಲಿಸ್ ಠಾಣೆಗೆ ಮಾಹಿತಿ ನೀಡಿ ಎಂದು ತಿಳಿಸಿದರು.