ಬ್ರಿಸ್ಬೇನ್: ಐಸಿಸಿ ಟಿ20 ವಿಶ್ವಕಪ್ 2022 ರಲ್ಲಿ ಸೆಮಿ ಫೈನಲ್ ಗೆ ಸ್ಪರ್ಧೆಯಿಂದ ಅಫ್ಘಾನಿಸ್ಥಾನವು ಹೊರಬಿದ್ದಿತು. ಇಂದು ಲಂಕಾ ವಿರುದ್ಧ ಸೋತ ಬಳಿಕ ಈಗಾಗಲೇ ಸೆಮಿ ಆಸೆ ಬಿಟ್ಟಿರುವ ನೆದರ್ಲ್ಯಾಂಡ್ ಬಳಿಕ ಎರಡನೇ ತಂಡವಾಗಿ ಅಫ್ಘಾನಿಸ್ತಾನ ಕೂಟದಿಂದ ಹೊರಬಿತ್ತು.
ಭಾನುವಾರ ನಡೆದ ಗ್ರೂಪ್ 2 ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಸೋತ ನಂತರ ನೆದರ್ಲ್ಯಾಂಡ್ ತಂಡವು ಸೆಮಿಫೈನಲ್ ರೇಸ್‌ನಿಂದ ಹೊರಬಿದ್ದಿತ್ತು. ಸೆಮಿ ಫೈನಲ್ ರೇಸ್‌ನಿಂದ ಹೊರಬಿದ್ದ ಪಂದ್ಯಾವಳಿಯಲ್ಲಿ ಮೊದಲ ತಂಡವಾಯಿತು.
ಇಂದು ಮಾಡು ಇಲ್ಲವೇ ಮಡಿ ಎಂಬಂತಹ ನಿರ್ಣಾಯಕ ಪಂದ್ಯದಲ್ಲಿ ಎಡವಿದ ಮೊಹಮ್ಮದ್ ನಬಿ ಹುಡುಗರು ಆರು ವಿಕೆಟ್ ಅಂತರದ ಸೋಲನುಭಿಸಿದರು.
ಇದನ್ನೂ ಓದಿ:42 ಪ್ರಯಾಣಿಕರನ್ನು ಹೊತ್ತ ಬಸ್ಸಿನಲ್ಲಿ ಏಕಾಏಕಿ ಬೆಂಕಿ… ಕ್ಷಣಮಾತ್ರದಲ್ಲಿ ಸುಟ್ಟುಕರಕಲು
ಗಾಬ್ಬಾದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ಥಾನ ತಂಡವು ಎಂಟು ವಿಕೆಟ್ ನಷ್ಟಕ್ಕೆ 144 ರನ್ ಗಳಿಸಿತು. ಸುಲಭವಾಗಿ ಗುರಿ ಬೆನ್ನತ್ತಿದ ಶ್ರೀಲಂಕಾ ತಂಡವು 18.3 ಓವರ್ ಗಳಲ್ಲಿ 148 ರನ್ ಗಳಿಸಿ ಜಯ ಸಾಧಿಸಿತು. ಸದ್ಯ ಶ್ರೀಲಂಕಾ ತಂಡವು ಎ ಗುಂಪಿನಲ್ಲಿ ಸದ್ಯ ನಾಲ್ಕು ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.