Advertisement
ಪಂದ್ಯ ಆರಂಭವಾಗುವ ಯಾವುದೇ ಸಾಧ್ಯತೆ ಕಂಡುಬರುತ್ತಿಲ್ಲ. ಹೀಗಾಗಿ ಟಾಸ್ ಕೂಡ ಹಾರಿಸಲಾಗದೆ, ಒಂದೂ ಎಸೆತ ಕಾಣದೆ ರದ್ದುಗೊಂಡ ಅಪರೂಪದ ಟೆಸ್ಟ್ ಪಂದ್ಯಗಳ ಸಾಲಿಗೆ ಇದು ಸೇರ್ಪಡೆಯಾಗಲಿದೆ.
1. ಇಂಗ್ಲೆಂಡ್-ಆಸ್ಟ್ರೇಲಿಯ,
ಓಲ್ಡ್ ಟ್ರಾಫರ್ಡ್, 1890
3 ದಿನದ ಟೆಸ್ಟ್ ಪಂದ್ಯಗಳ ಜಮಾನಾ ಇದಾಗಿತ್ತು. ಈ ಸರಣಿಯಲ್ಲಿ ಬರೋಬ್ಬರಿ 34 ಪ್ರಥಮ ದರ್ಜೆ ಪಂದ್ಯಗಳನ್ನು ಆಡಲಾಗಿತ್ತು. ಆಸ್ಟ್ರೇಲಿಯ 3ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಸಮಾಧಾನಕರ ಗೆಲುವಿನ ನಿರೀಕ್ಷೆಯಲ್ಲಿತ್ತು. ಆದರೆ
ಮಳೆ ಬಿಡಲಿಲ್ಲ.
Related Articles
ಓಲ್ಡ್ ಟ್ರಾಫರ್ಡ್, 1938
ಅದೇ ತಂಡ, ಅದೇ ಅಂಗಳದಲ್ಲಿ ಅರ್ಧ ಶತಮಾನದ ಬಳಿಕ ಆ್ಯಶಸ್ ಸರಣಿಯ 3ನೇ ಟೆಸ್ಟ್ ನಲ್ಲಿ ಎದುರಾದಾಗಲೂ ಮಳೆಯೇ ಆಟವಾಡಿತು. ಟಾಸ್ ಕೂಡ ಹಾರಿಸಲಾಗಲಿಲ್ಲ. ಆಗ ಟೆಸ್ಟ್ ಪಂದ್ಯ 4 ದಿನಗಳಿಗೆ ವಿಸ್ತರಿಸಲ್ಪಟ್ಟಿತ್ತು. ವಾಲೀ ಹ್ಯಾಮಂಡ್-ಡಾನ್ ಬ್ರಾಡ್‌ಮನ್ ನಾಯಕರಾಗಿದ್ದರು.
Advertisement
3. ಆಸ್ಟ್ರೇಲಿಯ-ಇಂಗ್ಲೆಂಡ್, ಮೆಲ್ಬರ್ನ್, 1970ಇದು ರದ್ದುಗೊಂಡರೂ ಇತಿಹಾಸ ನಿರ್ಮಿಸಿದ ಟೆಸ್ಟ್. ಕೊನೆಯ ದಿನ ಮಳೆ ಬಿಡುವು ಕೊಟ್ಟಾಗ ಇತ್ತಂಡಗಳ ನಡುವೆ ತಲಾ 60 ಓವರ್‌ಗಳ ಪಂದ್ಯವೊಂದನ್ನು ಆಡಿಸಲಾಯಿತು. ಈ ರೀತಿಯಾಗಿ ಏಕದಿನ ಕ್ರಿಕೆಟಿನ ಉದಯವಾಯಿತು. ಸರಣಿಯನ್ನು ಸರಿದೂಗಿಸಲು 7ನೇ ಟೆಸ್ಟ್ ಪಂದ್ಯವನ್ನೂ ಆಡಿಸಲಾಯಿತು. 4. ನ್ಯೂಜಿಲ್ಯಾಂಡ್-ಪಾಕಿಸ್ಥಾನ, ಡ್ಯುನೆಡಿನ್, 1989
ಸರಣಿಯ ಮೊದಲ ಟೆಸ್ಟ್‌ನ ಮೊದಲ 3 ದಿನಗಳ ಆಟ ಮಳೆಯಿಂದ ಸಾಧ್ಯವಾಗಲಿಲ್ಲ. ಆಗಲೇ ಪಂದ್ಯವನ್ನು ರದ್ದುಗೊಳಿಸಲಾಯಿತು. 4ನೇ ದಿನ ನಾಯಕರಾದ ಜಾನ್ ರೈಟ್ ಮತ್ತು ಇಮ್ರಾನ್ ಖಾನ್ ಏಕದಿನ ಪಂದ್ಯವಾಡಲು ಮುಂದಾದರು. ಹ್ಯಾಡ್ಲಿ 38ಕ್ಕೆ 5 ವಿಕೆಟ್ ಕಿತ್ತು ಮಿಂಚಿದರು. 5. ವೆಸ್ಟ್ ಇಂಡೀಸ್-ಇಂಗ್ಲೆಂಡ್, ಬೌರ್ಡಾ, 1990
ಮೊದಲ 3 ದಿನಗಳ ಆಟ ಸಾಧ್ಯವಾಗದ ಕಾರಣ ಪಂದ್ಯವನ್ನು ರದ್ದು ಎಂದು ಘೋಷಿಸಲಾಯಿತು. 4ನೇ ದಿನ ಮಳೆ ಇಲ್ಲದ ಕಾರಣ ಏಕದಿನ ಪಂದ್ಯ ಆಡಲು ನಿರ್ಧರಿಸಲಾಯಿತು. ಒದ್ದೆ ಆಂಗಳದಿಂದ ಇದು ಸಾಧ್ಯವಾಗಲಿಲ್ಲ. 5ನೇ ದಿನ 49 ಓವರ್‌ಗಳ ಪಂದ್ಯ ಏರ್ಪಟ್ಟಿತು. ವಿಂಡೀಸ್ ಜಯ ಸಾಧಿಸಿತು. 6. ಪಾಕಿಸ್ಥಾನ-ಜಿಂಬಾಬ್ವೆ, ಫೈಸಲಾಬಾದ್, 1998
ಡಿಸೆಂಬರ್‌ನ ದಟ್ಟ ಮಂಜಿನಿಂದಾಗಿ ರದ್ದುಗೊಂಡ ಟೆಸ್ಟ್ ಪಂದ್ಯವಿದು. ಜಿಂಬಾಬ್ವೆ ಪೇಶಾವರದ ಆರಂಭಿಕ ಟೆಸ್ಟ್ ಪಂದ್ಯವನ್ನು 7 ವಿಕೆಟ್‌ಗಳಿಂದ ಗೆದ್ದು ವಿದೇಶದಲ್ಲಿ ಮೊದಲ ಜಯಭೇರಿ ಮೊಳಗಿಸಿತ್ತು. 2ನೇ ಟೆಸ್ಟ್ ಡ್ರಾಗೊಂಡಿತ್ತು. ಅಂತಿಮ ಟೆಸ್ಟ್ ನಡೆಯದ ಕಾರಣ ಸರಣಿ ವಶಪಡಿಸಿಕೊಂಡು ಇತಿಹಾಸ ನಿರ್ಮಿಸಿತು. 7. ನ್ಯೂಜಿಲ್ಯಾಂಡ್-ಭಾರತ, ಡ್ಯುನೆಡಿನ್, 1998
ಕಾಕತಾಳೀಯವೆಂಬಂತೆ, ಪಾಕಿಸ್ಥಾನ- ಜಿಂಬಾಬ್ವೆ ನಡುವಿನ ಮೇಲಿನ ಟೆಸ್ಟ್ ಪಂದ್ಯ ರದ್ದುಗೊಂಡ ದಿನವೇ ನ್ಯೂಜಿ ಲ್ಯಾಂಡ್-ಭಾರತ ನಡುವಿನ ಡ್ಯುನೆಡಿನ್ ಟೆಸ್ಟ್ ಕೂಡ ರದ್ದುಗೊಂಡಿತು! ಸ್ಟೀವ್ ಡ್ಯುನೆ 2 ರದ್ದು ಟೆಸ್ಟ್‌ಗಳಿಗೆ ಸಾಕ್ಷಿಯಾದ ಏಕೈಕ ಅಂಪಾಯರ್ ಎನಿಸಿದರು. 1989ರ ಡ್ಯುನೆಡಿನ್ ಟೆಸ್ಟ್ ಪಂದ್ಯಕ್ಕೂ ಇವರು ಅಂಪಾಯರ್ ಆಗಿದ್ದರು.