Advertisement

ಸಿಖ್, ಹಿಂದೂಗಳು ಸೇರಿ 140 ಭಾರತೀಯರು ಅಫ್ಘಾನ್ ಬಿಟ್ಟು ತೆರಳದಂತೆ ತಾಲಿಬಾನ್ ತಡೆ!

03:56 PM Aug 26, 2021 | Team Udayavani |

ಕಾಬೂಲ್: ಅಫ್ಘಾನಿಸ್ತಾನದ ಕಾಬೂಲ್ ವಿಮಾನ ನಿಲ್ದಾಣದಲ್ಲಿರುವ ಸಿಖ್ ಸಮುದಾಯ ಮತ್ತು ಹಿಂದೂಗಳು ಸೇರಿದಂತೆ ಸುಮಾರು 140 ಮಂದಿ ಭಾರತಕ್ಕೆ ತೆರಳದಂತೆ ತಾಲಿಬಾನ್ ಉಗ್ರರು ತಡೆಯೊಡ್ಡಿರುವುದಾಗಿ ಸಿಎನ್ ಎನ್ ನ್ಯೂಸ್ 18 ವರದಿ ತಿಳಿಸಿದೆ.

Advertisement

ಇದನ್ನೂ ಓದಿ:ಪಾಕ್ ನಮಗೆ ಎರಡನೇ ಮನೆ ಇದ್ದಂತೆ: ಭಾರತದ ಜತೆ ಉತ್ತಮ ಬಾಂಧವ್ಯ: ತಾಲಿಬಾನ್ ಬಯಕೆ

ಕಾಬೂಲ್ ವಿಮಾನ ನಿಲ್ದಾಣದಲ್ಲಿ ಸುಮಾರು 140 ಮಂದಿ ಭಾರತೀಯರು ಏರ್ ಲಿಫ್ಟ್ ಗಾಗಿ ಕಾಯುತ್ತಿದ್ದು, ಏತನ್ಮಧ್ಯೆ ತಾಲಿಬಾನ್ ಉಗ್ರರು ಅಫ್ಘಾನ್ ಬಿಟ್ಟು ತೆರಳದಂತೆ ತಡೆಯೊಡ್ಡಲು ಪ್ರಯತ್ನಿಸುತ್ತಿರುವುದಾಗಿ ವರದಿ ವಿವರಿಸಿದೆ.

ಕೇಂದ್ರ ಸರ್ಕಾರದ ಅಂಕಿಅಂಶದ ಪ್ರಕಾರ, ಈಗಾಗಲೇ ಅಫ್ಘಾನಿಸ್ತಾನದಿಂದ 175 ಮಂದಿ ರಾಯಭಾರಿ ಕಚೇರಿ ಸಿಬಂದಿಗಳು, 263 ಭಾರತೀಯ ನಾಗರಿಕರು, ಹಿಂದೂಗಳು, ಸಿಖ್ಖರು ಸೇರಿದಂತೆ 112 ಅಫ್ಘಾನ್ ಪ್ರಜೆಗಳು, ಇತರ ದೇಶದ 15 ಮಂದಿ ಸೇರಿದಂತೆ ಈವರೆಗೆ 565 ಮಂದಿಯನ್ನು ಸ್ಥಳಾಂತರಿಸಲಾಗಿದೆ ಎಂದು ತಿಳಿಸಿದೆ.

ಭಾರತೀಯ ಪ್ರಜೆಗಳನ್ನು ಕರೆತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಎಲ್ಲಾ ರೀತಿಯಿಂದಲೂ ಶ್ರಮಿಸುತ್ತಿರುವುದಾಗಿ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಡಾ.ಎಸ್.ಜೈಶಂಕರ್ ಸರ್ವಪಕ್ಷಗಳ ಸಭೆಯಲ್ಲಿ ತಿಳಿಸಿದ್ದಾರೆ.

Advertisement

ದೇವಿ ಶಕ್ತಿ ಆಪರೇಶನ್ ಹೆಸರಿನಲ್ಲಿ ಈಗಾಗಲೇ 500ಕ್ಕೂ ಹೆಚ್ಚು ಮಂದಿಯನ್ನು ಕಾಬೂಲ್ ವಿಮಾನ ನಿಲ್ದಾಣದಿಂದ ಭಾರತಕ್ಕೆ ಕರೆತರಲಾಗಿದೆ. ಆದರೂ ಅಫ್ಘಾನಿಸ್ತಾನದಲ್ಲಿ ಇನ್ನೂ ಹಲವಾರು ಮಂದಿ ಭಾರತೀಯರನ್ನು ಸ್ಥಳಾಂತರಿಸಬೇಕಾಗಿದೆ ಎಂದು ಮಾಹಿತಿ ನೀಡಿರುವುದಾಗಿ ವರದಿ ಹೇಳಿದೆ.

ಆದಷ್ಟು ಶೀಘ್ರವಾಗಿ ಕಾಬೂಲ್ ನಲ್ಲಿರುವ ಭಾರತೀಯರನ್ನು ಸುರಕ್ಷಿತವಾಗಿ ಕರೆತರಲು ಕೇಂದ್ರ ಸರ್ಕಾರ ಬದ್ಧವಾಗಿದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಹೆಚ್ಚಿನ ಮಾತುಕತೆ ನಡೆಯಲಿದೆ ಎಂದು ಜೈಶಂಕರ್ ತಿಳಿಸಿರುವುದಾಗಿ ಎಎನ್ ಐ ನ್ಯೂಸ್ ಏಜೆನ್ಸಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next