Advertisement

ಹಿಂಸಾಚಾರ ಕೈಬಿಟ್ಟರೆ ಮಾತ್ರವೇ ಕೈದಿಗಳ ಬಿಡುಗಡೆಗೆ: ಘನಿ ಸರಕಾರ ಬಿಗು ಪಟ್ಟು

01:21 PM Mar 12, 2020 | Team Udayavani |

ಕಾಬೂಲ್‌: ಅಫ್ಘನ್‌ ನೆಲದಲ್ಲಿರುವ ಉಗ್ರ ಸಂಘಟನೆಗಳು ಹಿಂಸಾಚಾರ ನಡೆಸುವುದನ್ನು ಕೈಬಿಟ್ಟರೆ ಮಾತ್ರ, ಸರಕಾರದ ವಶದಲ್ಲಿರುವ 5,000 ತಾಲಿಬಾನ್‌ ಉಗ್ರರನ್ನು ಹಂತಹಂತವಾಗಿ ಬಿಡುಗಡೆ ಮಾಡಲಾಗುತ್ತದೆ. ಶಾಂತಿಯ ವಾತಾವರಣ ಇದ್ದಲ್ಲಿ, ಈ ವಾರದಿಂದಲೇ ಬಿಡುಗಡೆ ಪ್ರಕ್ರಿಯೆ ಆರಂಭಿಸಲಾಗುತ್ತದೆ ಎಂದು ಅಧ್ಯಕ್ಷ ಅಶ್ರಫ್ ಘನಿಯವರ ವಕ್ತಾರ ಸೆದಿಕ್‌ ಸೆದಿಕಿ ತಿಳಿಸಿದ್ದಾರೆ.

Advertisement

ಅಫ್ಘಾನಿಸ್ಥಾನದಲ್ಲಿರುವ ಅಮೆರಿಕ ಸೇನಾ ಪಡೆಗಳು ಹಂತಹಂತವಾಗಿ ಸ್ವದೇಶಕ್ಕೆ ಮರಳಾರಂಭಿಸಿವೆ ಎಂದು ಅಮೆರಿಕ ಪ್ರಕಟಿಸಿದ ಬೆನ್ನಲ್ಲೇ ಘನಿಯವರ ವಕ್ತಾರರಿಂದ ಈ ಹೇಳಿಕೆ ಹೊರಬಿದ್ದಿದೆ. ಆದರೆ ಈ ಹೇಳಿಕೆಯನ್ನು ತಾಲಿಬಾನ್‌ ತಿರಸ್ಕರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next