ಕಾಬೂಲ್: ಶ್ರೀಲಂಕಾದ ಹಂಬನ್ ತೋಟ ಮೈದಾನದಲ್ಲಿ ನಡೆಯಬೇಕಿದ್ದ ಅಫ್ಘಾನಿಸ್ಥಾನ ಮತ್ತು ಪಾಕಿಸ್ಥಾನ ನಡುವಿನ ಏಕದಿನ ಸರಣಿ ಇದೀಗ ಪಾಕಿಸ್ಥಾನಕ್ಕೆ ಸ್ಥಳಾಂತರವಾಗಿದೆ. ಅಫ್ಘಾನಿಸ್ಥಾನ ತಂಡದ ಪ್ರಯಾಣ ಸಮಸ್ಯೆಯೇ ಇದಕ್ಕೆ ಕಾರಣ.
ಸರಣಿಯನ್ನು ಶ್ರೀಲಂಕಾದ ಹಂಬಂಟೋಟಾದಿಂದ ಪಾಕಿಸ್ತಾನಕ್ಕೆ ಸ್ಥಳಾಂತರಿಸಲಾಗಿದೆ. ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ (ಎಸಿಬಿ) ಸಿಇಒ ಹಮೀದ್ ಶಿನ್ವಾರಿ ಇಎಸ್‌ಪಿಎನ್ ಕ್ರಿಕ್‌ಇನ್‌ಫೊಗೆ ದೃಡಪಡಿಸಿದ್ದಾರೆ. ತಾಲಿಬಾನ್ ದೇಶವನ್ನು ಸ್ವಾಧೀನಪಡಿಸಿಕೊಂಡ ನಂತರ ಕಾಬೂಲ್‌ನಿಂದ ಯಾವುದೇ ವಾಣಿಜ್ಯ ವಿಮಾನಗಳು ಹೊರಡುತ್ತಿಲ್ಲ ಅದಲ್ಲದೆ ಶ್ರೀಲಂಕಾ ಶುಕ್ರವಾರ 10 ದಿನಗಳ ಲಾಕ್‌ಡೌನ್ ಘೋಷಿಸಿದೆ.
ಅಫ್ಘಾನಿಸ್ತಾನ ತಂಡವು ಈ ವಾರದ ಕೊನೆಯಲ್ಲಿ ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸಲಿದೆ ಮತ್ತು ಸೆಪ್ಟೆಂಬರ್ 3 ರಿಂದ ಆರಂಭವಾಗಲಿರುವ ಏಕದಿನ ಪಂದ್ಯಗಳು ಸ್ಥಳವನ್ನು ಇನ್ನೂ ಘೋಷಿಸಿಲ್ಲ.
ಇದನ್ನೂ ಓದಿ:ಅಫ್ಘಾನ್ ಅನುಭವ : ಅಫ್ಘಾನ್‌ಗೆ ತೆರಳಿದ ಐದೇ ದಿನಕ್ಕೆ ಸಂಕಷ್ಟ ಆರಂಭ!
ಮಹತ್ವದ ಬೆಳವಣಿಗೆಯಲ್ಲಿ ಭಾನುವಾರ ಅಜೀಜುಲ್ಲಾ ಫಜ್ಲಿಯನ್ನು ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯ (ಎಸಿಬಿ) ಹೊಸ ಅಧ್ಯಕ್ಷರನ್ನಾಗಿ ಮರು ನೇಮಿಸಲಾಯಿತು. ಫಜ್ಲಿ ಈಗಾಗಲೇ ಎಸಿಬಿ ಅಧ್ಯಕ್ಷರಾಗಿ ಒಂದು ಅವಧಿಗೆ ಸೇವೆ ಸಲ್ಲಿಸಿದ್ದಾರೆ. ಇಂಗ್ಲೆಂಡ್‌ನಲ್ಲಿ 2019 ರ ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನದ ಕೊನೆಯ ಸ್ಥಾನವನ್ನು ಪಡೆದ ನಂತರ ಫಜ್ಲಿ ಬದಲಿಗೆ ಫರ್ಹಾನ್ ಯೂಸುಫ್‌ಜೈ ನೇಮಕ ಮಾಡಲಾಗಿತ್ತು.