Advertisement

ಅಫ್ಘಾನಿಸ್ಥಾನ: ತಾಲಿಬಾನ್‌ ಉಗ್ರರಿಂದ 20 ಸೈನಿಕರು, ಪೊಲೀಸರ ಹತ್ಯೆ

09:16 AM Apr 05, 2019 | Team Udayavani |

ಕಾಬೂಲ್‌ : ಅಫ್ಘಾನಿಸ್ಥಾನದ ಪಶ್ಚಿಮ ಬದ್ಗೀಸ್‌ ಪ್ರಾಂತ್ಯದಲ್ಲಿ ತಾಲಿಬಾನ್‌ ಉಗ್ರರು ಸರಕಾರಿ ಕಾರ್ಯಾಲಯದ ಆವರಣವನ್ನು ಪ್ರವೇಶಿಸಿ 20 ಸೈನಿಕರನ್ನು ಮತ್ತು ಪೊಲೀಸರನ್ನು ಹತ್ಯೆಗೈದರೆಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಅಮೆರಿಕದ ಪ್ರತಿನಿಧಿಗಳೊಂದಿಗೆ ಶಾಂತಿ ಮಾತುಕತೆ ನಡೆಸುತ್ತಿರುವಂತೆಯೇ ಇತ್ತ ಅಫ್ಘಾನ್‌ ಭದ್ರತಾ ಪಡೆಯನ್ನು ಗುರಿ ಇರಿಸಿ ದಿನ ನಿತ್ಯ ದಾಳಿ ನಡೆಸುತ್ತಿರುವ ತಾಲಿಬಾನ್‌ ಉಗ್ರರಿಂದ ನಡೆದಿರುವ ಹೊಸ ಹತ್ಯಾಕಾಂಡ ಇದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾತ್ರಿ ಮತ್ತು ದಿನಪೂರ್ತಿ ನಡೆದಿರುವ ಈ ಕಾಳಗದಲ್ಲಿ ಅಫ್ಘಾನ್‌ ಸೈನಿಕರ ಸಾವಿನ ಸಂಖ್ಯೆ ಹೆಚ್ಚಬಹುದೆಂಬ ಭೀತಿಯನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next