Advertisement

11 ತಾಲಿಬಾನ್ ಉಗ್ರರನ್ನು ಹೊಡೆದುರುಳಿಸಿ ಎಂಟು ಉಗ್ರರ ಬಂಧಿಸಿದ ಅಫ್ಘಾನ್ ಸೇನೆ

10:15 AM Oct 30, 2019 | Team Udayavani |

ನಂಗರ್ಹಾರ್: ಮಹತ್ವದ ಕಾರ್ಯಾಚರಣೆಯಲ್ಲಿ ಅಫ್ಘಾನಿಸ್ಥಾನದ ಸೇನೆ ಹನ್ನೊಂದು ತಾಲಿಬಾನ್ ಉಗ್ರರನ್ನು ಕೊಂದು, ಎಂಟು ಉಗ್ರರನ್ನು ಬಂಧಿಸಿದ ಘಟನೆ ಪೂರ್ವ ಅಫ್ಘಾನ್ ನ ನಂಗರ್ಹಾರ್ ನಲ್ಲಿ ಮಂಗಳವಾರ ನಡೆದಿದೆ.

Advertisement

ಅಪ್ಘಾನಿಸ್ಥಾನದ ರಾಷ್ಟ್ರೀಯ ರಕ್ಷಣಾ ನಿರ್ದೇಶನಾಲಯದ ಅಧಿಕಾರಿಗಳು ಈ ಬಗ್ಗೆ ಮಾಹಿತಿ ಬಹಿರಂಗಪಡಿಸಿದ್ದು, ಘಟನೆಯಲ್ಲಿ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದಿದ್ದಾರೆ.

ಬಲಿಲ್ ಖೇರ್ ಪ್ರದೇಶದಲ್ಲಿ ತಾಲಿಬಾನ್ ಉಗ್ರರ ಯುದ್ದ ಸಾಮಾಗ್ರಿ ಶಿಬಿರವನ್ನು ಪತ್ತೆ ಹಚ್ಚಿ ದಾಳಿ ಮಾಡಿದ್ದು, ಭಾರಿ ಪ್ರಮಾಣದಲ್ಲಿ ಯುದ್ದ ಸಾಮಾಗ್ರಿಗಳು, ಬಂದೂಕುಗಳು, ಎರಡು ಮೋಟಾರ್ ಬೈಕ್ ನ್ನು ನಾಶ ಮಾಡಲಾಗಿದೆ ಎಂದು ಸಂಸ್ಥೆ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next