ಕಾಬೂಲ್: ಅಫ್ಘಾನಿಸ್ಥಾನದಲ್ಲಿ ಅಶ್ರಫ್ ಘನಿಯವರ ಸರಕಾರ ಉರುಳಿದ ಬೆನ್ನಿಗೇ, ಅಲ್ಲಿ ತಾಲಿಬಾನಿಗಳು ಹಾಗೂ ಕೆಲವು ರಾಜಕೀಯ ನಾಯಕರ ನಡುವೆ ಶಾಂತಿ ಮಾತುಕತೆಗಳು ಏರ್ಪಟ್ಟಿವೆ. ಸದ್ಯದಲ್ಲೇ ಹಂಗಾಮಿ ಸರಕಾರವೊಂದು ಸ್ಥಾಪನೆಯಾಗುವ ಸಾಧ್ಯತೆ ದಟ್ಟವಾಗಿದ್ದು, ಆ ಸರಕಾರಕ್ಕೆ, ಈಗ ಅಮೆರಿಕದಲ್ಲಿ ನೆಲೆಸಿರುವ, ಅಫ್ಘಾನಿಸ್ಥಾನದ ಆಂತರಿಕ ವ್ಯವಹಾರ ಗಳ ಮಾಜಿ ಸಚಿವ ಅಲಿ ಅಹ್ಮದ್ ಜಲಾಯ್ ಮುಖ್ಯಸ್ಥರಾಗಲಿದ್ದಾರೆಂದು ಹೇಳಲಾಗಿದೆ.
ಶಾಂತಿ ಮಾತುಕತೆ ಮುಗಿಯುವವರೆಗೂ ತಾಲಿಬಾನಿ ಪಡೆಗಳು ಕಾಬೂಲ್ ಪ್ರವೇಶಕ್ಕೆ ತಡೆಯಿದೆ.
ಶೆರಿಯಾ ಕಾನೂನುಗಳಲ್ಲಿ ಪರಿಷ್ಕರಣೆ?: ತಾಲಿಬಾನಿಗಳು ಈ ಹಿಂದೆ ಅಧಿಕಾರದಲ್ಲಿದ್ದಾಗ ಪಾಲಿಸುತ್ತಿದ್ದ ಕಟ್ಟುನಿಟ್ಟಿನ ಶೆರಿಯಾ ಕಾನೂನುಗಳಲ್ಲಿ ಕೆಲವನ್ನು ಕೈಬಿಡುವಂತೆಯೂ ತಾಲಿಬಾನಿಗಳ ಮುಂದೆ ಕೆಲವು ಷರತ್ತುಗಳನ್ನಿಡಲಾಗಿದೆ ಎಂದು ಹೇಳಲಾಗಿದೆ. ಹೆಣ್ಣು ಮಕ್ಕಳನ್ನು ಶಾಲೆಗಳಿಗೆ ಕಳುಹಿಸುವುದು, ಮಹಿಳೆಯರ ಮತ್ತು ಮಕ್ಕಳ ಹಕ್ಕುಗಳ ಸಂರಕ್ಷಣೆಯನ್ನು ಮುಂದುವರಿಸಬೇಕು. ಸಣ್ಣಪುಟ್ಟ ತಪ್ಪುಗಳಿಗೆ ಅಂಗಾಂಗ ಛೇದನ, ಛಡಿ ಯೇಟು, ನೇಣು ಶಿಕ್ಷೆಯಂಥ ಅಮಾನವೀಯ ಶಿûಾ ಕ್ರಮಗಳನ್ನು ಕೈಬಿಡುವಂತೆಯೂ ಒತ್ತಾಯಿಸ ಲಾಗಿದೆ ಎಂದು ಹೇಳಲಾಗಿದೆ.
ವಿವಿಧ ದೇಶಗಳ ಜನರ ತೆರವು: ಅಫ್ಘಾನಿಸ್ಥಾನದಲ್ಲಿ ತಾಲಿಬಾನಿಗಳ ಆಡಳಿತ ಜಾರಿಗೊಳ್ಳುವುದು ಖಚಿತವಾಗು ತ್ತಿದ್ದಂತೆ ಅಮೆರಿಕ, ಜರ್ಮನಿ, ಯುಎಇ ಮುಂತಾದ ರಾಷ್ಟ್ರಗಳು, ಆಫ್ಘಾನಿಸ್ಥಾನದಲ್ಲಿರುವ ತಮ್ಮ ಪ್ರಜೆಗಳನ್ನು ಹಿಂದಕ್ಕೆ ಕರೆಯಿಸಿಕೊಳ್ಳಲಾರಂಭಿಸಿವೆ.
ವಾಜಿರ್ ಅಕºರ್ ಖಾನ್ ಜಿಲ್ಲೆಯಲ್ಲಿರುವ ತನ್ನ ದೂತಾ ವಾಸ ಕಚೇರಿಯಲ್ಲಿದ್ದ ತಮ್ಮ ಸಿಬಂದಿಯನ್ನು ಅಮೆರಿಕ, ರವಿವಾರದಂದು, ವಿಶೇಷ ವಿಮಾನಗಳಲ್ಲಿ ಹಿಂದಕ್ಕೆ ಕರೆಯಿಸಿಕೊಂಡಿತು. ಅಲ್ಲದೆ, ಅಫ್ಘಾನಿಸ್ಥಾನದಲ್ಲಿ ವಿವಿಧ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ತನ್ನ ಪ್ರಜೆಗಳು, ಪತ್ರಕರ್ತರನ್ನೂ ಹಿಂದಕ್ಕೆ ಕರೆಯಿಸಿಕೊಂಡಿದೆ.
ಜರ್ಮನಿಯು ತನ್ನ ಸೇನೆಯ “ಎ- 400′ ವಿಮಾನದಲ್ಲಿ 30 ಅರೆಸೇನಾ ಪಡೆಗಳನ್ನು ರವಾನಿಸಿ, ಅವರ ನೇತೃತ್ವದಲ್ಲಿ ರಾಜತಾಂತ್ರಿಕ ಸಿಬಂದಿಯನ್ನು, ತನ್ನ ಪ್ರಜೆಗಳನ್ನು ಹಿಂದಕ್ಕೆ ಕರೆಯಿಸಿಕೊಂಡಿದೆ. ಯುಎಇ ಕೂಡ ವಿಶೇಷ ವಿಮಾನಗಳ ಮೂಲಕ ತನ್ನ ಪ್ರಜೆಗಳನ್ನು, ರಾಜತಂತ್ರಜ್ಞರನ್ನು ಹಿಂದಕ್ಕೆ ಕರೆಯಿಸಿಕೊಂಡಿದೆ.