Advertisement

ನರಗುಂದ ಗುಡ್ಡದ ಸುತ್ತ ಅರಣ್ಯೀಕರಣ; ಸಚಿವ ಸಿ.ಸಿ.ಪಾಟೀಲ

05:58 PM Jul 09, 2022 | Team Udayavani |

ನರಗುಂದ: ಮಲಗಿದ ಸಿಂಹದಂತೆ ಗೋಚರಿಸುವ ಪಟ್ಟಣದ ಐತಿಹಾಸಿಕ ಹಿನ್ನೆಲೆಯ ಗುಡ್ಡದಲ್ಲಿ ಒಂದು ಕಾಲದಲ್ಲಿ ಸೀತಾ ಫಲ ಗಿಡಗಳು ಕಂಗೊಳಿಸುತ್ತಿದ್ದವು. ಇದೀಗ ಮತ್ತೆ ಆ ವೈಭವ ಮರುಕಳಿಸುವ ಪ್ರಯತ್ನದೊಂದಿಗೆ ಗುಡ್ಡದ ಸುತ್ತ ಇನ್ನೂ ಹೆಚ್ಚೆಚ್ಚು ಹಸಿರು ಬೆಳೆಸುವ ಮೂಲಕ ಅರಣ್ಯೀಕರಣ ಮಾಡಲಾಗುವುದು ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಹೇಳಿದರು.

Advertisement

ಶುಕ್ರವಾರ ಪಟ್ಟಣದ ಗುಡ್ಡದ ವಾರೆಯಲ್ಲಿರುವ ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನದಲ್ಲಿ ಗದಗ ಪ್ರಾದೇಶಿಕ ಅರಣ್ಯ ವಿಭಾಗ ಮತ್ತು ಸಾಮಾಜಿಕ ಅರಣ್ಯ ವಿಭಾಗದ ವತಿಯಿಂದ ಹಮ್ಮಿಕೊಂಡಿದ್ದ ವನಮಹೋತ್ಸವ-2022ರ ಕಾರ್ಯಕ್ರಮಕ್ಕೆ ಸಸಿ ನೆಟ್ಟು ನೀರುಣಿಸುವ ಮೂಲಕ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ನಾವು ಜೀವಿಸಲು ಅಗತ್ಯವಾಗಿ ಬೇಕಾದ ಆಮ್ಲಜನಕ ಪಡೆಯಲು ಹಸಿರು ಬೆಳೆಸಲೇಬೇಕು. ಆದರೆ, ಇಂದು ಗೃಹ ಬಳಕೆ ವಸ್ತುಗಳಿಗಾಗಿ ಗಿಡಗಳನ್ನು ಕಡಿಯುವ ಸಂದರ್ಭದಲ್ಲಿ ಮರಳಿ ಸಸಿ ನೆಟ್ಟು ಬೆಳೆಸುವುದು ವಿರಳವಾಗುತ್ತಿದೆ. ಹಿಂದೆ ನಾನು ಅರಣ್ಯ ಖಾತೆ ಸಚಿವನಾಗಿದ್ದಾಗ ಇಲ್ಲಿ ಟ್ರೀ ಪಾರ್ಕ್‌ ಸ್ಥಾಪಿಸಲು ನೆಟ್ಟ ಸಸಿಗಳು ಇಂದು ಹೆಮ್ಮರವಾಗಿ ಬೆಳೆದಿರುವುದು ನೋಡಿ ಬಹಳ ಸಂತಸವೆನಿಸುತ್ತಿದೆ. ಪರಿಶ್ರಮದಿಂದ ಸಸ್ಯೋದ್ಯಾನ ಸುಂದರಗೊಳಿಸಿದ ಅರಣ್ಯ ಇಲಾಖೆ
ಅಧಿಕಾರಿಗಳು, ಸಿಬ್ಬಂದಿಯನ್ನು ಅಭಿನಂದಿಸುತ್ತೇನೆ ಎಂದು ಸಚಿವ ಸಿ.ಸಿ.ಪಾಟೀಲ ಹೇಳಿದರು.

ಗುಡ್ಡದ ಮೇಲಿರುವ ಭೋರೂಕಾ ಪವರ್‌ ವಿಂಡ್‌ ಅವರಿಂದ ಸಿಎಸ್‌ಆರ್‌ ಫಂಡ್‌ ಇದ್ದರೆ ಅದರ ಮೂಲಕ ಗುಡ್ಡದ ಪ್ರದೇಶ ಇನ್ನೂ ಹೆಚ್ಚೆಚ್ಚು ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತದೆ. ಸಸ್ಯೋದ್ಯಾನಕ್ಕೆ ಬರಬೇಕಾದರೆ ಇರುವ 1 ಕಿಮೀ ಕಚ್ಚಾ ರಸ್ತೆಯನ್ನು ಸುಧಾರಣೆ ಮಾಡಿ ಪ್ರವಾಸಿಗರ ಸುಗಮ ಸಂಚಾರಕ್ಕೆ ಪ್ರಯತ್ನ ಮಾಡುತ್ತೇವೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಪ್ರಕಾಶ ಹಾದಿಮನಿ, ಚಂದ್ರಗೌಡ ಪಾಟೀಲ, ರಾಚನಗೌಡ ಪಾಟೀಲ, ಹುಸೇನಸಾಬ ಗೋಟೂರ, ಪ್ರಶಾಂತ ಜೋಶಿ, ಸುನೀಲ ಕುಷ್ಟಗಿ, ಟಿಎಪಿಸಿಎಂಎಸ್‌ ಅಧ್ಯಕ್ಷ ಅಜ್ಜಪ್ಪ ಹುಡೇದ, ಬಸು ಪಾಟೀಲ, ಸಿದ್ದಪ್ಪ ಯಲಿಗಾರ, ಹನುಮಂತ ಹವಾಲ್ದಾರ, ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ದೀಪಿಕಾ ಭಾಜಪೈ, ಆರ್‌.ಎಸ್‌ .ನಾಗಶೆಟ್ಟಿ, ಸಹಾಯಕ ಉಪಅರಣ್ಯ ಸಂರಕ್ಷಣಾಧಿಕಾರಿಗಳಾದ ವಿ.ಎಚ್‌.ಪರಿಮಳ, ಸಂಗಮೇಶ
ಪ್ರಕಾಕರ, ವಲಯ ಅರಣ್ಯಾಧಿ ಕಾರಿಗಳಾದ ರಾಜು ಗೋಂದಕರ, ಸ್ನೇಹಾ ಕೊಪ್ಪಳ, ಸತೀಶ ಮಾಲಾಪೂರ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಪಾಲ್ಗೊಂಡಿದ್ದರು.

Advertisement

ಗುಡ್ಡದ ಸುತ್ತ ಬಳ್ಳಾರಿ ಜಾಲಿ ತೀವ್ರಗತಿಯಲ್ಲಿ ಹಬ್ಬುತ್ತಿರುವುದರಿಂದ ಸೀತಾಫಲ ಫಸಲು ಕಣ್ಮರೆಯಾಗಿತ್ತು. ಇದೀಗ ಅರಣ್ಯ ಇಲಾಖೆಯಿಂದ ಗುಡ್ಡದ ಎರಡೂವರೆ ಹೆಕ್ಟೇರ್‌ ಪ್ರದೇಶದಲ್ಲಿ ಸೀತಾಫಲ ಬೆಳೆಸಲಾಗಿದ್ದು, ಇನ್ನೂ ಹೆಚ್ಚು ಸೀತಾಫಲ ಬೆಳೆಸಲಾಗುವುದು.
ಸಿ.ಸಿ.ಪಾಟೀಲ,
ಲೋಕೋಪಯೋಗಿ ಸಚಿವರು

Advertisement

Udayavani is now on Telegram. Click here to join our channel and stay updated with the latest news.

Next