ಅಫಜಲಪುರ: ರಾಜ್ಯದ ಜನತೆ ಕೋವಿಡ್ ಭೀತಿಯಿಂದ ತತ್ತರಿಸಿದ್ದಾರೆ. ದಿನದಿಂದ ದಿನಕ್ಕೆ ಪ್ರಕರಣಗಳು ಹೆಚ್ಚಾಗುತ್ತಿವೆ. ವಿಜ್ಞಾನ ಲೋಕಕ್ಕೆ ಸವಾಲಾಗಿರುವ ಈ ಮಹಾಮಾರಿಯಿಂದ ಎಲ್ಲರನ್ನು ರಕ್ಷಿಸು ಎಂದು ದತ್ತನಲ್ಲಿ ಮೊರೆ ಇಟ್ಟಿದ್ದೇನೆ ಎಂದು ಸಚಿವ ರಮೇಶ ಜಾರಕಿಹೊಳಿ ಹೇಳಿದರು.
ತಾಲೂಕಿನ ದೇವಲ ಗಾಣಗಾಪುರದ ದತ್ತಾತ್ರೇಯ ದೇವಸ್ಥಾನಕ್ಕೆ ಭೇಟಿ ನೀಡಿ, ಸಾಮಾಜಿಕ ಅಂತರ ಕಾಪಾಡಿಕೊಂಡು ದತ್ತನ ದರ್ಶನ ಪಡೆದು ಮಾತನಾಡಿದ ಅವರು, ಕೋವಿಡ್ ಮಹಾಮಾರಿಯಿಂದ ಜನಸಾಮಾನ್ಯರ ಬದುಕಿನ ಮೇಲೆ ಭಾರಿ ಹೊಡೆತ ಬಿದ್ದಿದೆ. ಸರ್ಕಾರಕ್ಕೂ ಈ ಸೋಂಕು ಸವಾಲೊಡ್ಡಿದೆ. ವೈದ್ಯ ಲೋಕ ಸೋಂಕಿನ ನಿಯಂತ್ರಣಕ್ಕೆ ಹರಸಾಹಸ ಪಡುತ್ತಿದೆ. ಈ ಹಿನ್ನೆಲೆಯಲ್ಲಿ ದೇವರು ಜನರ ರಕ್ಷಣೆ ಮಾಡಲಿ ಎಂದರು.
ಸಂಸದ ಡಾ| ಉಮೇಶ ಜಾಧವ, ಶಾಸಕರಾದ ಬಸವರಾಜ ಮತ್ತಿಮಡು, ರಾಜು ಗೌಡ, ಮಹೇಶ ಕುಮಟಳ್ಳಿ, ಮಾಜಿ ಶಾಸಕರಾದ ಮಾಲೀಕಯ್ಯ ಗುತ್ತೇದಾರ, ದೊಡ್ಡಪ್ಪಗೌಡ ಪಾಟೀಲ, ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ ರದ್ದೆವಾಡಗಿ, ಮಲ್ಲಿನಾಥ ಪಾಟೀಲ, ವಿಶ್ವನಾಥ ಕರೂರ, ಮುಖ್ಯ ಅರ್ಚಕರಾದ ಪ್ರಖ್ಯಾತಭಟ್ ಪೂಜಾರಿ, ನಂದಭಟ್ ಪೂಜಾರಿ, ವಿಶಾಲಭಟ್
ಪೂಜಾರಿ, ಪ್ರಸನ್ನಭಟ್ ಪೂಜಾರಿ, ಕರುಣಾಕರ ಭಟ್ ಪೂಜಾರಿ ಇದ್ದರು.