ನವ ದೆಹಲಿ : ಕೋವಿಡ್ ಸೋಂಕಿತ ಸೀನಿದಾಗ ಹಾಗೂ ಕೆಮ್ಮಿದಾಗ ಅಥವಾ ಉಸಿರು ಬಿಟ್ಟಾಗ ಬಾಯಿ ಮತ್ತು ಮೂಗಿನಿಂದ ಹೊರ ಬರುವ ಹನಿಗಳು 2 ಮೀಟರ್ ದೂರದವರೆಗೂ ಚಿಮ್ಮಿ ಬೀಳುತ್ತವೆ. ಆ ಹನಿಗಳ ಸಣ್ಣ ಕಣಗಳು ಅಥವಾ ಏರೋಸಾಲ್ ಗಾಳಿಯಲ್ಲಿ ಸುಮಾರು 10 ಮೀಟರ್‌ಗಳ ವರೆಗೂ ಸಾಗಬಹುದಾಗಿದೆ ಎಂದು ಸರ್ಕಾರ ತಮಾಹಿತಿ ನೀಡಿದೆ.
ಕೋವಿಡ್ ಸೋಂಕಿನ ಎರಡನೇ ಅಲೆಯ ಕಾರಣದಿಂದಾಗಿ ಇಡೀ ದೇಶದ ವೈದ್ಯಕೀಯ ವ್ಯವಸ್ಥೆ ಅಡಿಮೇಲಾಗಿದೆ. ಕೋವಿಡ್ ಸೋಂಕನ್ನು ನಿಯಂತ್ರಣ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಹೊಸ ಮಾರ್ಗ ಸೂಚಿಯನ್ನು ಬಿಡುಗಡೆಗೊಳಿಸಿ ಈ ಮಾಹಿತಿಯನ್ನು ನಿಡಿದೆ.
ಇದನ್ನೂ ಓದಿ : ಲಾಕ್ ಡೌನ್ ಮುಂದುವರಿಕೆ ಬಗ್ಗೆ ಮೇ.23ರಂದು ಸಿಎಂ ನಿರ್ಧಾರ: ಡಿಸಿಎಂ ಅಶ್ವಥ್ ನಾರಾಯಣ್
ಮಾಸ್ಕ್ ಧರಿಸುವುದು, ಅಂತರ ಕಾಯ್ದುಕೊಳ್ಳುವುದು, ಶುಚಿತ್ವ ಹಾಗೂ ಸಾಕಷ್ಟು ಗಾಳಿ ಇರುವಂತೆ ಗಮನಿಸುವುದರ ಕುರಿತು ಮಾರ್ಗಸೂಚಿಯಲ್ಲಿ ವಿವರಿಸಲಾಗಿದೆ.
ಹೊಸ ಕೋವಿಡ್ ಮಾರ್ಗ ಸೂಚಿಯನ್ನು ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರರ ಕಚೇರಿಯಿಂದ ಹೊರಡಿಸಲಾಗಿದ್ದು, ‘ತೆರೆದ ಸ್ಥಳಗಳಲ್ಲಿ ಅಥವಾ ಹೆಚ್ಚು ಗಾಳಿಯ ಸಂಚಾರ ಇರುವ ಜಾಗದಲ್ಲಿ ಕೋವಿಡ್ ವ್ಯಕ್ತಿಯಿಂದ ವ್ಯಕ್ತಿಗೆ ಹರಡುವ ಅಪಾಯ ಕಡಿಮೆ ಇದೆ. ತೆರೆದಿರುವ ಕಿಟಕಿಗಳು, ಬಾಗಿಲುಗಳು, ಫ್ಯಾನ್ ಮೂಲಕ ಸಾಕಷ್ಟು ಗಾಳಿಯು ಒಳಗೆ ಮತ್ತು ಹೊರಗೆ ಹೋಗುವ ವ್ಯವಸ್ಥೆಯು ವೈರಸ್ ಒಂದೇ ಸ್ಥಳದಲ್ಲಿ ಸೇರದಂತೆ ತಡೆಯುವುದರಿಂದ ಸೋಂಕು ಹರಡುವ ಸಾಧ್ಯತೆ ಕಡಿಮೆಯಾಗುತ್ತದೆ’ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.
ಕೋವಿಡ್ ಸೋಂಕಿತ ವ್ಯಕ್ತಿಗೆ ರೋಗದ ಲಕ್ಷಣಗಳು ಇಲ್ಲದಿದ್ದರೂ ಅವರಿಂದ ವೈರಸ್ ಹರಡಬಹುದಾಗಿರುತ್ತದೆ. ಮುಖ್ಯವಾಗಿ ಬಾಯಿಯಿಂದ ಹೊರ ಬೀಳುವ ಸಲೈವಾ ಹಾಗೂ ಮೂಗಿನಿಂದ ಹೊರಬೀಳುವ ಕಣಗಳು ಸೋಂಕು ಹರಡುವ ಪ್ರಾಥಮಿಕ ಸಾಧ್ಯತೆಗಳು ಎಂದು ತಿಳಿಸಿದೆ.
ಉಸಿರು ಹೊರಬಿಡುವಾಗ, ಮಾತನಾಡುವಾಗ, ಕೂಗುವಾಗ, ಹಾಡುವಾಗ, ನಗುವಾಗ, ಕೆಮ್ಮವಾಗ ಹಾಗೂ ಸೀನುವಾಗ ವೈರಸ್ ಹೊತ್ತ ಹನಿಗಳು ಚಿಮ್ಮುವ ಸಾಧ್ಯತೆ ಇರುವ ಕಾರಣದಿಂದಾಗಿ ಎರಡು ಮಾಸ್ಕ್ ಧರಿಸುವಂತೆ ಮಾರ್ಗಸೂಚಿಯಲ್ಲಿ ಕೇಂದ್ರ ಸರ್ಕಾರ ಸಲಹೆ ನೀಡಿದೆ.
ಇದನ್ನೂ ಓದಿ : ವಿಶ್ವಪರಂಪರಾ ಪಟ್ಟಿಯ ಸಂಭವನೀಯ ಸ್ಥಳಗಳಲ್ಲಿ ಹಿರೇಬೆಣಕಲ್ ಶಿಲಾಯುಗದ ಸಮಾಧಿಗಳ ಪ್ರಸ್ತಾಪ