ಮಹಾನಗರ: ಅಡ್ಯಾರಿನ ಸಹ್ಯಾದ್ರಿ ಕಾಲೇಜಿನ ಬಾನಂಗಳದಲ್ಲಿ ಶುಕ್ರವಾರ ಲೋಹದ ಹಕ್ಕಿಗಳ ಮಾದರಿ ಪ್ರದರ್ಶನ ಏರ್ಪಡಿಸಲಾಗಿತ್ತು. ಆಗಾಗ ಬಾನಂಗಳದಲ್ಲಿ ಹಾರಾಟ ನಡೆಸುವ ರಿಮೋಟ್ ವಿಮಾನ ನೆರೆದಿದ್ದ ಪ್ರೇಕ್ಷಕರನ್ನು ಆಕರ್ಷಿಸಿತ್ತು. ಇದಕ್ಕೆ ಸಾಕ್ಷಿಯಾದದ್ದು ಕಾಲೇಜಿನಲ್ಲಿ 2 ದಿನಗಳ ಕಾಲ ಆಯೋಜಿಸಿದ್ದ ನಾಲ್ಕನೇ ಆವೃತ್ತಿಯ “ಏರೊಫಿಲಿಯಾ- 2019′ ರಾಷ್ಟ್ರೀಯ ಮಟ್ಟದ ಸ್ಪರ್ಧೆ. ಏರೋ ಮಾದರಿ ಸ್ಪರ್ಧೆಯಲ್ಲಿ ವಿವಿಧ ಪ್ರೌಢಶಾಲಾ ವಿಭಾ ಗದಿಂದ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು ತಾವು ತಯಾರಿಸಿದ ವಿಮಾನ ಮಾದರಿಯನ್ನು ಪ್ರದರ್ಶಿಸಿದ್ದರು. ದೇಶದಲ್ಲೇ ಮೊದಲ ಬಾರಿಗೆ ಕಾಲೇಜು ಮಟ್ಟದಲ್ಲಿ ಸಹ್ಯಾದ್ರಿ ಕಾಲೇಜಿನಲ್ಲಿ ಇಸ್ರೋ ಹ್ಯಾಕಥಾನ್ ಸ್ಪರ್ಧೆಯನ್ನು ಕೂಡ ಆಯೋಜಿಸಲಾಗಿತ್ತು.
35 ತಂಡಗಳು
ಏರ್ ಶೋನಲ್ಲಿ ಕರ್ನಾಟಕ, ಗುಜರಾತ್, ಕೇರಳ, ಆಂಧ್ರಪ್ರದೇಶ, ಹರಿಯಾಣ ಸಹಿತ ಸುಮಾರು 31 ಎಂಜಿನಿ ಯರಿಂಗ್ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಒಟ್ಟಾರೆ 35 ತಂಡಗಳು ಸೇರಿ 500ಕ್ಕೂ ಮಿಕ್ಕಿ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಕಾರ್ಯಕ್ರಮಕ್ಕೆ ಸಾಕ್ಷಿ ಯಾದರು. ವಿದ್ಯಾರ್ಥಿಗಳು ತಾವೇ ತಯಾರಿಸಿದ ಸುಮಾರು 10ಕ್ಕೂ ಹೆಚ್ಚಿನ ಮಾದರಿಯ ಏರ್ ಕ್ರಾಫ್ಟ್ ನ ಮಾದರಿಗಳನ್ನು ವಿದ್ಯುತ್‌ಚಾಲಿತ ವ್ಯವಸ್ಥೆಯಲ್ಲಿ ರಿಮೋಟ್ ಕಂಟ್ರೋಲ್ ಮೂಲಕ ಪ್ರದರ್ಶಿಸಿದ್ದರು.
ಏರ್‌ಫೋರ್ಸ್, ಇಸ್ರೋ ಸಹಿತ ಪ್ರಮುಖ ಸಂಸ್ಥೆಗಳ ತಜ್ಞರು ಏರ್ ಶೋ ಕಾರ್ಯ ಕ್ರಮದಲ್ಲಿ ಭಾಗವಹಿದ್ದರು. ಏರೋ ಮಾದರಿ, ಡ್ರೋಣ್ ರೇಸ್ ಈ ಬಾರಿಯ ಶೋದ ಪ್ರಮುಖ ಆಕರ್ಷಣೆ ಯಾಗಿತ್ತು. ಆರ್‌ಸಿ ಮಾಡೆಲಿಂಗ್ ಬಗ್ಗೆ ಅತಿಥಿಗಳಿಂದ ತಾಂತ್ರಿಕವಾಗಿ ಚರ್ಚೆ ಕೂಡ ನಡೆಯಿತು.
ಸಮಾರಂಭದಲ್ಲಿ ಭಾರ ತೀಯ ನೌಕಾದ ಳದ ಮಾಜಿ ಕಮಾಂಡರ್ ಟಿ.ಆರ್.ಎ. ನಾರಾಯಣನ್ ಮಾತನಾಡಿ, ಏರೋ ಸ್ಪರ್ಧೆಗಳು ದೇಶದ ಕೆಲವೇ ಕಾಲೇಜು ಗಳಲ್ಲಿ ನಡೆಯುತ್ತಿದ್ದು, ಇದು ಹೊಸತನಕ್ಕೆ ಸಾಕ್ಷಿ ಯಾ ಗಿದೆ. ತಂತ್ರಜ್ಞಾನ ಕ್ಷೇತ್ರ ದಿನ ದಿಂದ ದಿನಕ್ಕೆಬೆಳೆಯುತ್ತಿದೆ ಎಂದು ಹೇಳಿ ದರು. ಇದೇ ವೇಳೆ ಇಸ್ರೋದ ಮನೀಶ್ ಸಕೆ°àನ, ಅಖೀಲೇಶ್ವರ್ ರೆಡ್ಡಿ ಪಿ., ಎಸ್‌ಎನ್‌ಆರ್ ರೂರಲ್ ಎಜುಕೇಶನ್ ಟ್ರಸ್ಟ್‌ನ ಅಶ್ವಿನ್ ಎಲ್. ಶೆಟ್ಟಿ, ಸ. ಸ.ಸಂಸ್ಥೆಯ ಅಧ್ಯಕ್ಷ ಮಂಜು ನಾಥ ಭಂಡಾರಿ, ಇಕಿ³àರಿಯನ್ಸ್ ಡಿಸೈನ್ ಇನ್ಫೋಸೀಸ್‌ನ ಮಾಜಿ ಮುಖ್ಯಸ್ಥ ರಾದ ಅಭಯ್ ಪವಾರ್, ಮಾಡೆಲ್ ಏರೋ ನ್ಪೋರ್ಟ್ಸ್ನ ನಿರ್ದೇಶಕ ರಾಘ ವೇಂದ್ರ ಬಿ.ಎಸ್., ವಿಶಾಲ್ ರಾವ್, ಡಾ| ಆನಂದ್ ವೇಣುಗೋಪಾಲ್, ಪಂಕಜ್ ರಾಯ್, ಡಾ| ಹಂಸರಾಜ್ ಆಳ್ವ ಮತ್ತಿತರರಿದ್ದರು.
ವಿದ್ಯಾರ್ಥಿಗಳೇ ಆಯೋಜನೆ
“ಈ ಬಾರಿಯ ಎರಡು ದಿನಗಳ ಎಲ್ಲ ರೀತಿಯ ಸ್ಪರ್ಧೆಗಳನ್ನು ವಿದ್ಯಾರ್ಥಿಗಳೇ ಆಯೋಜನೆ ಮಾಡಿದ್ದಾರೆ. ಕಾರ್ಯಕ್ರಮದ ಮೊದಲ ದಿನ ಏರೋಮಾಡಲಿಂಗ್, ಡ್ರೋನ್ ರೇಸ್, ಛಾಯಾಚಿತ್ರಗ್ರಹಣ, ಟಗ್ ಆಫ್ ಬಾಟ್ಸ್, ಇಸ್ರೋ ಹ್ಯಾಕಥಾನ್, ಏರ್ ಶೋ, ಟ್ರೆಷರ್ ಹಂಟ್, ಸಿಎಸ್. ಜಿಒ, ತಾಂತ್ರಿಕ ಸಂವಾದ, ವಾಟರ್ ರಾಕೆಟ್, ಗ್ಲೆ çಡರ್ ಕಾರ್ಯಾಗಾರ ನಡೆಯುತ್ತದೆ. ಎರಡನೇ ದಿನವಾದ ಶನಿವಾರ ಪೇಪರ್ ಪ್ರಸ್ತುತಿ, ತಾಂತ್ರಿಕ ಸಂವಾದ, ಪೇಪರ್ ಪ್ಲೇನ್, ರೋಬೋ ಸುಮೋ, ಓಪನ್ ಆರ್ಸಿ ಪ್ಲೇನ್ ಫ್ಲೆ çಯಿಂ, ಡೆತ್ ರೇಸ್ ಸ್ಪರ್ಧೆಗಳು ನಡೆಯಲಿವೆ ಎಂದು ಆಯೋಜಕರಲ್ಲಿ ಪ್ರಮುಖರಾದ ವಿದ್ಯಾರ್ಥಿ ಅಬ್ದುಲ್ ಶಮೀರ್ “ಸುದಿನ’ಕ್ಕೆ ತಿಳಿಸಿದ್ದಾರೆ.
1.75 ಲಕ್ಷ ರೂ. ಬಹುಮಾನ ಕಾರ್ಯಕ್ರಮಕ್ಕೆ ಆಗಮಿಸಿದ
ವಿದ್ಯಾರ್ಥಿ ಮತ್ತು ಸಾರ್ವಜನಿಕರೊಂದಿಗೆ ಗಣಿತ, ಇತಿಹಾಸ, ಕಲೆ, ಗ್ರಾಫಿಕ್ಸ್ ಹಾಗೂ ವಿಜ್ಞಾನದಲ್ಲಿ ತಮ್ಮ ಅನುಭವಗಳನ್ನು ಸ್ಪರ್ಧಿಗಳು ಹಂಚಿಕೊಂಡರು. ಏರೊಫಿಲಿಯಾ 2018ರ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಒಟ್ಟಾರೆ 1.75 ಲಕ್ಷ ರೂ. ನಗದು ಬಹುಮಾನ ನೀಡಲಾಗಿತ್ತು.