Advertisement

“ಮೇಕ್‌ ಇನ್‌ ಇಂಡಿಯಾ ಉಪಕ್ರಮದಡಿ ಪಾಲುದಾರಿಕೆಗೆ ಮುಕ್ತ ಅವಕಾಶ’

09:38 PM Jan 09, 2023 | Team Udayavani |

ನವದೆಹಲಿ: ಮೇಕ್‌ ಇನ್‌ ಇಂಡಿಯಾ ಉಪಕ್ರಮವು “ಪ್ರತ್ಯೇಕತೆ’ ಅಥವಾ ದೇಶಕ್ಕಾಗಿ ಮಾತ್ರ ಉದ್ದೇಶಿಸಿಲ್ಲ. ವಿವಿಧ ಸೇನಾ ಉಪಕರಣಗಳ ಉತ್ಪಾದನೆಗಾಗಿ ಭಾರತದೊಂದಿಗೆ ಪಾಲುದಾರಿಕೆಗೂ ಮುಕ್ತವಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಹೇಳಿದರು.

Advertisement

ಮುಂಬರುವ ಏರೋ ಇಂಡಿಯಾ ಪ್ರದರ್ಶನದ ಹಿನ್ನೆಲೆಯಲ್ಲಿ ವಿವಿಧ ದೇಶಗಳ ರಾಯಭಾರಿಗಳ ಸಭೆ ಉದ್ದೇಶಿಸಿ ಮಾತನಾಡಿದ ಅವರು, “ಇತರೆ ದೇಶಗಳಿಗಿಂತ ತಾವು ಶ್ರೇಷ್ಠ ಎಂದು ಭಾವಿಸುವ ಶ್ರೇಣೀಕೃತ ವಿಶ್ವ ಕ್ರಮವನ್ನು ಭಾರತ ನಂಬುವುದಿಲ್ಲ. ಇತರೆ ರಾಷ್ಟ್ರಗಳೊಂದಿಗೆ ಭಾರತದ ಸಂಬಂಧವು ಸಾರ್ವಭೌಮ ಸಮಾನತೆ ಮತ್ತು ಪರಸ್ಪರ ಗೌರವವನ್ನು ಆಧರಿಸಿವೆ,’ ಎಂದು ಪ್ರತಿಪಾದಿಸಿದರು.

ಈ ಮೂಲಕ ಬಲಪ್ರಯೋಗ ಆಧರಿಸಿದ ಚೀನದ ವಿಸ್ತರಣಾ ವಾದಕ್ಕೆ ರಾಜನಾಥ್‌ ಸಿಂಗ್‌ ಚಾಟಿ ಬೀಸಿದರು.

“ಭಾರತದ ಅಂತಾರಾಷ್ಟ್ರೀಯ ಸಂಬಂಧಗಳು ಮಾನವ ಸಮಾನತೆ ಮತ್ತು ಘನತೆಯಿಂದ ಮಾರ್ಗದರ್ಶಿಸಲ್ಪಟ್ಟಿದೆ. ಇದು ಗ್ರಾಹಕ ಅಥವಾ ಅಧೀನ ರಾಷ್ಟ್ರ ಮಾಡುವ ಅಥವಾ ಆಗುವುದನ್ನು ನಂಬುವುದಿಲ್ಲ,’ ಎಂದು ರಕ್ಷಣಾ ಸಚಿವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next