ಪಣಜಿ : ಗೋವಾದಲ್ಲಿ ಕಳೆದ ವರ್ಷ ರಕ್ಷಣಾ ಇಲಾಖೆಯ ಏರೋ ಇಂಡಿಯಾ ವೈಮಾನಿಕ ವಸ್ತು ಪ್ರದರ್ಶನ ಯಶಸ್ವಿಯಾಗಿ ನಡೆದ ಬೆನ್ನಲ್ಲೇ, ಮುಂದಿನ ತಿಂಗಳು ಬೆಂಗಳೂರಿನಲ್ಲಿ ಆಯೋಜಿಸಲು ಉದ್ದೇಶಿಸಿರುವ ದ್ವೆ„ವಾರ್ಷಿಕ ಏರೋ ಇಂಡಿಯಾ ಶೋ ಗೋವಾಕ್ಕೆ ಸ್ಥಳಾಂತರಗೊಳ್ಳುವ ಸಾಧ್ಯತೆಯಿದೆ. ಈ ಸಂಬಂಧ ಸುಳಿವು ನೀಡಿರುವ ರಕ್ಷಣಾ ಸಚಿವ ಮನೋಹರ್ ಪಾರೀಕರ್, ಮುಂದಿನ ಏರ್ ಶೋವನ್ನು ಫೆಬ್ರವರಿಯಲ್ಲಿ ಬೆಂಗಳೂರಿನಲ್ಲಿ ಆಯೋಜಿಸಲಾಗುವುದು. ಕಳೆದ ವರ್ಷ ರಕ್ಷಣಾ ಇಲಾಖೆಯ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ಗೋವಾದಲ್ಲಿ ಯಶಸ್ವಿಯಾಗಿ ಸಂಘಟಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಜನತೆ ಇಚ್ಛಿಸಿದರೆ ಏರೋ ಇಂಡಿಯಾ ಶೋ ಸೇರಿದಂತೆ ಎರಡೂ ಕಾರ್ಯಕ್ರಮಗಳನ್ನು ಗೋವಾಗೆ ಸ್ಥಳಾಂತರಿಸಲಾಗುವುದು ಎಂದು ಹೇಳಿದರು. ಮಡಗಾಂವ್ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದ ಅವರು, ರಕ್ಷಣಾ ಇಲಾಖೆಯ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ಹಾಗೂ ಏರೋ ಇಂಡಿಯಾ ಶೋಗೆ ಗೋವಾ ಸೂಕ್ತ ಸ್ಥಳವಾಗಿದೆ ಎಂದು ಅಭಿಪ್ರಾಯಪಟ್ಟರು.