Advertisement

Aero India 2025:ಇಂದು ರಾಯಭಾರಿಗಳ ಜತೆಗೆ ರಾಜನಾಥ್‌ ಸಭೆ

01:16 AM Jan 10, 2025 | Team Udayavani |

ಹೊಸದಿಲ್ಲಿ: ಬೆಂಗಳೂರಿನಲ್ಲಿ ಫೆ.10 ರಿಂದ 14ರ ವರೆಗೆ ನಡೆಯಲಿರುವ 2025ರ ಏರೋ ಇಂಡಿಯಾ ಶೋ ಹಿನ್ನೆಲೆಯಲ್ಲಿ ರಕ್ಷಣ ಸಚಿವ ರಾಜನಾಥ ಸಿಂಗ್‌ ಅವರು ಶುಕ್ರವಾರ ದಿಲ್ಲಿಯಲ್ಲಿ ರಾಯಭಾರ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ. ಕಾರ್ಯಕ್ರಮದ ರೂಪುರೇಷೆ, ಪ್ರಮುಖ ಸಭೆಗಳ ವಿವರ ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ ಎಂದು ರಕ್ಷಣ ಸಚಿವಾಲಯವು ಮಾಹಿತಿ ನೀಡಿದೆ. ಜತೆಗೆ ಕಾರ್ಯಕ್ರಮಕ್ಕೆ 150 ಮಿತ್ರ ರಾಷ್ಟ್ರಗಳ ರಾಯಭಾರಿಗಳು, ಹೈ ಕಮಿಷನರ್‌ಗಳಿಗೆ ಆಹ್ವಾನವನ್ನೂ ನೀಡಲಾಗಿದೆ ಎಂದೂ ಸಚಿವಾಲಯ ಹೇಳಿದೆ. ಫೆ. 10,11,12ರಂದು ಉದ್ಯಮ ಸಂಬಂಧಿಸಿದ ಸಭೆ, ಕಾರ್ಯಕ್ರಮಗಳು ಶೋ ನಲ್ಲಿ ನಡೆಯಲಿದ್ದು, ರಕ್ಷಣೆಗೆ ಸಂಬಂಧಿಸಿದ ಉಪಕರಣಗಳು, ತಂತ್ರಜ್ಞಾನದ ಪ್ರದರ್ಶನ, ಒಪ್ಪಂದಗಳಿಗೆ ಅವಕಾಶ ಸಿಗಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next