Advertisement
ಕಳ್ಳತನದಲ್ಲಿ ಭಾಗಿಯಾದ ಕೇರಳದ ನಾಲ್ವರು ಆರೋಪಿಗಳನ್ನು ಬಂಧಿಸಿದ ಪೊಲೀಸರು ನಗದು ಹಾಗೂ ಚಿನ್ನಾಭರಣಗಳನ್ನು ವಶಕ್ಕೆ ಪಡೆದುಕೊಳ್ಳಲು ಯತ್ನಿಸುತ್ತಿದ್ದಾರೆ.
Related Articles
ಬಾಯಾರಿನ ಈತ ಈವರೆಗೆ ಯಾವುದೇ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗಿರಲಿಲ್ಲ ಎನ್ನಲಾಗಿದೆ. ಹಣ ಕಳ್ಳತನಗೈಯುವಲ್ಲಿ ಸಫಲನಾಗಿದ್ದರೂ, ಅದನ್ನು ತನ್ನದಾಗಿಸುವ ಪ್ರಥಮ ಪ್ರಯತ್ನದಲ್ಲಿ ವಿಫಲನಾಗಿದ್ದಾನೆ.
ಅಡ್ಯನಡ್ಕ ಬ್ಯಾಂಕ್ ಕಳ್ಳತನ ಪ್ರಕರಣ ಫೆ. 7ರ ರಾತ್ರಿ ನಡೆದಿದ್ದು, ಫೆ.8ರಂದು ಬೆಳಗ್ಗೆ ಬ್ಯಾಂಕ್ ಅಧಿಕಾರಿಗಳು ಕಚೇರಿಗೆ ತೆರಳುವ ಸಂದರ್ಭದಲ್ಲಿ ಬೆಳಕಿಗೆ ಬಂದಿತ್ತು. ಆ ಬಳಿಕ ಸ್ಥಳೀಯ ಇಬ್ಬರನ್ನು ವಶಕ್ಕೆ ಪಡೆದು ಮಾಹಿತಿ ಸಂಗ್ರಹಿಸುವ ಜತೆಗೆ ವಾಹನದ ಚಲನವಲನವನ್ನು ಸಿಸಿ ಕೆಮರಾಗಳ ಮೂಲಕ ಪತ್ತೆ ಹಚ್ಚಿದ್ದರು. ವಾರದ ಹಿಂದೆ ಇಬ್ಬರು ಪ್ರಮುಖ ರೂವಾರಿಗಳನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದು, ಕದ್ದ ವಸ್ತುಗಳನ್ನು ನಾಲ್ಕು ಪಾಲು ಮಾಡಿಕೊಂಡಿರುವ ವಿಚಾರ ಆ ಸಂದರ್ಭದಲ್ಲಿ ತಿಳಿದು ಬಂದಿತ್ತು.
Advertisement
ಕೆಲವು ವರ್ಷಗಳಿಂದ ವೆಲ್ಡರ್ ಆಗಿ ಕೆಲಸ ನಿರ್ವಹಿಸುತ್ತಿರುವ ಬಾಯಾರು ಪೈವಳಿಕೆ ಗಾಳಿಯಡ್ಕ ನಿವಾಸಿ ಬ್ಯಾಂಕ್ ನ ಲಾಕರ್‌ಗಳನ್ನು ತುಂಡರಿಸಲು ಕಳ್ಳರ ಜತೆಗೆ ಸೇರಿಕೊಂಡಿದ್ದಾನೆ ಎಂಬುದು ಬಹಿರಂಗಗೊಂಡಿತ್ತು. ಲಾಕರ್‌ಗಳನ್ನು ತುಂಡರಿಸಿರುವ ಶೈಲಿಯನ್ನು ಗಮನಿಸಿದ ಪೊಲೀಸರಿಗೆ ಆಗಲೇ ಕಬ್ಬಿಣ ತುಂಡರಿಸಿ ನೈಪುಣ್ಯತೆ ಹೊಂದಿರುವ ವ್ಯಕ್ತಿ ಭಾಗಿಯಾಗಿರುವ ಅನುಮಾನ ಮೂಡಿದ್ದು, ತನಿಖೆಯಿಂದ ದೃಢ ಪಟ್ಟಿದೆ. ವೆಲ್ಡರ್ ಹಾಗೂ ಬ್ಯಾಂಕ್‌ನಲ್ಲಿ ಹಿಂದೆ ಇದ್ದ ಅಧಿಕಾರಿಯೊಬ್ಬರು ಸಂಬಂಧಿಕರಾಗಿದ್ದು, ಅವರಿಂದ ಮಾಹಿತಿ ಪಡೆಯಲಾಗಿರಬಹುದೇ ಎಂಬ ಶಂಕೆಯೂ ವ್ಯಕ್ತವಾಗಿದೆ.
ಕಳ್ಳತನಗೈದ ನಗದು ಮತ್ತು ಚಿನ್ನಾಭರಣಗಳನ್ನು ಪೊಸಡಿ ಗುಂಪೆ ಗುಡ್ಡದ ತಪ್ಪಲಿನ ಸಜಂಕಿಲ ಸಮೀಪ ನಿರ್ಜನ ಪ್ರದೇಶದಲ್ಲಿರುವ ಆಟದ ಮೈದಾನವೊಂದರಲ್ಲಿ ಕಳ್ಳರು ಹೂತಿಟ್ಟಿದ್ದರೆನ್ನಲಾಗಿದೆ.
ಸ್ಥಳೀಯರು ವಾಲಿಬಾಲ್ ಆಡುವ ಸಂದರ್ಭದಲ್ಲಿ 3ರಿಂದ 4ಸಾವಿರ ರೂಗಳಿಗೆ ಬೆಟ್ಟಿಂಗ್ ನಿಲ್ಲುತ್ತಿದ್ದ ಈತನ ಮೇಲೆ ಅನುಮಾನಗೊಂಡ ಕೆಲವರು ಆತನನ್ನು ಪ್ರಶ್ನಿಸಿದಾಗ ತನಗೆ ಲಾಟರಿಯಲ್ಲಿ ಹಣ ಬಂದಿದೆ ಎಂದು ಹೇಳಿಕೊಂಡಿದ್ದಾನೆ.