Advertisement

ರಾಜ್ಯದಲ್ಲಿ ಮಿಡತೆ ಹಾವಳಿ ನಿಯಂತ್ರಿಸಲು ರೈತರಿಗೆ ಸಲಹೆ

06:15 AM May 30, 2020 | Suhan S |

ಚಿಕ್ಕೋಡಿ: ಉತ್ತರ ಭಾರತದಲ್ಲಿ ರೈತರನ್ನು ಸಂಕಷ್ಟಕ್ಕೆ ಈಡು ಮಾಡಿರುವ ಮರಭೂಮಿ ಮಿಡತೆಗಳು ಈಗ ಮಹಾರಾಷ್ಟ್ರದ ಮೂಲಕ ರಾಜ್ಯ ಪ್ರವೇಶಿಸಿ ರೈತರ ಬೆಳೆಗಳನ್ನು ಹಾಳು ಮಾಡುವ ಸಂಭವ ಇದ್ದು, ಜಮೀನುಗಳನ್ನು ಮೇಲಿಂದ ಮೇಲೆ ಉಳುಮೆ ಹಾಗೂ ವಿವಿಧ ತರಹದ ಶಬ್ದಗಳ ಮೂಲಕ ಮಿಡತೆ ನಿಯಂತ್ರಿಸಲು ರೈತರು ಸಜ್ಜಾಗಬೇಕಿದೆ.

Advertisement

ಮರಭೂಮಿ ಮಿಡತೆ ಈಗಾಗಲೇ ಉತ್ತರ ಭಾರತದ ರಾಜ್ಯಗಳಾದ ಪಂಜಾಬ್, ಗುಜರಾತ್‌, ದೆಹಲಿಗಳಿಗೆ ವ್ಯಾಪಿಸಿದೆ. ಈಗ ಮಿಡತೆಗಳು ರಾಜ್ಯದಿಂದ ರಾಜ್ಯಕ್ಕೆ ಸಂಚರಿಸುತ್ತಿದ್ದು, ಕರ್ನಾಟಕದ ಪಕ್ಕದ ರಾಜ್ಯವಾದ ಮಹಾರಾಷ್ಟ್ರದ ರತ್ನಾಗಿರಿ ಜಿಲ್ಲೆಗೆ ಈಗಾಗಲೇ ದಾಳಿ ನಡೆಸಿವೆ.

ಪಶ್ಚಿಮ ಘಟ್ಟಗಳ ಮುಖಾಂತರ ಕರ್ನಾಟಕಕ್ಕೆ ಲಗ್ಗೆ ಇಡುವ ಸಾಧ್ಯತೆಗಳು ದಟ್ಟವಾಗಿವೆ. ರಾಜ್ಯದಲ್ಲಿ ಬೇಸಿಗೆಯಲ್ಲಿ ಬೆಳೆದ ಬೆಳೆಗಳನ್ನು ಮಿಡತೆಯಿಂದ ಕಾಪಾಡಲು ರೈತರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಲಿದೆ. ತೇವಾಂಶ ಹೊಂದಿರುವ ಮರಳು ಮಣ್ಣಿನಲ್ಲಿ ಮಿಡತೆಗಳು ತತ್ತಿ ಇಟ್ಟಿರುವ ಜಾಗ ಗುರುತಿಸಿ, ರಾಸಾಯನಿಕ ಸಿಂಪಡಿಸಿ ತತ್ತಿ ಹಂತದಲ್ಲಿ ನಾಶಪಡಿಸುವ ಮೂಲಕ ಮಿಡತೆ ಕೀಟವನ್ನು ನಿಯಂತ್ರಿಸಬೇಕು ಎಂದು ಚಿಕ್ಕೋಡಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ ಜನಮಟ್ಟಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next