ಶ್ರೀನಿವಾಸಪುರ: ಕೋವಿಡ್ ಸೋಂಕು ಹೆಚ್ಚಾಗುತ್ತಿದೆ ಆದರೂ ಜನ ಅರಿತುಕೊಳ್ಳದೇ ಸ್ವೇಚ್ಛಕಾರವಾಗಿ ತಿರುಗಾಡುತ್ತಿದ್ದಾರೆ. ಮನೆಯಿಂದ ಹೊರ ಹೋಗುವಾಗ ಮಾಸ್ಕ್ ಕಡ್ಡಾಯವಾಗಿ ಧರಿಸಿ ಓಡಾಡಿದರೆ ಸೋಂಕು ಪ್ರಕರಣ ಇಳಿಮುಖವಾಗಲು ಸಾಧ್ಯ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ವಿಜಯಾ ಅಭಿಪ್ರಾಯಿಸಿದರು.
ಜಾಗೃತಿ ಕಾರ್ಯಕ್ರಮ: ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಯಲ್ಲಿ ಗುತ್ತಿಗೆ ನೌಕರರು ಮುಷ್ಕರ ನಡೆಸುತ್ತಿರುವ ಬಗ್ಗೆ,ಕ್ವಾರಂಟೈನ್‌ಲ್ಲಿ ನೀಡಲಾಗುತ್ತಿರುವ ಸೌಲಭ್ಯಗಳು, ಆರೋಗ್ಯ ಇಲಾಖೆ ಕ್ರಮಗಳ ಕುರಿತು ಉದಯವಾಣಿ ಪ್ರಶ್ನಿಸಿದಾಗ, ಜನ ಎಚ್ಚರ ವಹಿಸದಿದ್ದರೆ ಹೆಚ್ಚು ಕೊರೊನಾ ಸೋಂಕು ಪ್ರಕರಣ ಕಾಣಿಸಿಕೊಳ್ಳಲಿವೆ. ಸರ್ಕಾರ ಅನೇಕ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರಿಗೆ ತಿಳಿವಳಿಕೆ ನೀಡಿದೆ.
ಸೋಂಕು ಒಳಗಾದವರು ಕೆಲವರು ಮೃತಪಟ್ಟರೂ ಮಾಸ್ಕ್ ಧರಿಸದೇ ಓಡಾಡುತ್ತಿದ್ದಾರೆ ಎಂದ ಅವರು, ಪ್ರತಿಯೊಬ್ಬರೂ ಮಾಸ್ಕ್ ಕಡ್ಡಾಯವಾಗಿ ಧರಿಸುವುದು, ಸ್ಯಾನಿಟೈಸರ್ ಬಳಕೆ ಮಾಡಬೇಕು, ಕನಿಷ್ಟ ಬೀದಿಗಳಲ್ಲಿ ಓಡಾಡುವಾಗ ಹಾಗೂ ಜನರು ಗುಂಪಾಗಿ ಇದ್ದಾಗ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕೆಂದರು. 60 ವರ್ಷ ಮೇಲ್ಪಟ್ಟವರು ಕಡ್ಡಾಯವಾಗಿ ತಪಾಸಣೆ ಮಾಡಿಸಿಕೊಳ್ಳಬೇಕು. ಕೆಮ್ಮು, ನೆಗಡಿ ಇತರೆ ಗಂಭೀರ ಕಾಯಿಲೆಗಳು ಬಂದಾಗ ಕೂಡಲೇ ಆಸ್ಪತ್ರೆಗೆ ಧಾವಿಸಿ ವೈದ್ಯರಲ್ಲಿ ಚಿಕಿತ್ಸೆ ಪಡೆದುಕೊಳ್ಳಬೇಕೆಂದರು.
ಅದೇ ರೀತಿ ಕಳೆ ಸೆಪ್ಟೆಂಬರ್ 24 ರಿಂದ ಎನ್‌ಹೆಚ್‌ಎಂ ನೌಕರರು ಮುಷ್ಕರ ಆರಂಬಿಸಿದ್ದಾರೆ ಹಾಗಾಗಿ ಅವರಿಲ್ಲದೇ ಕೆಲವು ಕೆಲಸ ಕಾರ್ಯಗಳಿಗೆ ತೊಂದರೆಯಾಗುತ್ತಿಲ್ಲವೇ ಎಂದಾಗ ಅವರ ಬೇಡಿಕೆಗಳಿಗಾಗಿ ಮುಷ್ಕರ ಆರಂಬಿಸಿದ್ದಾರೆ ಹಾಗಾಗಿ ಗಣಕ ಯಂತ್ರಗಳ ಕೆಲಸ ಮಾಡುವಲ್ಲಿ ಸ್ವಲ್ಪ ತೊಂದರೆಯಾಗಿದೆ ಹಾಗೆಯೇ ನರ್ಸುಗಳು ಮುಷ್ಕರದಲ್ಲಿರುವುದರಿಂದ ಸಮಸ್ಯೆಯಾದರೂ ಇರುವವರನ್ನು ಕೆಲಸದಲ್ಲಿ ಬಳಸಿಕೊಳ್ಳಲಾಗುತ್ತದೆ ಸರ್ಕಾರದ ಆದೇಶದಂತೆ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ಕ್ವಾರಂಟೈನ್‌ಲ್ಲಿರುವವರಿಗೆ ಮೂರುಬಾರಿ ತಪಾಸಣೆ : ಕ್ವಾರಂಟೈನ್‌ನಲ್ಲಿ ಇರುವವರಿಗೆ ಸೂಕ್ತ ಸೌಲಭ್ಯ ಸಿಗುತ್ತಿಲ್ಲವೆಂಬ ಆರೋಪಗಳ ಬಗ್ಗೆ ತಾಲೂಕು ಆರೋಗ್ಯಾಧಿಕಾರಿ ಡಾ.ವಿಜಯಾ ಅವರನ್ನು ಗಮನ ಸೆಳೆದಾಗ, ಪ್ರಸ್ತುತ ಅಂತಹ ಸಮಸ್ಯೆಗಳಿಲ್ಲ. ಈಗಕ್ವಾರಂಟೈನ್‌ಲ್ಲಿರುವ ಮಂದಿಗೆ ಬೆಳಗಿನ ತಿಂಡಿ, ಮಧ್ಯಾಹ್ನ ಹಾಗೂ ರಾತ್ರಿ ಊಟ ಮತ್ತು ಬಿಸಿ ನೀರು ಕೊಡಲಾಗುತ್ತಿದೆ. ಪಾಳೆಯ ರೀತಿಯಲ್ಲಿ ಇಬ್ಬರು ವೈದ್ಯರು ಸ್ಟಾಫ್ ನರ್ಸ್ ಹಾಗೂ ಮತ್ತಿಬ್ಬರು ಸೇರಿ 6 ಮಂದಿ ಕ್ವಾರಂಟೈನಲ್ಲಿದ್ದು ಕೆಲಸ ಮಾಡುತ್ತಿದ್ದಾರೆ. ಪ್ರತಿದಿನ3 ಬಾರಿ ಕ್ವಾರಂಟೈನ್‌ಲ್ಲಿರುವವರನ್ನು ತಪಾಸಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.