Advertisement

ಧರ್ಮ ಪ್ರವೃತ್ತಿ ಅಳವಡಿಸಿಕೊಳ್ಳಲು ಸಲಹೆ

10:38 AM May 17, 2022 | Team Udayavani |

ಧಾರವಾಡ: ಶಿಕ್ಷಣ ಮತ್ತು ವೃತ್ತಿಯಲ್ಲಿ ಧರ್ಮ ಪ್ರವೃತ್ತಿ ಅಳವಡಿಸಿಕೊಂಡು ಮುನ್ನಡೆಯಬೇಕು ಎಂದು ಎಸ್‌ ಡಿಎಂ ವಿವಿಯ ಉಪ ಕುಲಪತಿ ಡಾ|ನಿರಂಜನಕುಮಾರ್‌ ಹೇಳಿದರು.

Advertisement

ಇಲ್ಲಿಯ ಸತ್ತೂರಿನ ಎಸ್‌ಡಿಎಂ ದಂತ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ 36ನೇ ಬ್ಯಾಚ್‌ನ ದಂತ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಣವು ಕೇವಲ ಡಿಗ್ರಿಯನ್ನು ತೆಗೆದುಕೊಳ್ಳುವುದು ಅಷ್ಟೇ ಅಲ್ಲ; ನಮ್ಮ ಉತ್ತಮ ಬದುಕನ್ನು ರೂಪಿಸಲು ಸಹಾಯವಾಗುತ್ತದೆ. ನಾವು ಅಭ್ಯಾಸ ಮಾಡುವ ಸ್ಥಳದಲ್ಲಿ ಸಿಗುವ ಎಲ್ಲಾ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳು ತಮ್ಮ ಜವಾಬ್ದಾರಿ ಅರ್ಥ ಮಾಡಿಕೊಳ್ಳಬೇಕು ಎಂದರು.

ವಿದ್ಯಾರ್ಥಿಗಳು ಯಾವುದೇ ಕೋರ್ಸ್‌ಗಳಿಗೆ ಸೇರಿದ ನಂತರ ಅವರ ಪಾತ್ರವನ್ನು ಅರ್ಥ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳು ಯಾವುದೇ ಕೋರ್ಸ್‌ಗಳನ್ನು ಸ್ವಇಚ್ಛೆಯಿಂದ ಆರಿಸಿಕೊಳ್ಳಬೇಕು. ಬೇರೆಯವರ ಒತ್ತಾಯಕ್ಕೆ ಆಯ್ಕೆ ಮಾಡಬಾರದು. ಸರಿಯಾದ ಗುರಿಗಳೊಂದಿಗೆ ವಿದ್ಯಾರ್ಥಿಗಳು ವೃತ್ತಿಪರ ಕೋಸ್‌ ìಗಳನ್ನು ಆಯ್ದುಕೊಳ್ಳಬೇಕು ಎಂದರು.

ವಿದ್ಯಾರ್ಥಿಗಳು ಇಂದು ತೆಗೆದುಕೊಳ್ಳುವ ನಿರ್ಧಾರಗಳು ಅವರ ಮುಂದಿನ ಜೀವನ ರೂಪಿಸುತ್ತದೆ. ಹೀಗಾಗಿ ನಿರಂತರ ಓದುವ ಅಭ್ಯಾಸವು ತಜ್ಞರನ್ನಾಗಿಸಿವುದಲ್ಲದೆ ಉತ್ತಮ ದಂತ ವೈದ್ಯರನ್ನಾಗಿ ರೂಪಿಸುತ್ತದೆ. ವೈದ್ಯರು ತಮ್ಮ ವೃತ್ತಿಯನ್ನು ಪ್ರೀತಿಸಬೇಕು. ಗೌರವಿಸಬೇಕು. ವಿದ್ಯಾರ್ಥಿಗಳಲ್ಲಿ ಪ್ರಶ್ನೆಗಳನ್ನು ಕೇಳುವ ಅಭ್ಯಾಸ ರೂಡಿಸಿಕೊಳ್ಳಬೇಕು. ಇದರಿಂದ ಅವರ ಅಧ್ಯಯನದ ಕಲಿಕೆ ಉತ್ತಮವಾಗಿರುತ್ತದೆ ಎಂದರು.

Advertisement

ಎಸ್‌ಡಿಎಂ ದಂತ ಮಹಾವಿದ್ಯಾಲಯವನ್ನು ಆಯ್ಕೆ ಮಾಡಿದ ವಿದ್ಯಾರ್ಥಿಗಳು-ಪೋಷಕರನ್ನು ಅಭಿನಂದಿಸಿದ ಅವರು, ಧಾರವಾಡದ ಎಲ್ಲಾ ಉತ್ತಮ ಮೂಲಸೌಕರ್ಯ ಸೌಲಭ್ಯ ಪಡೆದ ಕೆಲವೇ ಕಾಲೇಜುಗಳಲ್ಲಿ ಒಂದಾಗಿದ್ದು, ಕ್ಲಿನಿಕಲ್‌ ತರಬೇತಿಗಾಗಿ ಉತ್ತಮ ಸಂಖ್ಯೆಯ ರೋಗಿಗಳು ಮತ್ತು ಅರ್ಹ ಮತ್ತು ಅನುಭವಿ ದಂತ ವೈದ್ಯರನ್ನು ಹೊಂದಿದೆ ಎಂದರು.

ಸಹ ಉಪಕುಲಪತಿ ಡಾ|ಎಸ್‌.ಕೆ. ಜೋಶಿ ಮಾತನಾಡಿದರು. ಕಾರ್ಯ ನಿರ್ವಾಹಕ ನಿರ್ದೇಶಕರಾದ ಪದ್ಮಲತಾ ನಿರಂಜನ, ಆಡಳಿತ ನಿರ್ದೇಶಕ ಸಾಕೇತ ಶೆಟ್ಟಿ, ವಿಶ್ವವಿದ್ಯಾಲಯದ ಕುಲಸಚಿವ ಡಾ|ಚಿದೇಂದ್ರ ಶೆಟ್ಟರ, ಹಣಕಾಸು ಅಧಿ ಕಾರಿ ವಿ.ಜಿ.ಪ್ರಭು ಸೇರಿದಂತೆ ದಂತ ವೈದ್ಯಕೀಯ ಕಾಲೇಜಿನ ಉಪ ಪ್ರಾಂಶುಪಾಲರು ಇದ್ದರು. ಡಾ|ಶೃತಿ ಪಾಟೀಲ ಅವರು ನೂತನ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ವಾಚಿಸಿದರು.

ದಂತ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ|ಬಲರಾಮ ನಾಯ್ಕ ಸ್ವಾಗತಿಸಿದರು. ಡಾ|ವಾಣಿ ನಿರಂಜನ್‌, ಡಾ| ಜೋಸ್ಸ್ನ ನಿರೂಪಿಸಿದರು. ಡಾ|ವೇದಾ ಹೆಗ್ಡೆ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next