Advertisement

ಯೋಜನೆಗಳ ಸದ್ಬಳಕೆಗೆ ಸಲಹೆ

02:57 PM Jan 12, 2018 | Team Udayavani |

ಶಹಾಪುರ: ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹೈ. ಕ ಭಾಗದ ಮಹಿಳೆಯರ ಆಶಾ ಕಿರಣವಾಗಿದೆ. ಉದ್ಯೋಗ ನೀಡುವ ಮೂಲಕ ಮಹಿಳೆಯರ ಬದುಕಿನಲ್ಲಿ ಹೊಸ ಚೈತನ್ಯ ಮೂಡಿಸಿದೆ ಎಂದು ಮಾಜಿ ಜಿಪಂ ಸದಸ್ಯ ಬಸನಗೌಡ
ಸುಬೇದಾರ ಹೇಳಿದರು.

Advertisement

ತಾಲೂಕಿನ ಸಗರ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ವತಿಯಿಂದ ನಡೆದ ಹೈನುಗಾರಿಕೆ ಮತ್ತು ಸ್ವ- ಉದ್ಯೋಗ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಹಿಳೆಯರ ಸ್ವಾವಲಂಬಿ ಬದುಕಿಗೆ ಆಸರೆಯಾದ ಧರ್ಮಸ್ಥಳ ಸಂಸ್ಥೆ ಹಲವು ಯೋಜನೆಗಳನ್ನು ಹಾಕಿಕೊಂಡಿದ್ದು, ಕೆಲಸವಿಲ್ಲದೆ ಬದುಕಿನ ಭರವಸೆ ಕಳೆದುಕೊಂಡಿದ್ದ ಅನೇಕ ಕುಟುಂಬಗಳಿಗೆ ಆಸರೆಯಾಗಿದೆ. ಕರಕುಶಲ, ಕೈಗಾರಿಕೆ ಸೇರಿದಂತೆ ಹೈನುಗಾರಿಕೆ ಇತರೆ ಮಹಿಳೆಯರ ಕೆಲಸಗಳಿಗೆ ಸೂಕ್ತ ತರಬೇತಿ ನೀಡಿ, ವ್ಯಾಪಾರ ವಹಿವಾಟು ಮಾಡಲು ಪ್ರೋತ್ಸಾಹ ಧನ ನೀಡುತ್ತಿದೆ. ಸಂಸ್ಥೆಯ ಯೋಜನೆಗಳ ಸದುಪಯೋಗ ಪಡೆಯಬೇಕು ಎಂದರು.

ಯೋಜನಾಧಿಕಾರಿ ಮೋಹನ ಕೆ. ಯೋಜನೆಯ ಉದ್ದೇಶ ಮತ್ತು ಕ್ಷೇತ್ರದ ಹಿನ್ನೆಲೆ ಬಗ್ಗೆ ಸವಿವರವಾಗಿ ತಿಳಿಸಿದರು.
ಪಶು ಸಂಗೋಪನ ಇಲಾಖೆ ಅಧಿಕಾರಿ ಡಾ| ವಿಜಯಕುಮಾರ ಹೈನುಗಾರಿಕೆಯ ಲಾಭ ಕುರಿತು ಮಾಹಿತಿ ನೀಡಿದರು. ಸಮಾಜ ಸೇವಕಿ ಸರಸ್ವತಿ ಬಿರಾದಾರ ಮಹಿಳೆಯ ಸ್ವಾವಲಂಬನೆ ಬಗ್ಗೆ ಮಾತನಾಡಿದರು. ಲಕ್ಷ್ಮೀಕಾಂತ ಕುಲಕರ್ಣಿ ಸೋಲಾರ ಅಳವಡಿಕೆ ಕುರಿತು ಮಾಹಿತಿ ನೀಡಿದರು. ಗ್ರಾಪಂ ಅಧ್ಯಕ್ಷ ಮಾನಪ್ಪ ವಠಾರ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಮುಖಂಡರಾದ ಸಿದ್ದನಗೌಡ ಸುಬೇದಾರ, ಭೀಮರಾಯ ಸೇರಿ ಉಪಸ್ಥಿತರಿದ್ದರು. ಕೃಷಿ ಅಧಿಕಾರಿ ಪ್ರಕಾಶ ಜಿ. ನಿರೂಪಿಸಿದರು. ಮಲ್ಲಿಕಾರ್ಜನ ಸ್ವಾಗತಿಸಿದರು. ಗ್ರಾಮದ ಸೇವಾ ಪ್ರತಿನಿಧಿಗಳಾದ ಶಿಲ್ಪಾ, ಶ್ರೀದೇವಿ, ಸೇರಿದಂತೆ ಗ್ರಾಮದ ಮಹಿಳೆಯರು ಇತರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next