Advertisement

ತುರ್ತು ಸೇವೆ ಅಗತ್ಯತೆ ಅರಿತುಕೊಳ್ಳಲು ಸಲಹೆ

05:34 PM Feb 24, 2022 | Shwetha M |

ತೇರದಾಳ: ತುರ್ತು ಸಂದರ್ಭಗಳನ್ನು ನಿರ್ವಹಿಸುವ ಅಗತ್ಯ ಜ್ಞಾನವಿದ್ದಲ್ಲಿ ಹೆಚ್ಚಿನ ಅನಾಹುತ ತಡೆಗಟ್ಟಲು ಸಾಧ್ಯ ಎಂದು ಜಿಲ್ಲಾ ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಅಧಿಕಾರಿ ಮಲ್ಲಿಕಾರ್ಜುನಪ್ಪ ಹೇಳಿದರು.

Advertisement

ಹಳಿಂಗಳಿ ಸದ್ಗುರು ಶರಣಬಸವೇಶ್ವರ ವಿದ್ಯಾವರ್ಧಕ ಸಂಸ್ಥೆಯ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗಾಗಿ ಜಿಲ್ಲಾ ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ಅಗ್ನಿ ಅವಘಡಗಳ ಅರಿವು ಹಾಗೂ ಅಗ್ನಿ ಅನಾಹುತ ತಡೆಗಟ್ಟುವ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ರಬಕವಿ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಆರ್‌.ಎಸ್‌. ಸನದಿ, ಸಂಸ್ಥೆ ಸದಸ್ಯ ಜಿನ್ನಪ್ಪ ಚೌಗಲಾ, ತಾಪಂ ಮಾಜಿ ಸದಸ್ಯ ಗಂಗಪ್ಪ ಗನವಾಡಿ, ನ್ಯಾಯವಾದಿ ಬಿ.ಎನ್‌. ಗುರವ, ವಿಠ್ಠಲ ಬುಗಡಿ, ಈರಣ್ಣ ತೇಲಿ, ರಬಕವಿ ಅಗ್ನಿಶಾಮಕ ಠಾಣೆಯ ಠಾಣಾಕಾರಿ ಜೆ.ಬಿ. ಕೊರವ, ಹಿರಿಯ ಅಗ್ನಿಶಾಮಕ ಸಿಬ್ಬಂದಿ ಎ.ಎಸ್‌. ಜಡೆನ್ನವರ, ಕೆ.ಡಿ. ಹಳ್ಳೂರ, ಜಿ.ವ್ಹಿ. ಕಾಂಬಳೆ, ಕೆ.ಎಪ್‌. ಕೌತಾಳ, ಜಾವೇದ ಸೈಯದ್‌, ಎ.ಜಿ. ಪಮ್ಮಾರ, ಶಾಲೆಗಳ ಮುಖ್ಯಸ್ಥ ವೈ.ಎಚ್‌. ಅಲಾಸ, ಎಚ್‌.ಬಿ. ಕಾಂಬಳೆ, ಸೋಮಶೇಖರ ಜಿ.ಎಸ್‌., ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next