Advertisement

ಏಕಸ್ವಾಮ್ಯ ನೀತಿ ಕೈ ಬಿಡಿ

06:15 AM Dec 24, 2018 | |

ಹೊಸದಿಲ್ಲಿ: ವಿಮಾನ ಸಂಚಾರದ ವೇಳೆ ಪ್ರಯಾಣಿಕರು ಮೊಬೈಲ್‌ ಬಳಸುವ ಅನುಕೂಲವನ್ನು ಭಾರತ ಕಲ್ಪಿಸಿದೆಯಾದರೂ, ತಾಂತ್ರಿಕ ಕಾರಣಗಳಿಂದಾಗಿ ಈ ಸೌಲಭ್ಯ ಹೆಚ್ಚಿನ ಶುಲ್ಕಕ್ಕೆ ಕಾರಣವಾಗುತ್ತದೆ. ಇದರಿಂದ ಪರೋಕ್ಷವಾಗಿ ಈ ಸೌಲಭ್ಯ ಊರ್ಜಿತವಾಗದೇ ಮೂಲೆಗುಂಪಾಗುವ ಸಾಧ್ಯತೆಗಳಿವೆ ಎಂದು ಖ್ಯಾತ ಬ್ರಾಡ್‌ಬ್ಯಾಂಡ್‌ ತಂತ್ರಜ್ಞಾನ ಸಂಸ್ಥೆಯಾದ “ಹ್ಯೂಗ್ಸ್‌ ಇಂಡಿಯಾ’ದ ಅಧಿಕಾರಿ ಕೆ. ಕೃಷ್ಣ ಎಚ್ಚರಿಸಿದ್ದಾರೆ. 

Advertisement

ಅವರು ಹೇಳುವಂತೆ, ವಿಮಾನಗಳಲ್ಲಿ ಮೊಬೈಲ್‌ ಬಳಸಲು ಹೈ ಬ್ಯಾಂಡ್‌ವಿಡ್‌ ಇರುವ ಮೊಬೈಲ್‌ ತರಂಗಗಳ ಅವಶ್ಯಕತೆಯಿದೆ. ಇದನ್ನು ಉಪಗ್ರಹಗಳ ಮೂಲಕ ನೀಡಲಾಗುತ್ತದೆ. ಈ ಸೇವೆಯನ್ನು ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಮಾತ್ರವೇ ನೀಡಬೇಕೆಂದು ಭಾರತ ಸರಕಾರ‌ ಸ್ಪಷ್ಟವಾಗಿ ಹೇಳಿದೆ. ಹೀಗೆ ಒಂದೇ ಸಂಸ್ಥೆಯಿಂದ ತರಂಗಗಳನ್ನು ಪಡೆಯುವ ಸೌಲಭ್ಯ ವಾಸ್ತವ ವಾಗಿ ದುಬಾರಿಯದ್ದಾಗಲಿದೆ. ಇದರ ಪರಿಣಾಮ, ವಿಮಾನದಲ್ಲಿ ಮೊಬೈಲ್‌ ಬಳಸುವ ಪ್ರಯಾಣಿಕರು ಹೆಚ್ಚಿನ ಶುಲ್ಕ ತೆರಬೇಕಾಗುತ್ತದೆ. ಆಗ, ಅನೇಕರು ಈ ಸೌಲಭ್ಯದಿಂದ ಹಿಂದೆ ಸರಿಯಬಹುದು. ಹಾಗಾದರೆ, ಈ ಸೌಲಭ್ಯದ ಇಡೀ ಉದ್ದೇಶವೇ ಮೂಲೆ ಗುಂಪಾಗುತ್ತದೆ ಎಂದು ಅವರು ತಿಳಿಸಿದ್ದಾರೆ. 

ಈ ಸಮಸ್ಯೆಗೆ ಪರಿಹಾರವನ್ನೂ ಸೂಚಿಸಿರುವ ಅವರು, “”ತನ್ನ ಉದ್ದೇಶ ಸಾರ್ಥಕವಾಗಬೇಕಾದರೆ ಭಾರತ ಮೊದಲು ಏಕಸ್ವಾಮ್ಯ ನೀತಿಯನ್ನು ಕೈಬಿಡಬೇಕು. ವಿವಿಧ ದೇಶಗಳ ಬೇರೆ ಉಪಗ್ರಹಗಳ ತರಂಗಗಳನ್ನೂ ಬಳಸಿಕೊಳ್ಳುವಂಥ “ಓಪನ್‌ ಸ್ಕೈ’ ವ್ಯವಸ್ಥೆಗೆ ತನ್ನನ್ನು ತಾನು ಒಗ್ಗಿಸಿಕೊಳ್ಳಬೇಕು” ಎಂದು ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next