Advertisement

ಸೌಲಭ್ಯ ಸದುಪಯೋಗಕ್ಕೆ ಸಲಹೆ

07:14 PM Mar 06, 2021 | Team Udayavani |

ಗುರುಮಠಕಲ್‌: ಏಕಪೋಷಕ ಮಕ್ಕಳಿಗೆ ಹಾಗೂ ಅನಾಥ ಮಕ್ಕಳಿಗೆ ಧನಸಹಾಯಕ್ಕಾಗಿ 1098ಗೆ ಕರೆ ಮಾಡಿ ಸರ್ಕಾರದ ಸೌಲಭ್ಯ ಸದುಪಯೋಗಪಡೆದುಕೊಳ್ಳಬೇಕು ಎಂದು 1098 ಸಹಾಯವಾಣಿ ಅ ಧಿಕಾರಿ ದೇವಪ್ಪ ಹೇಳಿದರು. ಪಟ್ಟಣದ ಎಸ್‌ವಿ ಪಿಯು ವಿಜ್ಞಾನ, ಕಲಾ ಮತ್ತು ವಾಣಿಜ್ಯ ವಿಭಾಗ ಕಾಲೇಜು ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ 1098 ಸಹಾಯವಾಣಿಯಿಂದ ಮಕ್ಕಳಿಗೆ ಅರಿವಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

Advertisement

ತಂದೆ-ತಾಯಿ ಇಲ್ಲದ ಮಕ್ಕಳಿಗೆ ಮಾಸಿಕ 1000 ರೂ. ಹಾಗೂ ಅನಾಥ ಮತ್ತು ಅಂಗವಿಕಲ ಮಕ್ಕಳಿಗೆ ವಿಶೇಷ ಸಹಾಯಧನ ಹಾಗೂ ವೈದ್ಯಕೀಯತಪಾಸಣೆ ಮಾಡಿಸಿ ವಿದ್ಯಾರ್ಥಿಗಳಿಗೆ ಕನ್ನಡಕ ಉಚಿತವಾಗಿ ವಿತರಣೆ, ಕಲಿಕೆ ಪ್ರೋತ್ಸಾಹ ಮಕ್ಕಳ ಹಕ್ಕುಗಳ ರಕ್ಷಣೆಗಾಗಿ 1098ಗೆ ಕರೆ ಮಾಡಿ ಸಹಾಯಪಡೆದುಕೊಳ್ಳಲು ಅವರು ವಿವರಿಸಿದರು.

1098 ಸಹಾಯವಾಣಿ ಮುಖ್ಯಸ್ಥ ನಾಗಪ್ಪ ಮಾತನಾಡಿ, ಮಕ್ಕಳ ಹಕ್ಕುಗಳ ಸದುಪಯೋಗ, ಪೋಕೊÕ ಕಾಯ್ದೆ ಹಾಗೂ ಬಾಲ್ಯ ವಿವಾಹ ತಡೆ, ಮಕ್ಕಳ ರಕ್ಷಣೆಗಳಿಗೆ ಹಲವು ಸಲಹೆ ನೀಡಿದರು.

ಸಂಸ್ಥೆ ಅಧ್ಯಕ್ಷ ಎಂ.ಬಿ. ನಾಯಕಿನ್‌ ಅಧ್ಯಕ್ಷತೆ ವಹಿಸಿದರು. ಸಂಸ್ಥೆ ಖಜಾಂಚಿ ಜ್ಞಾನೇಶ್ವರರೆಡ್ಡಿ ಕಾಲೇಜು ಪ್ರಾಚಾರ್ಯ ನರಸಿಂಹುಲು, ಚೈತನ್ಯ ಪದವಿ ಕಾಲೇಜು ಪ್ರಾಚಾರ್ಯ ರಾಜೇಶ್ವರರೆಡ್ಡಿ ಸೇರಿದಂತೆ ಇತರರು ಇದ್ದರು. ಉಪನ್ಯಾಸಕ ನವಾಜರೆಡ್ಡಿ ನಿರೂಪಿಸಿದರು. ಉಪನ್ಯಾಸಕ ಸಾಬರೆಡ್ಡಿ ಸ್ವಾಗತಿಸಿದರು. ಉಪನ್ಯಾಸಕ ವೀರೇಶ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next