ಮಡಿಕೇರಿ: ವಿದ್ಯಾರ್ಥಿಗಳು ವಿವಿಧ ವಿಷಯಗಳಲ್ಲಿ ಶಿಕ್ಷಣ ಪಡೆದು, ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಾರೆ, ಆದರೆ ಬಹುತೇಕ ಉದ್ಯೋಗಾಕಾಂಕ್ಷಿಗಳು ಸಂದರ್ಶನ ವೇಳೆಯಲ್ಲಿ ಕೌಶಲ್ಯದ ಕೊರತೆಯಿಂದ ವಿಫಲತೆಯನ್ನು ಹೊಂದುತ್ತಿದ್ದಾರೆ ಎಂದು ಮೂರ್ನಾಡು ಪದವಿ ಕಾಲೇಜು ಪ್ರಾಂಶುಪಾಲ ಪೊ›.ಪಟ್ಟಡ ಪೂವಣ್ಣ ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ವಿರಾಜಪೇಟೆ ಕೊಡವ ಸಮಾಜದ ಆಶ್ರಯದಲ್ಲಿ ತ್ರಿವೇಣಿ ಶಾಲೆಯ ಸಭಾಂಗಣದಲ್ಲಿ ನಡೆದ 2019-2020ನೇ ಸಾಲಿನ ವಿದ್ಯಾನಿಧಿ ಮತ್ತು ದತ್ತಿನಿಧಿ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು. ಕೊಡವ ಸಮಾಜದ ಅಧ್ಯಕ್ಷ ವಾಂಚೀರ ವಿಠಲ್ ನಾಣಯ್ಯ ಅವರು ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಪದವಿ, ಪದವಿ ಪೂರ್ವ, ಎಸ್‌ಎಸ್‌ಎಲ್‌ಸಿ ಯಲ್ಲಿ ವ್ಯಾಸಂಗ ಮಾಡುತ್ತಿರುವ ಸಮಾಜದ ಒಟ್ಟು 86 ವಿದ್ಯಾರ್ಥಿಗಳಿಗೆ ದತ್ತಿನಿಧಿ ಮತ್ತು ವಿದ್ಯಾನಿಧಿಯನ್ನು ವಿತರಿಸಲಾಯಿತು. ಇವರೊಂದಿಗೆ ಶಿಕ್ಷಣದಲ್ಲಿ ಸಾಧನೆ ಮಾಡಿದವಿದ್ಯಾರ್ಥಿಗಳಿಗೆ ಕಿರು ಕಾಣಿಕೆಯನ್ನು ನೀಡಿ ಪೋ›ತ್ಸಾಹಿಸಲಾಯಿತು. ವಿದ್ಯಾನಿಧಿಯ 70 ವಿದ್ಯಾರ್ಥಿಗಳಿಗೆ ಒಟ್ಟು 67,500 ರೂ. ನಗದು ಮತ್ತು ದತ್ತಿನಿಧಿಯಮೂಲಕ ಒಟ್ಟು 38 ವಿದ್ಯಾರ್ಥಿಗಳಿಗೆ 18,200 ರೂ.ಗಳನ್ನು ವಿತರಿಸಲಾಯಿತು.
ಕೊಡವ ಸಮಾಜದ ಆಡಳಿತ ಮಂಡಳಿಯ ನಿದೆೆìàಶಕರಾದ ಕೋಟೆರ ಗಣೇಶ್, ಅಲ್ಲಪಂಡ ಚಿಣ್ಣಪ್ಪ, ಕೊಂಗಂಡ ಟಾಟು ನಾಣಯ್ಯ, ಐಚಂಡ ವಾಸು, ಮುಕ್ಕಾಟಿರ ದಮಯಂತಿ ಮಂದಣ್ಣ, ಪಟ್ರಪಂಡ ಗೀತಾ ಬೆಳ್ಯಪ್ಪ ಹಾಗೂ ತ್ರಿವೇಣಿ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷ ಆಪಾಡಂಡ ಕಾರ್ಯಪ್ಪ ಅವರು ಉಪಸ್ಥಿತರಿದ್ದರು. ಕೊಡವ ಸಮಾಜದ ನಿರ್ದೇಶಕ ಬೊವ್ವೆàರಿಯಂಡ ಆಶಾ ಸುಬ್ಬಯ್ಯ ಕಾರ್ಯಕ್ರಮ ನಿರೂಪಿಸಿದರೆ, ನಿರ್ದೇಶಕರಾದ ಕುಲ್ಲಚಂಡ ಪೂಣಚ್ಚ ಸ್ವಾಗತಿಸಿ, ವಂದಿಸಿದರು.