Advertisement
ಸದಾ ತೊಂದರೆಕೊಪ್ಪಳ ತಾಲೂಕಿನ ಬಿಸರಹಳ್ಳಿ ಗ್ರಾಮದಲ್ಲಿ ಸುಮಾರು ಇಪ್ಪತ್ತು ವರ್ಷಗಳಿಂದ ಕುಡಿಯುವ ನೀರಿನ ತೊಂದರೆ ಇದೆ. 15 ವರ್ಷಗಳ ಹಿಂದೆ ವಿಶ್ವಬ್ಯಾಂಕ್ ಯೋಜನೆಯ ನೀರಿನ ಟ್ಯಾಂಕ್ ಮಂಜೂರಾಗಿದೆ. ಆದರೆ ಅದು ಉದ್ಘಾಟನೆಯೇ ಆಗಿಲ್ಲ. ಸುಮಾರು 1,00,000 ಲೀ. ನೀರಿನ ಸಾಮರ್ಥ್ಯ ಹೊಂದಿದ್ದರೂ, ನೀರಿನ ಮೂಲ ಇಲ್ಲದ್ದರಿಂದ ಇದ್ದೂ ಇಲ್ಲದಂತಾಗಿದೆ. ಸುಮಾರು 4 ಕಿಲೋಮೀಟರ್ ದೂರದ ನದಿಯಿಂದ ಪೈಪ್‌ಲೈನ್ ಇದ್ದರೂ, ಅದು ಕೂಡ ನಿರುಪಯುಕ್ತ. 8 ವರ್ಷಗಳ ಹಿಂದೆ ನೀರಿನ ಸಮಸ್ಯೆಗೆ ಸುಮಾರು ಇಪ್ಪತ್ತು ಲಕ್ಷ ಖರ್ಚಾಗಿದೆ. ಅದು ಫಲ ನೀಡಿಲ್ಲ. ದಿನದ 16 ಗಂಟೆ ಉರಿಯುತ್ತಿದ್ದ ಬೀದಿ ದೀಪ, ಊರಿನ 4 ಸೋಲಾರ್ ಕಂಬ ಒಂದೇ ವರ್ಷಕ್ಕೆ ಕೆಟ್ಟು ಹೋದವು. 3 ವರ್ಷಗಳ ಹಿಂದೆ ಜಿಲ್ಲಾಧಿಕಾರಿಗಳಿಂದ 1 ಕೋಟಿ ಬಿಡುಗಡೆಯಾಯಿತು. ಅದು ಏನಾಗಿದೆಯೋ ಗೊತ್ತಿಲ್ಲ. ನಮ್ಮೂರಿನ 25 ಲಕ್ಷ ವೆಚ್ಚದ ಬಸ್ ನಿಲ್ದಾಣದ ಕಾಮಗಾರಿ ಕೂಡ ಅರ್ಧಕ್ಕೆ ನಿಂತಿದೆ. ಕೇವಲ ಒಂದೇ ವರ್ಷಗಳಲ್ಲಿ ಕೀಳುವ ರಸ್ತೆಗಳು, ಅಂತರ್ಜಲ ಅಭಿವೃದ್ಧಿಯಲ್ಲೂ ಭ್ರಷ್ಟಾಚಾರ ನಡೆಯುತ್ತಿದೆ.
ಶಾಂತೇಶ್ ವಿ.ಬಿ, ಬಿಸರಹಳ್ಳಿ ಗ್ರಾಮ, ಕೊಪ್ಪಳ
ಹಾಸನ ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ಕಿರು ನೀರಾವರಿ ಯೋಜನೆಯಡಿ ಕೊಳವೆ ಬಾವಿ ಕೊರೆಸಿ ನೀರಿನ ಸೌಲಭ್ಯ ಮಾಡಿಕೊಟ್ಟ ನಂತರ, ಬಹುತೇಕ ಹಳ್ಳಿಗಳಲ್ಲಿ ತೆರೆದ ಬಾವಿಗಳು ಹಾಳುಬಿದ್ದಿವೆ. ಕೆರೆ ಕಟ್ಟೆ, ಕಲ್ಯಾಣಿಗಳು ಹೂಳು ತುಂಬಿವೆ. ಅಂತರ್ಜಲ ಬತ್ತಿ ಸಾವಿರ ಅಡಿ ಭೂಮಿ ಕೊರೆದರೂ ನೀರು ಸಿಗುತ್ತಿಲ್ಲ. ಮಳೆ ನೀರು ಸಂಗ್ರಹಿಸಿಟ್ಟುಕೊಳ್ಳುವ ಯಾವ ಕ್ರಮವನ್ನೂ, ಯಾರೂ ಅಳವಡಿಸಿಕೊಳ್ಳುತ್ತಿಲ್ಲ. ಅಂತರ್ಜಲ ಮರುಪೂರಣ ಆಗಬೇಕೆಂದರೆ, ಕೆರೆಗಳ ಹೂಳೆತ್ತಬೇಕು. ಹಳ್ಳಿ, ಪಟ್ಟಣ, ನಗರ ಎಲ್ಲ ಕಡೆಗಳಲ್ಲೂ ಜಲ ಮೂಲಗಳ ರಕ್ಷಣೆಯಾಗಬೇಕು. ರೈತರಿಗೆ ನೀರಿನ ಬಳಕೆಯ ಬಗ್ಗೆ ಜಾಗೃತಿ ಹಾಗೂ ಅರಿವು ಮೂಡಿಸಬೇಕು. ಜಲಸಂರಕ್ಷಣೆಯನ್ನು ಎಲ್ಲರ ಹೊಣೆಗಾರಿಕೆಯಾಗಿ ಮಾಡಬೇಕು. ಈ ನಿಟ್ಟಿನಲ್ಲಿ ಗ್ರಾಮಮಟ್ಟದಲ್ಲಿ ಅಭಿಯಾನ ನಡೆಯಬೇಕು.
ಜೆ.ಆರ್.ರವಿಕುಮಾರ್, ಜನಿವಾರ, ಕುಪ್ಪಳಿ, ಹಾಸನ ಕಾಮಗಾರಿ ಬೇಗ ಮುಗಿಯಲಿ
ಗ್ರಾಮಪಂಚಾಯತಿಗಳಲ್ಲಿ ಮನೆ ಮನೆಗೆ ಸಂಪರ್ಕ ಕಲ್ಪಿಸುವ ರಸ್ತೆ ಕಾಂಕ್ರೀಟೀಕರಣ ಕಾರ್ಯವನ್ನು ಏಕಕಾಲದಲ್ಲೇ ಮುಗಿಸಿದರೆ ಉತ್ತಮ. ವರ್ಷಕ್ಕೆ 15ರಿಂದ 20 ಮೀಟರ್ ಕಾಮಗಾರಿ ಮಾತ್ರ ಮಾಡುತ್ತಾರೆ. ಇದರಿಂದ ವರ್ಷಪೂರ್ತಿ ಗ್ರಾಮಸ್ಥರು ಸಮಸ್ಯೆ ಅನುಭವಿಸುತ್ತಾರೆ. ಕಾಮಗಾರಿಯನ್ನು ಆದಷ್ಟು ಬೇಗ ಮುಗಿಸುವ ರೀತಿಯಲ್ಲಿ ಕ್ರಮ ತೆಗೆದುಕೊಳ್ಳಬೇಕು.
ಡಾ.ಕೃಷ್ಣ, ಕಣಿಯೂರು, ಬೆಳ್ತಂಗಡಿ
Related Articles
ಗ್ರಾಮ ಪಂಚಾಯಿತಿಯು, ಅಧಿಕಾರ ವಿಕೇಂದ್ರೀಕರಣದ ಕೊನೆಯ ಹಂತವಾಗಿದ್ದು, ಸರ್ಕಾರದ ಎಲ್ಲಾ 28 ಇಲಾಖೆಗಳ ಕಾರ್ಯಕ್ರಮಗಳನ್ನು ಸಮಾಜದ ಕಟ್ಟಕಡೆಯ ಫಲಾನುಭವಿಗಳಿಗೂ ತಲುಪಿಸುವಲ್ಲಿ ಯಶಸ್ವಿಯಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹಾಗೂ ಕಾರ್ಯದರ್ಶಿಗಳ ಮೇಲೆ ಅಧಿಕ ಕಾರ್ಯಭಾರ, ಒತ್ತಡ ಹೆಚ್ಚಿರುವುದರಿಂದ, ಸರ್ಕಾರವು ಕೂಡಲೇ ಹೋಬಳಿಗೆ ಒಬ್ಬರಂತೆ ಇದೇ ದರ್ಜೆಯ ಅಧಿಕಾರಿ ಹುದ್ದೆಯನ್ನು ಸೃಷ್ಟಿಸಿ ನೇಮಕಾತಿ ಮಾಡಬೇಕು.
ಶ್ರೀನಿವಾಸ್ ಯಾದವ್, ತುಮಕೂರು
Advertisement
ಮಂಕಿ ಪಾರ್ಕ್ ಬೇಕುಕರ್ನಾಟಕ-ಕೇರಳ ಗಡಿಭಾಗದ ಗ್ರಾಮಗಳಲ್ಲಿ ಮಹಿಳಾ ಸಹಾಯಕಿಯರ ಆರೋಗ್ಯ ಕೇಂದ್ರ ಇದೆ. ಇದನ್ನು ಉನ್ನತೀ ಕರಿಸಿ, ಪ್ರಾಥಮಿಕ ಆರೋಗ್ಯ ಕೇಂದ್ರ ತೆರೆಯಬೇಕು, ಗಡಿಭಾಗದ ಗ್ರಾಮಗಳಲ್ಲಿ ಮಂಗಗಳ ಹಾವಳಿ ತಡೆಯಲು ಮಂಕಿಪಾರ್ಕ್ ನಿರ್ಮಿಸಬೇಕು.
ಕೆ.ಪದ್ಮನಾಭ ಭಟ್, ಕನಕಮಜಲು ಜಲಾಮೃತ ಯೋಜನೆ
ಜಲಾಮೃತ ಯೋಜನೆಯಡಿ ಎಲ್ಲ ಗ್ರಾಮ ಪಂಚಾಯತಿಗಳಲ್ಲೂ ಲಕ್ಷಾಂತರ ಗಿಡಗಳನ್ನು ನೆಡಲಾ ಯಿತು. ಆದರೆ ಉಳಿದದ್ದು ಕೇವಲ ಬೆರಳೆಣಿಕೆಯಷ್ಟು ಮಾತ್ರ. ನಮ್ಮ ಇಲಾಖೆಯ ಕೆಳಗೆ ಸಾಮಾಜಿಕ ಅರಣ್ಯ, ಕೃಷಿ, ತೋಟಗಾರಿಕೆ ಇಲಾಖೆ ಇದೆ.ಇವುಗಳ ಒಗ್ಗೂಡಿಸುವಿಕೆ ಯೋಜನೆ ಯೊಂದಿಗೆ ನೆಟ್ಟ ಗಿಡಗಳ ನಿರ್ವಹಣೆಗಾಗಿ ಮನಸ್ಸು ಮಾಡಿದರೆ ಕೋಟ್ಯಂತರ ಗಿಡಗಳನ್ನು ಮರವಾಗುವಂತೆ ಬೆಳೆಸಬಹುದು. ಈಗ ಸಬ್ಸಿಡಿ ದರದಲ್ಲಿ ರೈತರಿಗೆ ಹನಿ ನೀರಾವರಿ ಮಾಡಲು ವ್ಯವಸ್ಥೆ ಇದೆ. ಅದೇ ವ್ಯವಸ್ಥೆ ಯನ್ನು ಗ್ರಾಮ ಪಂಚಾಯತಿ ನೆಡುವ ಗಿಡಗಳಿಗೆ ನೀರೆರೆಯಲೂ ಬಳಸಬೇಕು.
ಸಂತೋಷ್, ಶ್ರೀರಂಗಪಟ್ಟಣ ಶೌಚಾಲಯ ಬೇಕು
ಬಾಗಲಕೋಟ ಜಿಲ್ಲೆ ಬದಾಮಿ ತಾಲೂಕಿನ ನರೇನುರ ಗ್ರಾಮದಲ್ಲಿ ಮಹಿಳೆಯರಿಗೆ ಮತ್ತು ಪುರುಷರಿಗೆ ಸಾರ್ವಜನಿಕ ಶೌಚಾಲಯ ವ್ಯವಸ್ಥೆ ಇಲ್ಲ. ಎಲ್ಲರೂ ಬಯಲಿಗೆ ಹೋಗಬೇಕಾಗಿದೆ. ಪಂಚಾಯಿತಿಯವರಿಗೆ ಮತ್ತು ನಮ್ಮ ಕ್ಷೇತ್ರದ ಶಾಸಕರಿಗೆ ಈ ಬಗ್ಗೆ ತಿಳಿಸಿದರೂ ಪ್ರಯೋಜನವಾಗಿಲ್ಲ. ಊರಿಗೇ ಬಂದು ಭೂಮಿ ಪೂಜೆ ಮಾಡಿದ್ದಾರೆ. ಆದರೆ ಶೌಚಾಲಯ ನಿರ್ಮಾಣವಾಗಿಲ್ಲ. ಈ ವಿಷಯದ ಬಗ್ಗೆ ಹಲವು ಬಾರಿ ಶಾಸಕರಿಗೆ ತಿಳಿಸಿದರೂ ಸಹ, ಇದರ ಬಗ್ಗೆ ಸ್ವಲ್ಪವೂ ಕಾಳಜಿ ವಹಿಸುತ್ತಿಲ್ಲ. ನಿಮ್ಮಿಂದಲಾದರೂ ಸಹ ನಮ್ಮೂರಿಗೆ ಸಾರ್ವಜನಿಕ ಶೌಚಾಲಯ ನಿರ್ಮಾಣ ಆಗಲಿ.
ರಿಷಿ ಬಡಿಗೇರ್ ನೇರ ವೇತನ ಪದ್ಧತಿ ಜಾರಿಯಾಗಲಿ
ಸರ್ಕಾರ ಗ್ರಾಮೀಣ ಜನರಿಗೆಂದು ಹಲವಾರು ಜನಪ್ರಿಯ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಆದರೆ, ಅದನ್ನು ಜನ ಸಾಮಾನ್ಯರಿಗೆ ತಲುಪಿಸುವ ಗ್ರಾಮ ಪಂಚಾಯಿತಿ ನೌಕರರಿಗೆ ಸರಿಯಾಗಿ ವೇತನ ನೀಡುತ್ತಿಲ್ಲ. ಗ್ರಾಮ ಪಂಚಾಯಿತಿ ನೌಕರರಿಗೆ ಸರ್ಕಾರದಿಂದ ನೇರವೇತನ ಪದ್ಧತಿ ಜಾರಿ ಮಾಡಿದ್ದರೂ ಅನುಷ್ಠಾನ ವಾಗಿಲ್ಲ. ನೌಕರರ ಪೂರ್ಣ ವೇತನವನ್ನು ಸರ್ಕಾರ ಭರಿಸುತ್ತಿಲ್ಲ ಹಾಗೂ ಮೂರು ತಿಂಗಳ ಮುಂಚೆಯೇ ನೌಕರರ ವೇತನ ವನ್ನು ಗ್ರಾಮ ಪಂಚಾಯಿತಿ ಖಾತೆಗೆ ಜಮಾ ಮಾಡಬೇಕೆಂಬ ನಿಯಮ ಇದ್ದರೂ, ಅದೂ ಜಾರಿಯಾ ಗಿಲ್ಲ. ಗ್ರಾಮ ಪಂಚಾಯಿತಿ ನೌಕರರ ಸುಮಾರು 6 ರಿಂದ 10 ತಿಂಗಳುಗಳ ವೇತನ ಬಾಕಿ ಇರುತ್ತದೆ.
ರಾಜು ಮಾಯಾಚಾರಿ, ಹೊನ್ನಾಳಿ, ದಾವಣಗೆರೆ