Advertisement

ಪರವಾನಗಿ ರಹಿತ ವಾಹನ ಚಾಲನೆ ಮಾಡದಿರಲು ಸಲಹೆ

01:07 PM Nov 03, 2017 | Team Udayavani |

ಬೀದರ: ಮನ್ನಳ್ಳಿ ಗ್ರಾಮದ ಪೊಲೀಸ್‌ ಠಾಣೆಯಲ್ಲಿ ರೈತ ಸಾರಥಿ ಯೋಜನೆಯಡಿ ಟ್ರ್ಯಾಕ್ಟರ್‌ ಚಾಲಕರಿಗಾಗಿ ರಸ್ತೆ ಸುರಕ್ಷತೆ ಕುರಿತು ಜಾಗೃತಿ ಕಾರ್ಯಕ್ರಮ ನಡೆಯಿತು. ಸಾರಿಗೆ ಇಲಾಖೆಯ ಅಧಿಕಾರಿ ಕೆ.ಟಿ. ವಿಶ್ವನಾಥ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಎಲ್ಲಾ ರೈತರು ಚಾಲನಾ ಪತ್ರ ಪಡೆಯಬೇಕು. ಪರವಾನಗಿ ಇಲ್ಲದೇ ವಾಹನ ನಡೆಸುವುದು ಸರಿಯಲ್ಲ. ಅಪಘಾತಕ್ಕೆ ಒಳಗಾದಾಗ ಯಾವುದೇ ವಿಮೆ ಕಂಪನಿಯು ವಿಮಾ ಇನ್ಸೂರೆನ್ಸ್‌ ಕೊಡುವುದಿಲ್ಲ. ಹಾಗೂ ಚಾಲಕರಿಗೂ ಯಾವುದೇ ಸೌಲಭ್ಯಗಳು ದೊರಕುವುದಿಲ್ಲ. ಆದ್ದರಿಂದ ಎಲ್ಲರೂ ಪ್ರಾದೇಶಿಕ ಸಾರಿಗೆ ಇಲಾಖೆಗೆ ಭೇಟಿ ನೀಡಿ ಪರವಾನಿಗೆ ಪಡೆಯಬೇಕು ಎಂದರು. ಎಲ್ಲಾ ಹೋಬಳಿ ಮಟ್ಟದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಇದರ ಸದುಪಯೋಗ ಪಡೆಯಬೇಕು ಎಂದು ಸಲಹೆ ನೀಡಿದರು.

Advertisement

ಪಿಎಸ್‌ಐ ಪ್ರಕಾಶ ಯಾತನೂರ ಮಾತನಾಡಿ, ಎಲ್ಲರೂ ತಪ್ಪದೇ ಕಡ್ಡಾಯವಾಗಿ ದ್ವಿಚಕ್ರ ವಾಹನದ ಪರವಾನಗಿ ಪಡೆದು, ಹೆಲ್ಮೇಟ್‌ ಧರಿಸಿ ತಮ್ಮ ಜೀವನ  ಪಾಡಿಕೊಳ್ಳಬೇಕು. ದ್ವಿಚಕ್ರ ವಾಹನದ ಮೇಲೆ ಚಲಿಸುವಾಗ ಮೊಬೈಲ್‌, ಹೆಡ್‌ ಫೋನ್‌ ಬಳಸಬೇಡಿ. ಮದ್ಯಪಾನ, ಧೂಪಮಾನ ಮಾಡಬೇಡಿ ಎಂದು ಹೇಳಿದರು.

ವಾಹನ ಚಾಲಕರು ಪೊಲೀಸರಿಗೆ ದಂಡ ಕೊಡುವ ಬದಲು ಆ ಹಣದಲ್ಲಿ ಹೆಲ್ಮೇಟ್‌ ಹಾಗೂ ವಿಮೆ ಮಾಡಿಸಿಕೊಂಡು
ತಮ್ಮನ್ನು ತಾವು ಸಂರಕ್ಷಿಸಿಕೊಳ್ಳರ್ಬಕು ಎಂದು ಸಲಹೆ ನೀಡಿದರು. ಡ್ರೈವಿಂಗ್‌ ಸ್ಕೂಲ್‌ನ ಪ್ರಾಚಾರ್ಯ ಶಿವರಾಜ ಜಮಾದಾರ ಮಾತನಾಡಿದರು. ಎಎಸ್‌ಐಗಳಾದ ಶಿವರಾಜ ರಾಂಮಪುರೆ, ನಾಗನಾಥ ಕಮಠಾಣೆ, ರಮೇಶ ಜಮಾದಾರ, ಸಂಜುಕುಮಾರ, ಮಲ್ಲಿಕಾರ್ಜುನ ಸಿಂದೋಲ, ಉಮೇಶ ಪಾತರಪಳ್ಳಿ, ಮೌಲಾನ ಬರೂರ ಹಾಗೂ ಪೊಲೀಸ್‌ ಸಿಬ್ಬಂದಿ ಇದ್ದರು. ಪ್ರಾದೇಶಿಕ ಸಾರಿಗೆ ಇಲಾಖೆ, ಮನ್ನಳ್ಳಿ ಪೊಲೀಸ್‌ ಠಾಣೆ ಹಾಗೂ ಭಾಗ್ಯವಂತಿ ಮೋಟಾರ್‌ ಡ್ರೈವಿಂಗ್‌ ಸ್ಕೂಲ್‌ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next