Advertisement

ಸಂಬಂಧಗಳ ಬೆಲೆ ಅರಿತುಕೊಳ್ಳಲು ಮಹಿಳೆಯರಿಗೆ ಸಲಹೆ

07:02 PM Mar 09, 2021 | Team Udayavani |

ಮುದ್ದೇಬಿಹಾಳ: ಪಟ್ಟಣದ ವಿವಿಧೆಡೆ ಸೋಮವಾರ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ವಿಶಿಷ್ಟವಾಗಿ ಆಚರಿಸಲಾಯಿತು. ಒಂದೆಡೆ ಮಹಿಳಾ ಸಾಧಕಿಯರನ್ನು ಸನ್ಮಾನಿಸಿದರೆ ಮಗದೊಂದೆಡೆ ಮಹಿಳೆಯರು ಜೀವನದಲ್ಲಿ ಹೇಗೆ ಮುಂದೆ ಬರಬೇಕು ಎನ್ನುವ ತಿಳಿವಳಿಕೆ ನೀಡಲಾಯಿತು. ಒಂದೆರಡು ಕಡೆ ಮಹಿಳೆಯರು ಸಾಮೂಹಿಕ ನೃತ್ಯ ಮಾಡಿ ಸಂಭ್ರಮಿಸಿದರು.

Advertisement

ನ್ಯಾಯಾಲಯ ಆವರಣ: ನ್ಯಾಯಾಲಯ ಆವರಣದಲ್ಲಿ ನಡೆದ ಮಹಿಳಾ ದಿನಾಚರಣೆ ಹಾಗೂ ದೇವದಾಸಿ ಪದ್ಧತಿ ನಿರ್ಮೂಲನೆ ಕಾರ್ಯಕ್ರಮವನ್ನು ಸಿವಿಲ್‌ ನ್ಯಾಯಾ ಧೀಶರಾದ ಸುರೇಶ ಸವದಿ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಮೊದಲೆಲ್ಲ ಅಡುಗೆ ಮನೆಗೆ ಮೀಸಲಾಗಿದ್ದ ಮಹಿಳೆಯರು ಇಂದು ಎಲ್ಲದರಲ್ಲೂ ಸಿಂಹಪಾಲು ಪಡೆಯುತ್ತಿದ್ದಾರೆ. ಇವರಿಗೆ ಕಾನೂನು ರಕ್ಷಣೆ ಇದೆ. ಸರ್ಕಾರದ ಸೌಲಭ್ಯಗಳನ್ನೂ ಅರಿತುಕೊಳ್ಳಬೇಕು ಎಂದರು.

ಎಪಿಪಿ ಹೀನಾಕೌಸರ ಗಂಜಿಹಾಳ ಮಾತನಾಡಿ, ಮಹಿಳೆಯರು ಸ್ವಂತ ಬುದ್ಧಿ ಉಪಯೋಗಿಸಿ  ಪ್ರಗತಿ ಸಾಧಿಸಬೇಕು. ಸ್ಥಿತಿವಂತ ಮಹಿಳೆಯರು ಪಾಲು ವಾಟ್ನಿ ವಿಷಯದಲ್ಲಿ ಹಠ ತೊಡಬಾರದು. ಸಂಬಂಧಗಳ ಬೆಲೆ ಅರಿತಿರಬೇಕು. ಕೌಟುಂಬಿಕ ಹಿಂಸೆ ಬೇಡ. ಹಕ್ಕು ಎನ್ನುವ ಭರದಲ್ಲಿ ಮಹಿಳೆ ತಾಳ್ಮೆ ಕಳೆದುಕೊಳ್ಳಬಾರದು. ಪುರುಷರೊಂದಿಗೆ ಜಿದ್ದಾಜಿದ್ದಿ ಬೇಡ ಎಂದು ಸಲಹೆ ನೀಡಿದರು.

ದೇವದಾಸಿ ಮಹಿಳೆಯರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳ ಕುರಿತು ದೇವದಾಸಿ ಪುನರ್ವಸತಿ ಯೋಜನಾ ಧಿಕಾರಿ ಕೆ.ಕೆ. ದೇಸಾಯಿ ಉಪನ್ಯಾಸ ನೀಡಿದರು. ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಂ.ಎಚ್‌. ಕ್ವಾರಿ ವಕೀಲರು ಅಧ್ಯಕ್ಷತೆ ವಹಿಸಿದ್ದರು. ಎಪಿಪಿ ಬಸವರಾಜ ಆಹೇರಿ, ಅಪರ ಸರ್ಕಾರಿ ವಕೀಲರಾದ ಎಂ.ಆರ್‌. ಪಾಟೀಲ ವೇದಿಕೆಯಲ್ಲಿದ್ದರು. ಎನ್‌.ಬಿ. ಮೊಕಾಶಿ ವಕೀಲರು ನಿರೂಪಿಸಿದರು. ಎನ್‌. ಬಿ. ಮುದ್ನಾಳ ವಕೀಲರು ವಂದಿಸಿದರು.

ಪುರಸಭೆ: ಪುರಸಭೆಯಲ್ಲಿ ನಡೆದ ಮಹಿಳಾ ದಿನಾಚರಣೆಯಲ್ಲಿ ಪ್ರಧಾನಮಂತ್ರಿ ಆವಾಸ್‌ ಯೋಜನೆಯಡಿ ಮನೆ ಕಟ್ಟಿಸಿಕೊಂಡವರನ್ನು, ಪುರಸಭೆ ಅಧ್ಯಕ್ಷೆ ಪ್ರತಿಭಾ ಅಂಗಡಗೇರಿ, ಉಪಾಧ್ಯಕ್ಷೆ ಶಾಜಾದಬಿ ಹುಣಚಗಿ ಮತ್ತು ಎಲ್ಲ ಮಹಿಳಾ ಸದಸ್ಯರನ್ನು ಸನ್ಮಾನಿಸಲಾಯಿತು. ಇದೇ ವೇಳೆ ಸದಸ್ಯ ಮಹಿಬೂಬ ಗೊಳಸಂಗಿಯವರು ಮತ್ತು ಪುರಸಭೆ ಸಿಬ್ಬಂದಿ ವತಿಯಿಂದ ಮಹಿಳಾ ವಿವಿಯ ವಿದ್ಯಾವಿಧೇಯಕ ಪರಿಷತ್‌ಗೆ ನಾಮ ನಿರ್ದೇಶನಗೊಂಡಿರುವ ಪುರಸಭೆ ಸದಸ್ಯೆ ಸಂಗಮ್ಮ ದೇವರಳ್ಳಿಯವರನ್ನು ಸನ್ಮಾನಿಸಲಾಯಿತು. ಮುಖ್ಯಾಧಿಕಾರಿ ಗೋಪಾಲ ಕಾಸೆ, ಅಧ್ಯಕ್ಷೆ ಪ್ರತಿಭಾ ಅಂಗಡಗೇರಿ, ಸದಸ್ಯೆ ಸಂಗಮ್ಮ ದೇವರಳ್ಳಿ
ಮಾತನಾಡಿದರು.

Advertisement

ಪ್ರಗತಿ ಜೆಸಿ ಸಂಸ್ಥೆ: ಪಟ್ಟಣದ ಜೆಸಿ ಚಿನ್ಮಯ ಶಾಲೆಯ ಆವರಣದಲ್ಲಿ ಪ್ರಗತಿ ಜೆಸಿ ಸಂಸ್ಥೆಯಿಂದ ಮಹಿಳಾ ದಿನಾಚರಣೆ ಏರ್ಪಡಿಸಲಾಗಿತ್ತು. ಪುರಸಭೆ ಅಧ್ಯಕ್ಷೆ ಪ್ರತಿಭಾ ಅಂಗಡಗೇರಿ ಉದ್ಘಾಟಿಸಿದರು. ಮುಖ್ಯಾಧ್ಯಾಪಕಿ ಸಿಸ್ಟರ್‌ ಸ್ಟೆಲ್ಲಾ, ಪುರಸಭೆ ಸದಸ್ಯೆ ಸಂಗಮ್ಮ ದೇವರಳ್ಳಿ, ಅಧ್ಯಕ್ಷತೆ ವಹಿಸಿದ್ದ ಜೆಸಿರೆಟ್‌ ಶ್ವೇತಾ ನಾವದಗಿ ಕುರಿತು ಮಾತನಾಡಿದರು.

ಪುರಸಭೆ ಸದಸ್ಯರಾದ ಸಹನಾ ಬಡಿಗೇರ, ಪ್ರೀತಿ ದೇಗಿನಾಳ, ಭಾರತಿ ಪಾಟೀಲ, ಲಕ್ಷ್ಮೀ ಕರಡ್ಡಿ, ಮಂಜುಳಾ ಗೂಳಿ ವೇದಿಕೆಯಲ್ಲಿದ್ದರು. ಸಾಧಕರಾದ ಗೌರಮ್ಮ ಅಮರಣ್ಣವರ್‌, ಸಿಸ್ಟರ್‌ ಸ್ಟೆಲ್ಲಾ, ಅನ್ನಪೂರ್ಣ ನಾಗರಾಳ, ಕಾಶೀಬಾಯಿ ನಾಡಗೌಡರ, ತೇಜಶ್ವಿ‌ನಿ ಪವಾರ ಅವರನ್ನು ಸನ್ಮಾನಿಸಲಾಯಿತು. ಪೂರ್ಣಿಮಾ ಜಮಖಂಡಿ ಪ್ರಾರ್ಥಿಸಿದರು. ವಿಜಯಲಕ್ಷ್ಮೀ ಗಡೇದ ಜೆಸಿವಾಣಿ ಓದಿದರು. ಕವಿತಾ ಬುಡ್ಡೋಡಿ ಸ್ವಾಗತಿಸಿದರು. ವಿದ್ಯಾ ತಡಸದ ಮತ್ತು ರೇಖಾ ಪೋರವಾಲ ನಿರೂಪಿಸಿದರು. ಅಶ್ವಿ‌ನಿ ನಲವಡೆ ವಂದಿಸಿದರು. ಸಂಗಮೇಶ ನಾವದಗಿ, ರಾಜಶೇಖರ ಕರಡ್ಡಿ, ಪದಾಧಿಕಾರಿಗಳು, ಸಾರ್ವಜನಿಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next