Advertisement
ಅದರಂತೆ ಶುಕ್ರವಾರದಿಂದ ನಗರದಲ್ಲಿರುವ ಅನಧಿಕೃತ ಫಲಕಗಳು, ಬ್ಯಾನರ್‌ಗಳು, ಬಂಟಿಂಗ್ಸ್‌ಗಳ ತೆರವು ಕಾರ್ಯಾಚರಣೆಗೆ ಚಾಲನೆ ನೀಡಲಿದ್ದಾರೆ. ಅನಧಿಕೃತ ಜಾಹೀರಾತು ಫಲಕಗಳನ್ನು ಗುರುತಿಸಿ ತೆರವುಗೊಳಿಸುವ ಜವಾಬ್ದಾರಿಯನ್ನು ಮೇಯರ್ ಅವರು ಆಯಾ ವಾರ್ಡ್ ಪಾಲಿಕೆ ಸದಸ್ಯರಿಗೆ ವಹಿಸಿದ್ದಾರೆ.
-ಆರ್.ಸಂಪತ್‌ರಾಜ್, ಮೇಯರ್ ಅನಧಿಕೃತ ಜಾಹಿರಾತು ಫಲಕಗಳ ತೆರವು ಕಾರ್ಯಾಚರಣೆಗೆ ನನ್ನ ಸಂಪೂರ್ಣ ಬೆಂಬಲವಿದ್ದು, ಭಿತ್ತಿ ಪತ್ರ ಅಂಟಿಸುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕಿದೆ. ಅನಧಿಕೃತ ಜಾಹೀರಾತು ಫಲಕಗಳನ್ನು ಯಾವುದೇ ಪಕ್ಷದವರು ಅಳವಡಿಸಿದ್ದರೂ, ಮುಲಾಜಿಲ್ಲದೆ ತೆರವುಗೊಳಿಸುವಂತೆ ಸೂಚಿಸಲಾಗಿದೆ.
-ಕೆ.ಜೆ.ಜಾರ್ಜ್, ಬೆಂಗಳೂರು ನಗರಾಭಿವೃದ್ಧಿ ಸಚಿವ