Advertisement

ಬಿಆರ್‌ಐಗೆ ಪ್ರತಿಕೂಲ ಪರಿಣಾಮ

08:26 AM Jun 29, 2020 | mahesh |

ಬೀಜಿಂಗ್‌: ಚೀನದ ಮಹತ್ವಾಕಾಂಕ್ಷಿ “ಒನ್‌ ಬೆಲ್ಟ್, ಒನ್‌ ರೋಡ್‌’ (ಬಿಆರ್‌ಐ) ಯೋಜನೆಗೆ ಕೋವಿಡ್ ಪ್ರತಿಕೂಲ ಪರಿಣಾಮ ಬೀರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏಷ್ಯಾ, ಆಫ್ರಿಕಾ, ಐರೋಪ್ಯ ರಾಷ್ಟ್ರಗಳನ್ನು ತಲುಪಲು ಸಾಧ್ಯವಾಗುವಂತೆ ರಸ್ತೆಗಳು, ರೈಲು ಮಾರ್ಗ, ಬಂದರುಗಳಿಗೆ ಸಂಪರ್ಕ ಕಲ್ಪಿಸುವ ಉದ್ದೇಶದ ಈ ಯೋಜನೆಯ ಶೇ.40ರಷ್ಟು ಭಾಗ ಕೋವಿಡ್ ನಿಂದಾಗಿ ತೊಂದರೆಗೀಡಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಭಾಗ ತೊಂದರೆಗೆ ಒಳಗಾಗುವ ಸಾಧ್ಯತೆಯಿದೆ ಎಂದು ಚೀನದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಂತಾರಾಷ್ಟ್ರೀಯ ಆರ್ಥಿಕ ವ್ಯವಹಾರಗಳ ಇಲಾಖೆಯ ಮಹಾನಿರ್ದೇಶಕ ವಾಂಗ್‌ ಕ್ಸಿಯಾಲಾಂಗ್‌ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next