Advertisement

ಮುಂದಿನ ವಾರ ಸಾಹಸಿ ಮಕ್ಕಳ ಆಗಮನ

06:00 AM Jul 06, 2018 | Team Udayavani |

“ಅನಂತನ ಚೆಲ್ಲಾಟ’ ಎಂಬ ಚಿತ್ರ ಮಾಡಿದ್ದ ಸುಶೀಲ್‌ ಮೊಕಾಶಿ, ಈಗ ಸದ್ದಿಲ್ಲದೆ ಒಂದು ಚಿತ್ರ ಮಾಡಿ ಮುಗಿಸಿದ್ದಾರೆ. ಕಳೆದ ಬಾರಿ ಅನಂತನ ಜೊತೆಗೆ ಚೆಲ್ಲಾಟವಾಡಿದ್ದ ಅವರು, ಈ ಬಾರಿ ಸಾಹಸಿ ಮಕ್ಕಳ ಕುರಿತು ಚಿತ್ರ ಮಾಡಿದ್ದಾರೆ ಮತ್ತು ಆ ಚಿತ್ರಕ್ಕೆ “ಸಾಹಸಿ ಮಕ್ಕಳು’ ಎಂಬ ಹೆಸರನ್ನು ಇಟ್ಟಿದ್ದಾರೆ. ಈ ಚಿತ್ರ ಮುಂದಿನ ವಾರ (ಜುಲೈ 13ರಂದು) ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

Advertisement

ಈ ಚಿತ್ರವನ್ನು ಪೋಷಕ ಪಾತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ರತ್ನಮಾಲ ಅವರು ನಿರ್ಮಿಸಿದ್ದಾರೆ. ಅಷ್ಟೇ ಅಲ್ಲ, ಚಿತ್ರಕ್ಕೆ ತಾವೇ ಕಥೆಯನ್ನೂ ರಚಿಸಿದ್ದಾರೆ. ಚಿಕ್ಕ ವಯಸ್ಸಿನಲ್ಲಿ ಓದಿನಿಂದ ವಂಚಿತರಾಗಿರುವ ಮಕ್ಕಳಿಗೆ ಶಿಕ್ಷಣ ಕೊಡಿಸುವ ಕುರಿತಾಗಿ ಈ ಚಿತ್ರ ಸಾಗುತ್ತದೆ. ರತ್ನಮಾಲ ಅವರಿಗೂ ಚಿಕ್ಕ ವಯಸ್ಸಿನಲ್ಲೂ ಓದುವುದಕ್ಕೆ ಸಮಸ್ಯೆ ಎದುರಾಗಿದ್ದು, ಇತ್ತೀಚೆಗೆ ಅವರು ಪೊಲಿಟಿಕಲ್‌ ಸೈನ್ಸ್‌ನಲ್ಲಿ ಎಂ.ಎ ಮುಗಿಸಿದರಂತೆ. ತಮ್ಮ ಬಾಲ್ಯದಲ್ಲಿ ನೋಡಿದ ಅಂಶಗಳನ್ನು ಸೇರಿಸಿ  ಅವರು ಈ ಚಿತ್ರದ ಕಥೆ ಮಾಡಿದ್ದಾರೆ.

ಈ ಚಿತ್ರದ ಕಥೆ ಮಧು, ಸುಶ್ಮಿತ್‌, ಮೈತ್ರಿ, ವಿನಯ್‌ ಮತ್ತು ಪುಣ್ಯ ಎಂಬ ಐದು ಮಕ್ಕಳ ಸುತ್ತ ಸುತ್ತುತ್ತದಂತೆ. ಕಾರಣಾಂತರಗಳಿಂದ ಕಾಡಿಗೆ ಹೋಗುವ ಆ ಮಕ್ಕಳು, ಅಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಾರಂತೆ. ಅಲ್ಲಿಂದ ತಮ್ಮ ಹಳ್ಳಿಗೆ ವಾಪಸ್ಸು ಬರುವುದಷ್ಟೇ ಅಲ್ಲ, ಶಿಕ್ಷಣಕ್ಕಾಗಿ ಏನೆಲ್ಲಾ ಹೋರಾಡುತ್ತಾರೆ ಎಂಬ ಕಥೆ ಇದೆಯಂತೆ. ಈ ಚಿತ್ರವನ್ನು “ಪುಟಾಣಿ ಏಜೆಂಟ್‌ 123’ಗೆ ಹೋಲಿಸುವ ನಿರ್ದೇಶಕರು, “ಚಿತ್ರದಲ್ಲಿ ಸಾಕಷ್ಟು ಮನರಂಜಿಸುವ ಅಂಶಗಳಿಗವೆ. ಅಷ್ಟೇ ಅಲ್ಲ, ಈ ಚಿತ್ರದ ಮೂಲಕ ಶಿಕ್ಷಣ ಜನ್ಮಸಿದ್ಧ ಹಕ್ಕು ಎಂಬುದನ್ನು ಹೇಳುವುದಕ್ಕೆ ಪ್ರಯತ್ನ ಮಾಡಿದ್ದೇವೆ. ಈ ಚಿತ್ರಕ್ಕೆ ವಿಟ್ಲ ಮುಂತಾದ ಕಡೆ ಚಿತ್ರೀಕರಣ ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು ಸುಶೀಲ್‌.

ಚಿತ್ರಕ್ಕೆ ಶರತ್‌ ಸಂಗೀತ ಸಂಯೋಜಿಸಿದ್ದಾರೆ. ನಾಲ್ಕು ಹಾಡುಗಳನ್ನು ಮಾಡಿಕೊಟ್ಟಿದ್ದಾರೆ. ಎಂ.ಬಿ. ಅಳ್ಳಿàಕಟ್ಟಿ ಈ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದಾರೆ. “ಸಾಹಸಿ ಮಕ್ಕಳು’ ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next