ಪಿರಿಯಾಪಟ್ಟಣ: ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸಾಲಮನ್ನಾ ಯೋಜನೆಯಡಿ 400ಕ್ಕೂ ಹೆಚ್ಚು ಫಲಾನುಭವಿಗಳಿಗೆ ಅನುಕೂಲವಾಗಿದೆ ಎಂದು ಪಿಎಸ್‌ಸಿಸಿಎಸ್ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್‌ಕುಮಾರ್ ತಿಳಿಸಿದರು.
ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಏರ್ಪಡಿಸಿದ್ದ ಸದಸ್ಯರಿಗೆ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವಧಿಯಲ್ಲಿ 50 ಸಾವಿರ ರೂ. ಸಾಲಮನ್ನಾ ಯೋಜನೆಯಡಿ ನೂರಾರು ರೈತರಿಗೆ ಅನುಕೂಲವಾಗಿದೆ. ಇತ್ತೀಚಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಘೋಷಣೆ ಮಾಡಿರುವ ಯೋಜನೆ ಅಧಿಕೃತವಾಗಿ ನಮಗೆ ತಲುಪಿಲ್ಲ ಎಂದು ತಿಳಿಸಿದರು.
ಕೇಂದ್ರ ಸರ್ಕಾರದ ಫಸಲ್ ಬಿಮಾ ಯೋಜನೆಯ ಫಲಾನುಭವಿಗಳಿಗೆ ದೊರಕದಿರುವುದು ಕಂಡು ಬಂದಿದೆ. ಯಶಸ್ವಿನಿ ಯೋಜನೆಯಡಿ ರೈತರಿಗೆ ಸಹಕಾರ ಸಂಘದಿಂದ ಯಾವುದೇ ಕಾರ್ಡ್‌ಗಳನ್ನು ತರಿಸುತ್ತಿಲ್ಲ. ಸಾರ್ವಜನಿಕ ಆಸ್ಪತ್ರೆಯಲ್ಲಿ ಮಾಹಿತಿ ಪಡೆದು ಯೋಜನೆಯ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಇದೇ ವೇಳೆ ಮುಂದಿನ ತಿಂಗಳು ಅಧಿಕಾರದ ಅವಧಿ ಮುಗಿಯುವ ಆಡಳಿತ ಮಂಡಳಿಯ ಸಂಘ ಸದಸ್ಯರು ಹಾಗೂ ಸಂಘದ ಸಿಇಒ ಆಗಿ ಸೇವೆ ಸಲ್ಲಿಸಿ ನಿವೃತ್ತರಾದ ಶ್ರೀನಿವಾಸ್‌ರನ್ನು ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ಎಂ.ಎನ್.ಮಲ್ಲೇಗೌಡ, ಉಪಾಧ್ಯಕ್ಷ ಅಕºರ್‌ಷರೀಫ್,
ಮಾಜಿ ಅಧ್ಯಕ್ಷ ಹಾಗೂ ಹಾಲಿ ನಿರ್ದೆಶಕ ಪಿ.ಕೆ. ಕುಮಾರ್, ನಿರ್ದೇಶಕರಾದ ಪ್ರಭುಕುಮಾರ್, ಸಿದ್ದಪ್ಪಾಜಿಗೌಡ, ಎಚ್.ಬಿ.ಸುರೇಶ್, ರಾಮಚಂದ್ರ, ಪಾರ್ವತಮ್ಮ, ಲಲಿತಮ್ಮ, ಬ್ಯಾಂಕಿನ ಮೇಲ್ವಿಚಾರಕ ಎ.ಎನ್.ನàನ್‌ಕುಮಾರ್ ಹಾಜರಿದ್ದರು.