ಬೆಂಗಳೂರು: ಡಾ.ಎಂ.ಚಿದಾನಂದಮೂರ್ತಿ ಅವರು ಬಲಪಂಥೀಯವಾದಿ, ಹಿಂದೂ ಧರ್ಮ ಪ್ರತಿಪಾದಕರೆಂದೇ ಕರೆಸಿಕೊಂಡರೂ ಯಾವುದೇ ರಾಜಕೀಯ ಪಕ್ಷದೊಂದಿಗೂ ಹೆಚ್ಚಾಗಿ ಗುರುತಿಸಿಕೊಳ್ಳದೆ ತಮ್ಮ ಸಿದ್ಧಾಂತ, ನಿಲುವಿಗೆ ಜೀವನವಿಡೀ ಬದ್ಧರಾಗಿದ್ದರು. ಅಯೋಧ್ಯೆ ರಾಮಮಂದಿರ ನಿರ್ಮಾಣ ಹೋರಾಟವನ್ನೂ ಬೆಂಬಲಿಸಿದ್ದರು. ಹಾಗೆಯೇ 1994ರಲ್ಲಿ ದೂರದ ರ್ಶನದಲ್ಲಿ ಉರ್ದು ವಾರ್ತಾ ವಾಚನ ವಿರುದ್ಧ ನಡೆದ ಹೋ ರಾಟದಲ್ಲೂ ಪಾಲ್ಗೊಂಡಿದ್ದರು. ಟಿಪ್ಪುಸುಲ್ತಾನ್ ಜಯಂತಿ ಆಚರಣೆಗೆ ಬಹಿರಂಗವಾಗಿಯೇ ವಿರೋಧಿಸಿದ್ದರು.
ರಾಷ್ಟ್ರವ್ಯಾಪಿ ಹಿರಿಮೆ: ಒಮ್ಮೆ ನಿಯೋಗದಲ್ಲಿ ದೆಹಲಿಗೆ ತೆರಳಿ ದ್ದಾಗ ಮಾಜಿ ಉಪಪ್ರಧಾನಿ ಎಲ್.ಕೆ.ಅಡ್ವಾಣಿಯವರು, “ಚಿದಾ ನಂದಮೂರ್ತಿ ನನ್ನ ಗೆಳೆಯರು’ ಎಂದು ಪ್ರೀತಿಯಿಂದ ಹೇಳಿದ್ದು;3 ವರ್ಷಗಳ ಹಿಂದೆ ನಿಯೋಗದಲ್ಲಿ ತೆರಳಿದ್ದ ಪ್ರಮುಖರಿಗೆ ಕೇಂದ್ರ ಗೃಹ ಸಚಿವೆ ಸ್ಮತಿ ಇರಾನಿ ಅವರು, “ಚಿದಾ ನಂದಮೂರ್ತಿ ನನ್ನ ಗುರು ಗಳು’ ಎಂದು ಗೌರವ ತೋರಿದ್ದನ್ನು ಆಪ್ತ ಬಳಗ ಸ್ಮರಿಸುತ್ತದೆ.
ಅಮಿತ್ ಶಾಗೆ ಸಲಹೆ: 2018ರ ರಾಜ್ಯ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವರಾದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಚಿದಾನಂದಮೂರ್ತಿ ಅವರ ನಿವಾಸಕ್ಕೆ ಭೇಟಿ ನೀಡಿ ಪಕ್ಷದ ಪ್ರಣಾಳಿಕೆ ರಚನೆ ಸಂಬಂಧ ಸಲಹೆ ನೀಡುವಂತೆ ಕೋರಿದ್ದರು. ಭೇಟಿ ಬಳಿಕ ಪ್ರತಿಕ್ರಿಯಿಸಿದ್ದ ಚಿದಾನಂದಮೂರ್ತಿ, “ನಾನು ಬಿಜೆಪಿ ಪ್ರಣಾಳಿಕೆ ಬಗ್ಗೆ ಏನೂ ಹೇಳಲಿಲ್ಲ. ಒಂದಿಷ್ಟು ಸಲಹೆ ನೀಡಿದ್ದೇನೆ.
ಬೆಳಗಾವಿ ಕರ್ನಾಟಕದಲ್ಲೇ ಉಳಿಯುವಂತೆ ಮಾಡಬೇಕು. ಕಾವೇರಿ, ಮಹದಾಯಿ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯವಾಗಬಾರದು, ಗೋಹತ್ಯೆ ನಿಷೇಧ ಕಾನೂನು ಜಾರಿಗೊಳಿಸಿ ಗೋವುಗಳನ್ನು ಸಂರಕ್ಷಿಸಬೇಕು ಎಂದು ಕೋರಿದ್ದೇನೆ ಎಂದು ಹೇಳಿದ್ದರು. ದಲಿತರ ಬಗ್ಗೆ ಕಾಳಜಿ ಹೊಂದಿದ್ದ ಅವರು ಅಂತರ್ಜಾತಿ ವಿವಾಹಕ್ಕೆ ಉತ್ತೇಜನ ನೀಡುತ್ತಿದ್ದರು. ಅವರ ಸಿದ್ಧಾಂತ ಅಂತಿಮ ವಿಧಿ ವಿಧಾನದಲ್ಲೂ ಮಾನವತೆಯ ದ್ಯೋತಕದಂತಿದೆ ಎಂದು ಕವಿ ಡಾ.ಸಿದ್ದಲಿಂಗಯ್ಯ ಹೇಳಿದರು.
ಸಿಎಎಗೆ ಬೆಂಬಲ: ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಗೊಳಿಸಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಯವರಿಗೆ ಅಭಿನಂದನೆ ಸಲ್ಲಿಸಿ ಚಿದಾ ನಂದಮೂರ್ತಿ ಅವರು ಕಳೆದ ಡಿ.28 ರಂದು ಪತ್ರ ಬರೆದಿದ್ದರು. ಕಾಯ್ದೆ ಜಾರಿ ಗೊಳಿಸಿರುವುದಕ್ಕೆ ಎಲ್ಲೋ ಕೆಲವು “ಸೆಕ್ಯುಲರಿಸ್ಟ್’ ರೆಂದು ಕರೆದು ಕೊಳ್ಳು ವವರನ್ನು ಬಿಟ್ಟರೆ ಬಹುತೇಕ ಎಲ್ಲರೂ ಸ್ವಾಗತಿಸಿದ್ದಾರೆ. ಆ ಕಾಯ್ದೆ ಖಂಡಿತವಾಗಿ ಮುಸ್ಲಿಂ ವಿರೋಧಿಯಲ್ಲ. ಅದು ಕೇವಲ ಹಿಂದೂ ಪರ ಅಲ್ಲ; ಎಲ್ಲ ಸತ್ಯನಿಷ್ಠರು, ದೇಶಪ್ರೇಮಿಗಳ ಪರ. ತಾವು ಅತ್ಯಂತ ದಿಟ್ಟವಾಗಿ ರಾಷ್ಟ್ರವನ್ನು ಮುನ್ನಡೆಸು ತ್ತಿದ್ದೀರಿ. ತಮ್ಮ ವಿವೇಕದ ಬಗ್ಗೆ ನನಗೆ, ನನ್ನಂತಹ ಹಲವರಿಗೆ ಪೂರ್ಣ ವಿಶ್ವಾಸ ವಿದೆ ಎಂದು ಪತ್ರದಲ್ಲಿ ತಿಳಿಸಿದ್ದರು.
* ಎಂ.ಕೀರ್ತಿಪ್ರಸಾದ್