Advertisement
ಮಹಿಳೆಯೊಬ್ಬರ ಗರ್ಭದಲ್ಲಿದ್ದ 7 ತಿಂಗಳ ಮಗುವಿಗೆ “ವೆನಸ್ ಆಫ್ ಗ್ಯಾಲೆನ್ ಮಾಲ್‌ಫಾರ್ಮೇಶನ್’ ಎಂಬ ಸಮಸ್ಯೆ ಎದುರಾಗಿತ್ತು. ಹೀಗೆಂದರೆ, ಮೆದುಳಿನಿಂದ ಹೃದಯಕ್ಕೆ ರಕ್ತವನ್ನು ತಲುಪಿಸುವ ನರವೊಂದು ಸರಿಯಾಗಿ ಬೆಳವಣಿಗೆ ಹೊಂದಿರಲಿಲ್ಲ. ಇದರಿಂದ ಮಗುವಿನ ಆರೋಗ್ಯದಲ್ಲಿ ಏರುಪೇರಾಗುತ್ತಿತ್ತು. ಅಲ್ಲದೇ, ಮಗು ಹುಟ್ಟಿದ ತಕ್ಷಣವೇ ಮೆದುಳಿನ ಸಮಸ್ಯೆಗೆ ಗುರಿಯಾಗುವ ಅಥವಾ ಹುಟ್ಟಿದ ಕೂಡಲೇ ಹೃದಯವೈಫಲ್ಯಕ್ಕೆ ತುತ್ತಾಗುವ ಸಾಧ್ಯತೆಗಳು ಹೇರಳವಾಗಿತ್ತು.ಈ ಹಿನ್ನೆಲೆ 34 ವಾರಗಳ ಗರ್ಭಾವಸ್ಥೆಯಲ್ಲಿರುವ ತಾಯಿಯ ಗರ್ಭದಲ್ಲಿರುವ ಮಗುವಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಅಲ್ಟ್ರಾಸೌಂಡ್ ಸಹಾಯದೊಂದಿಗೆ ಬ್ರಿಗಮ್ ವುಮೆನ್ಸ್ ಹಾಸ್ಪಿಟಲ್ ಹಾಗೂ ಬೋಸ್ಟನ್ ಚಿಲ್ಡ್ರನ್ಸ್ ಹಾಸ್ಪಿಟಲ್‌ನ ವೈದ್ಯರ ತಂಡ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿ, ಮಗುವಿನ ಮೆದುಳಿನ ಸಮಸ್ಯೆ ಸರಿಪಡಿಸಿವೆ ಎಂದು ಆಸ್ಪತ್ರೆಗಳ ಪ್ರಕಟಣೆಯಲ್ಲಿ ತಿಳಿಸಲಾಗಿದೆ.