Advertisement

Belagavi; ಬಿಮ್ಸ್‌ ಆಸ್ಪತ್ರೆಯಲ್ಲಿ ಮೂರು ತಿಂಗಳಲ್ಲಿ 41 ನವಜಾತ ಶಿಶುಗಳ ಸಾ*ವು

01:24 AM Oct 27, 2024 | Team Udayavani |

ಬೆಳಗಾವಿ: ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ (ಬಿಮ್ಸ್‌) ಆಸ್ಪತ್ರೆಯಲ್ಲಿ ಮೂರು ತಿಂಗಳಲ್ಲಿ 41 ನವಜಾತ ಶಿಶುಗಳು ಮೃತಪಟ್ಟಿವೆ. ಸಾವಿಗೆ ನಿಖರವಾದ ಕಾರಣ ಇನ್ನೂ ಹೊರಬಾರದಿದ್ದರೂ ಆಕ್ಸಿಜನ್‌ ಕಂಪ್ರಶರ್‌ ಕೊರತೆಯೇ ಕಾರಣ ಎಂಬ ಶಂಕೆಗಳಿವೆ.

Advertisement

ಈ ಬಗ್ಗೆ ಬಿಮ್ಸ್‌ ನಿರ್ದೇಶಕ ಡಾ| ಅಶೋಕ ಶೆಟ್ಟಿ ಪ್ರತಿಕ್ರಿಯಿಸಿ, ಈ ಆರೋಪವನ್ನು ಸ್ಪಷ್ಟವಾಗಿ ಅಲ್ಲಗಳೆದಿದ್ದಾರೆ. ಮೂರು ತಿಂಗಳಲ್ಲಿ 41 ಶಿಶುಗಳು ಮೃತಪಟ್ಟಿದ್ದು ನಿಜ. ನವಜಾತ ಶಿಶುಗಳ ಸಾವು ಬೇರೆ ಬೇರೆ ಕಾರಣಗಳಿಂದ ಆಗಿರಬಹುದು. ಹೆರಿಗೆ ವಿಭಾಗದಲ್ಲಿರುವ 2 ಏರ್‌ ಕಂಪ್ರಶರ್‌ ಪೈಕಿ ಒಂದು ಹಾಳಾಗಿದ್ದು, ದುರಸ್ತಿ ನಡೆಯುತ್ತಿದೆ.

ಆಕ್ಸಿಜನ್‌ ಲಭ್ಯವಾಗದೇ ಮೃತಪಟ್ಟಿವೆ ಎಂದು ಹೇಳಲು ಆಗಲ್ಲ. ಸಾವಿನ ಬಗ್ಗೆ ತನಿಖೆ ನಡೆಸಲಾಗುವುದು ಎಂದರು.
ಆಗಸ್ಟ್‌ನಲ್ಲಿ 12, ಸೆಪ್ಟಂಬರ್‌ನಲ್ಲಿ 18, ಅಕ್ಟೋಬರ್‌ನಲ್ಲಿ 11 ಸೇರಿ ಒಟ್ಟು 41 ಶಿಶುಗಳು ಮತಪಟ್ಟಿವೆ. ಅವಧಿ  ಪೂರ್ವ ಪ್ರಸವ, ಕಡಿಮೆ ತೂಕ, ಹೃದಯ ಸಮಸ್ಯೆ ಸೇರಿ ಇತರ ಸಮಸ್ಯೆಯಿಂದ ಶಿಶುಗಳ ಸಾವಾಗಿದೆ. ಏರ್‌ ಕಂಪ್ರಶರ್‌ 3 ತಿಂಗಳಿಂದ ದುರಸ್ತಿ ಆಗಿಲ್ಲ. ಇನ್ನೊಂದೆಡೆ ಬಿಮ್ಸ್‌ ಆಡಳಿತ ಮಂಡಳಿ ಸೆ. 4ರಂದು ಕಂಪ್ರಶರ್‌ ದರ ಕುರಿತು ಮಾಹಿತಿ ಪಡೆದಿದ್ದರೂ ಈವರೆಗೆ ಅದನ್ನು ಖರೀದಿಸಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next