Advertisement

ಮುಂದುವರಿದ ಪೌರ ಕಾರ್ಮಿಕರ ಧರಣಿ: ನಗರದಲ್ಲಿ ಕಸದ ರಾಶಿ

12:32 PM Feb 13, 2018 | Team Udayavani |

ಹುಣಸೂರು: ನಗರದಲ್ಲಿ ಗುತ್ತಿಗೆ ಪೌರಕಾರ್ಮಿಕರು ಸಂಬಳ ಬಾಕಿ ಹಾಗೂ ಖಾಯಂಗಾಗಿ ನಡೆಸುತ್ತಿರುವ ಧರಣಿ 6 ದಿನ ಪೂರೈಸಿದ್ದು,  ನಗರದ ಸ್ವತ್ಛತೆ ಅಸ್ತವ್ಯಸ್ತವಾಗಿದ್ದು, ಸ್ವತ್ಛಭಾರತ್‌ ಪರಿಕಲ್ಪನೆ ಹಳ್ಳಹಿಡಿಯುತ್ತಿದೆ. ನಗರಸಭೆ ಕಚೇರಿ ಎದುರು ಧರಣಿ ನಡೆಸುತ್ತಿರುವ 70ಕ್ಕೂ ಹೆಚ್ಚು ಮಂದಿ ಗುತ್ತಿಗೆ ಪೌರ ಕಾರ್ಮಿಕರು ಬೇಕೇ ಬೇಕು-ಬಾಕಿಸಂಬಳಬೇಕು, ಖಾಯಂ ಮಾಡಬೇಕೆಂಬ ಘೋಷಣೆ ಮೊಳಗಿಸಿದರು.

Advertisement

ಅಲ್ಲದೆ ನ್ಯಾಯಯುತವಾಗಿ ಬರಬೇಕಾದ ಸವಲತ್ತುಗಳನ್ನು ಕಲ್ಪಿಸಲು ಒತ್ತಾಯಿಸಿದ ಸಂಘದ ಅಧ್ಯಕ್ಷ ಮುರುಗೇಶ್‌ ಬೇಡಿಕೆ ಈಡೇರುವವರೆಗೆ ಪ್ರತಿಭಟನೆ ಮುಂದುವರೆಯಲಿದೆ ಎಂದು ತಿಳಿಸಿದರು. ಧರಣಿಯಲ್ಲಿ ಸಂಘದ ರಾಮು, ಕೃಷ್ಣ, ದಾಮು ಸೇರಿದಂತೆ ಅನೇಕರು ಭಾಗವಹಿಸಿದ್ದಾರೆ. ಧರಣಿ ನಿರತರಿಗೆ ಕೆಲ ನಗರಸಭಾ ಸದಸ್ಯರು ಬೆಂಬಲ ವ್ಯಕ್ತಪಡಿಸಿದ್ದಾರೆ.

ಎಲ್ಲೆಲ್ಲೂ ಕಸ: ಖಾಯಂ ಪೌರಕಾರ್ಮಿಕರು 27 ಮಂದಿ ಮಾತ್ರ ಇದ್ದು, ಇವರೊಂದಿಗೆ ಗುತ್ತಿಗೆ ಪೌರಕಾರ್ಮಿಕರು ಸೇರಿ ಇಡೀ ನಗರವನ್ನು ಹಗಲು ರಾತ್ರಿ ಎನ್ನದೆ ಸ್ವತ್ಛಗೊಳಿಸುತ್ತಿದ್ದುದರಿಂದ ಇಡೀ ನಗರ ಸ್ವತ್ಛವಾಗಿತ್ತು. ಆದರೆ, ಧರಣಿಯಿಂದಾಗಿ ನಗರದ ಬಹುತೇಕ ಪ್ರದೇಶದಲ್ಲಿ  ಕಸ ಗುಡ್ಡೆಗಳು ಹಾಗೇ ಇದ್ದು, ದುರ್ನಾತ ಬೀರುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next